“ನಿನಗೆ ಎಷ್ಟು ಒಂಟೆಗಳು ಬೇಕಾಗಿರುವುದು?”
ನಾನೊಂದು ಉತ್ತಮ ಅಭಿರುಚಿಯಿಂದ ವಿನ್ಯಾಸಗೊಳಸಿದ್ದ ಫೋರ್ ಸೀಜ಼ನ್ಸ್ ಎಂಬ ಹೋಟೆಲ್ನಲ್ಲಿ ಕುಳಿತಿದ್ದೆ. ಸೌದಿ ಅರೇಬಿಯಾದಲ್ಲಿ ಸರಕಿನ ಒಂಟೆಗಳನ್ನು ಕೊಳ್ಳಲು, ಸಣ್ಣ ನಡುವಿನ ಪರಿಚಾರಿಕೆಯರಿದ್ದ, ಹೊಳೆಯುತ್ತಿದ್ದ ಅಮೃತಶಿಲೆಯ, ಕುಸುರೀ ಕೆಲಸದ ಗಾಜಿನ ಅಲಂಕಾರಗಳಿದ್ದ ಕಾಫಿ ಹೋಟೆಲ್ನಲ್ಲಿ ಜನರ ಜೊತೆ ಸಭೆ ನಡೆಸಬೇಕೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ ಆಫ್ರಿಕಾದಲ್ಲಿ ಒಂಟೆಗಳನ್ನು ಕೊಳ್ಳಲು ಬೆವರಿಳಿಸಬೇಕಾಗಿತ್ತು. ಅಫಾರ್ ಅಲೆಮಾರಿಗಳ ಗುಡಿಸಲಿನಲ್ಲಿ (ಹೊಗೆ ತುಂಬಿದ್ದ ಅಡಿಗೆ ಕೋಣೆಯಲ್ಲಿ ಅಥವ ಗುಡಿಸಿಲಿನ ಹೊರಗಡೆ) ಕುಕ್ಕರಗಾಲಿನಲ್ಲಿ ಕುಳಿತು ಪ್ರಾಣಿಗಳ ಜೊತೆ ಅವಿನಾಭಾವ ಆಧ್ಯಾತ್ಮಿಕ ಸಂಬಂಧ ಹೊಂದಿರುವ ಅಲೆಮಾರಿಗಳ ಜೊತೆ ಮಾತುಕತೆಯಾಡಬೇಕು. ಮೊದಮೊದಲು ಅವರು ("ಇವೆಲ್ಲಾ ನನ್ನ ಕುಟುಂಬವಿದ್ದಂತೆ! ನಾನು ಅವುಗಳನ್ನು ಎಂದಿಗೂ ಮಾರುವುದಿಲ್ಲ!") ಎನ್ನುತ್ತಾರೆ.ನಾವಾಗ ಒಂಟೆಗಳನ್ನು ಮಾಂಸಕ್ಕೇನು ಖರೀದಿ ಮಾಡುತ್ತಿಲ್ಲ ಎಂದು ತೋರ್ಪಡಿಸಿಕೊಳ್ಳಬೇಕು; ಬರೀ ಹೇನುಗಳೇ ತುಂಬಿದ, ಚರ್ಮದ ಚೀಲದೊಳಗೆ ಮೂಳೆಗಳೇ ತುಂಬಿರುವಂತಹ ಒಂಟೆಗಳನ್ನು ಯಾರು ಮಾಂಸಕ್ಕಾಗಿ ಖರೀದಿಸುತ್ತಾರೆ? ನೀವು ಎರಡು ಇಥಿಯೋಪಿಯನ್ ಬಿರ್ಗಳನ್ನು ಉಜ್ಜದಿದ್ದರೆ - ಒಂಟೆಗಳನ್ನು ಕೊಳ್ಳುವ ಚೌಕಾಸೀ ವ್ಯಾಪಾರ ಶುರುವಾಗುತ್ತದೆ.
ಆದರೆ ಸೌದಿ ಅರೇಬಿಯಾದ ಒಂಟೆ ವ್ಯಾಪಾರದ ಬಗ್ಗೆ ನನಗೇನೂ ಅರಿವಿರಲಿಲ್ಲ: ಮುಗ್ಧ, ಹಳೆಕಾಲದವನಂತೆ, ಪ್ರಾಪಂಚಿಕ ಜ್ಞಾನವೇ ಇಲ್ಲದಂತಿದ್ದೆ. ಫೋರ್ ಸೀಜ಼ನ್ಸ್ ಹೋಟೇಲಿನ ಒಳಗೆ ಕಪ್ಪುಮೆರುಗಿನ ಮೇಜಿನ ಮೇಲೆ ಚೀನಾ ಬೊಗುಣಿಯಲ್ಲಿದ್ದ ಫ್ರೆಂಚ್ ಟ್ರಫಲ್ಸ್ ತಿಂಡಿಯನ್ನು ಕುರುಕುತ್ತಾ ಸರಕಿನ ಒಂಟೆಯ ಅನ್ವೇಷಣೆ ಆರಂಭಿಸಿದ್ದೆ. ವಾಣಿಜ್ಯೋದ್ಯಮಿಗಳು ಮತ್ತು ಮುಖಂಡರು ಆದಂತ ನನ್ನ ಸ್ನೇಹಿತರು ಫೇರ್ಸ್ ಬಗ್ಶಾನ್ ಮತ್ತು ಸೀಮಾ ಖಾನ್ ಅಲ್ಲಿದ್ದರು. ನನ್ನನ್ನು ಅಲ್ಲಿ ಸ್ಥಳೀಯ ಶಾಲೆಗಳಲ್ಲಿ ವಿದ್ಯೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಲು ಕರೆಸಿದ್ದರು.( ನಾನು ಸ್ಠಳೀಯ ಶಾಲೆಗಳಲ್ಲಿ ಮಾತನಾಡುತ್ತೇನೆ.) ಅವರ ಜೊತೆ ಅನೌಪಚಾರಿಕವಾಗಿ ಚರ್ಚಿಸುತ್ತಾ ಈ ಮುಂದುವರೆದ ಸೌದಿ ಅರೇಬಿಯಾದಲ್ಲಿ ಬೆಡೂಯಿನ್ ಬುಡಕಟ್ಟಿನವರ ಒಳನಾಡಿನಲ್ಲಿ ಸರಕು ಸಾಗಿಸಲು ಬೇಕಾದ ಒಂಟೆಯನ್ನು ಖರೀದಿಸಲು ಎಷ್ಟು ತೊಂದರೆಯಾಗಿದೆ ಎಂದು ತಿಳಿಸಿದೆ. ವಿಷಯದ ಪ್ರಾಮುಖ್ಯತೆ ಅರ್ಥೈಸಿಕೊಂಡ ಸೀಮಾ ತಾನು ಕುಡಿಯುತ್ತಿದ್ದ ಚಹ ಕಪ್ಪನ್ನು ಕೆಳಗಿಟ್ಟಳು, ನೋಟ್ಪ್ಯಾಡ್ಅನ್ನು ಹೊರತೆಗೆದಳು. ಪೆನ್ನನ್ನು ಕ್ಲಿಕ್ಕಿಸುತ್ತ ಕೇಳಿದಳು: “ಎಷ್ಟು ಒಂಟೆಗಳು ಬೇಕಾಗಿದೆ?”
“ಸರಿ, ಎರಡು.”
“ಅಷ್ಟೇ ಸಾಕಾ?”
“ಗಂಡು ಒಂಟೆಗಳು.”
“ಎರಡು ಗಂಡು ಒಂಟೆಗಳು.” ಎನ್ನುತ್ತಾ ಗುರುತು ಮಾಡಿಕೊಂಡಳು. “ಆಯ್ತು, ಇನ್ನೇನಾದರೂ?”
“ಐದರಿಂದ ಏಳುವರ್ಷಗಳಾಗಿದ್ದರೆ ಒಳ್ಳೆಯದು.”
“ಐದರಿಂದ ಏಳು. ಆಯ್ತು."
"ನಾನು ಒಂದಕ್ಕೆ 2,500 ರಿಯಾಲ್ಗಳಿಗಿಂತ ಹೆಚ್ಚು ಕೊಡಲು ಸಾಧ್ಯವಿಲ್ಲ.”
“ಎರಡು ಸಾವಿರದ ಐನೂರು” ಸೀಮಾ ತಲೆಯಾಡಿಸಿದಳು. “ಸರಿ. ಅಷ್ಟೇನಾ? ನನಗೂ ಒಂಟೆಗಳ ಬಗ್ಗೆ ಹೆಚ್ಚಿನ ಅರಿವಿಲ್ಲ.”
“ಸರಿ, ಬೀಜ ಒಡೆದಿದ್ದರೆ ಅನುಕೂಲ”
“ಓಹ್ ಆಯ್ತು. ಬೀಜ ಒಡೆದಿರುವುದು. ಹಾಗೇ ಆಗಲಿ”
“ಧನ್ಯವಾದ, ಸೀಮಾ.”
“ಸ್ವಾಗತ, ಪಾಲ್.”
Slow sipping: tea and haggling over camels in Jeddah.
Paul Salopek
ಕೆಲದಿನಗಳನಂತರ, ನಾ ಎರಡು ಗಂಡು ಒಂಟೆಗಳನ್ನು ಕೊಂಡುಕೊಂಡೆ, ಐದರಿಂದ ಏಳು ವರ್ಷದವು. ಸೌದಿ ಅರೇಬಿಯಾದಿಂದ ನನ್ನ ಜೊತೆ ಹೊರನಡೆಯಲು. ಸಮುದ್ರ ತೀರದ ಜೆಡ್ಡಾ ಎಂಬ ಪಟ್ಟಣದ ಜಾನುವಾರು ಸಂತೆಯಲ್ಲಿ ಇವುಗಳನ್ನು ನನಗಾಗಿ ಫೇರ್ಸ್ ಮತ್ತು ಸೀಮಾ ಕೊಂಡುಕೊಂಡರು. ಈ ಸಂತೆ ಅರೇಬಿಯಾ ಪರ್ಯಾಯ ದ್ವೀಪದ ನನ್ನ ನಡಿಗೆ ಆರಂಭಿಸುವ ಸ್ಥಳದ ಹತ್ತಿರವೇ ಇತ್ತು. ಸಗಣಿ, ಧೂಳು, ಸಂತೆಯ ಗೌಜು ಗದ್ದಲ ಕೇಳಿಬರುತ್ತಿದ್ದಂತೆ ನನ್ನ ಮನಸ್ಸು ಆಫ್ರಿಕಾಗೆ ಹಿಂತಿರುಗಿತ್ತು. ಇವೆಲ್ಲವೂ ಪರಿಚಿತವೆಂದೆನಿಸಿತು. ಮಾರುವವರು ಮಂಕು ಬಡಿದಂತಿದ್ದ ಸುಡಾನಿಗಳು. ಗುಡಾರದ ಒಳಗೆ ಚೌಕಾಸಿ ಶುರುವಾಯಿತು. ವ್ಯಾಪಾರ ಮುಗಿಯುವುದರ ಹೊತ್ತಿಗೆ ಹದಿನಾಲ್ಕು ಲೋಟ ಚಹಾವನ್ನು ಕುಡಿದಿದ್ದೆವು. (ನನ್ನ ಕೆಲಸಕ್ಕೋಸ್ಕರ ಆ ಒಂಟೆಗಳನ್ನು ಕೊಂಡುಕೊಂಡು ಅವುಗಳ ಜೀವ ಉಳಿಸಿದ್ದೆ. ನೇಫಡ್ ಮರುಭೂಮಿಯಲ್ಲಿ ನಮ್ಮ ಸರಕುಗಳನ್ನು ಸಾಗಿಸುವುದು ಅವುಗಳ ಹಣೆಯಲ್ಲಿ ಬರೆದ ಅದೃಷ್ಟದ ವಿಚಾರ, ಏಕೆಂದರೆ ಅವುಗಳನ್ನು ಖಸಾಯಿಖಾನೆಗೆ ಕಳಿಸಲು ಹಳದಿ ಬಣ್ಣದಿಂದ ಗುರುತು ಮಾಡಿದ್ದರು) ಮರುದಿನ ಈ ಸಂತೋಷವನ್ನು ಆಚರಿಸಲು ನಾನು ಜೆಡ್ಡಾನಗರದ ಮೇಲೆ ಗೈರೋಕಾಪ್ಟರಿನಲ್ಲಿ ಹಾರಾಡಿದೆ.
ಗೈರೋಕಾಪ್ಟರ್ ಎಂದರೇನು? ಸಾಮಾನ್ಯವಾಗಿ ಕೇಳುವ ಪ್ರಶ್ನೆ.
ವಿಮಾನ ಮತ್ತು ಹೆಲಿಕಾಪ್ಟರ್ನ ಮಿಶ್ರ ತಳಿಯೇ ಗೈರೋಕಾಪ್ಟರ್. ಇಂತಹ ಯಂತ್ರಗಳು ಇನ್ನೂ ಅಸ್ತಿತ್ವದಲ್ಲಿದೆ ಎಂದು ನನಗೆ ತಿಳಿದಿರಲಿಲ್ಲ. (ಅಮೇಲಿಯಾ ಇಯರ್ ಹಾರ್ಟ್ ಇಂತಹುದೇ ಒಂದು ಗೈರೋಕಾಪ್ಟರ್ನ ಬಳಿ ನಿಂತಿದ್ದ ಒಂದು ಛಾಯಾ ಚಿತ್ರ ನನ್ನ ಮನಸ್ಸಿನ ಮೂಲೆಯಲ್ಲಿತ್ತು.) ಜೆಡ್ಡಾದಲ್ಲೊಂದು ಗೈರೋಕಾಪ್ಟರ್ ಒಕ್ಕೂಟವಿದೆ. ಜರ್ಮನಿಯಲ್ಲಿ ತಯಾರಾಗುವ ಈ ಅತ್ಯಾಧುನಿಕ ವಿಮಾನಗಳನ್ನು ಹಾರಿಸುತ್ತಾರೆ. ಈ ಒಕ್ಕೂಟವನ್ನು ನಡೆಸುತ್ತಿರುವುದು ನನ್ನ ಸ್ನೇಹಿತ, ಕರ್ನಲ್ ಡಾಕ್ಟರ್ ಮುಬಾರಕ್ ಸ್ವಿಲಿಮ್ ಆಲ್ ಸ್ವಿಲಿಮ್. ಮುಬಾರಕ್ ಅರಬ್ ಏರ್ ಸ್ಪೋರ್ಟ್ಸ್ ಫೆಡರೇಶನ್ ನ ಉಪಾಧ್ಯಕ್ಷ ಮತ್ತು ಇಸ್ಲಾಮಿಕ್ ದೇಶಗಳ ಪ್ಯಾರಾಚೂಟಿಂಗ್ ಚಾಂಪಿಯನ್ ಸಹ. ಉತ್ತರ ಧ್ರುವದ ಮೇಲೆ ಪ್ಯಾರಾಚೂಟ್ನಲ್ಲಿ ಇಳಿದ ಇಬ್ಬರು ಸೌದಿಗಳಲ್ಲಿ ಈತನೂ ಒಬ್ಬ.(ಅವನನ್ನು ಕೇಳಿದೆ ತುಂಬಾ ಚಳಿಯಿತ್ತ? ಆತ ಇಲ್ಲಾ,ಇಲ್ಲಾ, ಎಂದ: ಅಲ್ಲಿಗೆಂದೇ ವಿನ್ಯಾಸಗೊಳಿಸಿದ್ದ ಉಷ್ಣ ಉಡುಪನ್ನು ಧರಿಸಿಕೊಂಡು ಧ್ರುವ ಪ್ರದೇಶದ ಚಳಿಯಲ್ಲೂ ಬೆವರುತ್ತಿದ್ದನಂತೆ.)
Amelia Earhart’s Beech-Nut Autogyro arrives in Denver, Colorado, June 3, 1931.
Harry M. Rhoads
"ನಿನ್ನ ಮುಂದಿನ ಪ್ರಯಾಣದ ದಾರಿಯನ್ನು ಒಂದು ಸಲ ನೋಡುವುದು ವಾಸಿ" ಎಂದ ಮುಬಾರಕ್. "ಸೌದಿ ಅರೇಬಿಯಾದ ಹೊರಗೆ ಬಹುಕಾಲದಿಂದ ಯಾರೂ ನಡೆದಿಲ್ಲ."
ಇದಂತೂ ತಳ್ಳಿ ಹಾಕಲಾಗದ ಸತ್ಯ. ಕಿವಿಗಳಿಗೆ ಜೆಲ್ ತುಂಬಿದ ಕಿವಿಮುಚ್ಚುಳಗಳನ್ನು ಸಿಕ್ಕಿಸಿಕೊಂಡು ಜೆಡ್ಡಾದ ಮೇಲೆ ಗೈರೋಕಾಪ್ಟರ್ನಲ್ಲಿ ಹಾರಿದೆ.
ಸೌದಿ ಅರೇಬಿಯಾ ಬಹಳವಿಸ್ತಾರವಾದ ಹಾಗೂ ಅಷ್ಟೇ ಸಂಕೀರ್ಣ ದೇಶ. ಅತ್ಯಾಧುನಿಕ ಹಾಗೂ ಪುರಾತನ. ಸಾಂಪ್ರದಾಯಿಕ ಹಾಗೂ ಪ್ರಯೋಗಾತ್ಮಕ. ಇದರ ಪುರಾತತ್ವ ಶಾಸ್ತ್ರ ಸಹ ಆಳವಾದದ್ದು - ಮೊದಲ ಹೋಮೋ ಸೆಪೀಯನ್ ಮಾನವರು ಆಫ್ರಿಕಾದಿಂದ ವಲಸೆ ಮುಂದುವರೆಸಿದಾಗ ಆರಂಭವಾದದ್ದು - ಮತ್ತು ಇನ್ನೂ, ಮರುಭೂಮಿಯ ಗಾಳಿಯಲ್ಲಿ ಇದರ ಭೂತಕಾಲ ಮತ್ತು ವರ್ತಮಾನ ಕಾಲವನ್ನು ಅನುಭವಿಸಬಹುದು: ಅವು ಸ್ಪರ್ಶಿಸುತ್ತವೆ. ಇಲ್ಲಿ ನೀವು ಒಂದೇ ದಿನದಲ್ಲಿ ಹಲವಾರು ಶತಮಾನಗಳನ್ನು ದಾಟಬಹುದು.
ನನ್ನ ಮಧ್ಯಪ್ರಾಚ್ಯದ ಯೋಜನಾ ದಾರಿಯಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪ ವಿನ್ಯಾಸಗಳನ್ನೊಳಗೊಂಡ ಸಣ್ಣ ಪಟ್ಟಣಗಳ ಜೊತೆ ಎರಡು ದಶಲಕ್ಷ ಜನಸಂಖ್ಯೆಗೆ ಶತಕೋಟಿ ಡಾಲರ್ಗಳ ಅತ್ಯಾಧುನಿಕ ನಗರಗಳನ್ನು ನಿರ್ಮಿಸಿದ್ದಾರೆ. ಮಹಾರಾಜರುಗಳ ಜೊತೆ ಅವರ ಪರಿವಾರ ಮತ್ತು ಅಲಂಕರಿಸಿದ ಹದಿನೈದು ಸಾವಿರ ಒಂಟೆಗಳು ಓಡಾಡುತ್ತಿದ್ದ ಪುರಾತನ ಹಜ್ ದಾರಿಯಲ್ಲಿ ಈಗ ಅತಿ ವೇಗದ ರೈಲು ದಾರಿಗಳನ್ನು ನಿರ್ಮಿಸಿದ್ದಾರೆ. ನನ್ನ ದಾರಿಯಲ್ಲಿದ್ದ ವಿಶ್ವವಿದ್ಯಾನಿಲಯದೊಳಗಿಂದ ಉನ್ನತ ಮಟ್ಟದ ಡಿ ಎನ್ ಏ ಅನುಕ್ರಮ ಯಂತ್ರಗಳು ಮೊರೆಯುತ್ತಿದ್ದವು. ಹಳೇ ಜೆಡ್ಡಾ ಪಟ್ಟಣದ ಹತ್ತಿರ ಬರುತ್ತಿದ್ದಂತೆ ಮೂವತ್ತಾರು ವಿವಿಧ ಮಸೀದಿಗಳಿಂದ ಬರುತ್ತಿದ್ದ ದೇವರ ಪ್ರಾರ್ಥನೆ ಸಂಜೆಯಲ್ಲಿ ಕಿವಿಗೆ ಸುಶ್ರ್ಯಾವವಾಗಿ ಕೇಳುತ್ತಿತ್ತು - ಇದು ಇನ್ನೊಂದು ರೀತಿಯ ಮೊರೆಯುವಿಕೆ. ಮತ್ತು, ಇದರೊಂದಿಗೆ ತೈಲ ಕೊಳವೆ ದಾರಿಗಳು ಅಲ್ಲಿದ್ದವು. 900 ಮೈಲಿಯ ಅರೇಬಿಯಾ ಸಾಮ್ರಾಜ್ಯದ ಪಾದಯಾತ್ರೆಯಲ್ಲಿ ಇಂತಹ ಹಲವನ್ನು ದಾಟುವೆನು. ಬಂದರಿನಲ್ಲಿ ಬಾಯ್ದೆರೆದು ನಿಂತಿದ್ದ ಹಡಗುಗಳಿಗೆ, ಪ್ರಪಂಚ ಉಪಯೋಗಿಸುವ ಕಾಲುಭಾಗದಷ್ಟು ತೈಲವನ್ನು ಈ ಕೊಳವೆ ದಾರಿಗಳು ಸಾಗಿಸುತ್ತಿದ್ದವು: ಇದೇನು ವರವೋ - ಅಥವ ಶಾಪವೋ ತಿಳಿಯದು - ಯಾವ ದಿನ, ಯಾವ ಸೌದಿ ಪ್ರಜೆ ಮತ್ತು ಅಂದಿನ ಅವನ ಮನಸ್ಥಿತಿಯ ಮೇಲೆ ನಿರ್ಧಾರವಾಗುವುದು.
An instructor with the Jeddah gyrocopter club steers north for the open desert.
Paul Salopek
ನನ್ನ ಒಂಟೆ ಕಾರಾವನ್ ಬಗ್ಗೆ ತಿಳಿದುಕೊಂಡಿದ್ದ ಗೈರೋಕಾಪ್ಟರ್ ಹಾರಿಸುತ್ತಿದ್ದ ಸ್ನೇಹ ಜೀವಿ ಯುವ ವಿಮಾನಚಾಲಕ ಹೇಳಿದ “ನಮ್ಮ ಭೂತ ಕಾಲವನ್ನು ನೆನಪಿಗೆ ತರುತ್ತಿದ್ದೀಯ”.
ನಾನು ಅವನಿಗೆ ವಂದಿಸುತ್ತಾ ನಕ್ಕೆ. ಆತ ನನಗಿಂತ ಮೂರು ತಲೆಮಾರಿನಷ್ಟು ಚಿಕ್ಕವನು, ಕನಿಷ್ಠಪಕ್ಷ, ಆತ ಏನನ್ನು ನೆನಪಿಸಿಕೊಳ್ಳುತ್ತಿದ್ದಾನೆ ಎಂದು ಯೋಚಿಸುವುದನ್ನು ನೆನಪು ಮಾಡಿಕೊಳ್ಳಲು. ಆದರೂ ಸಹ (ನಾ ಅವನಿಗೆ ಹೇಳಬೇಕು) ನಮಗಿಬ್ಬರಿಗೂ ಒಂದು ರೀತಿಯ ಸಂಬಂಧವಿದೆ. ಒಂಟೆಗಳು ಉತ್ತರ ಅಮೇರಿಕಾದ ಪ್ರಾಣಿಗಳು. ಇಂದಿನ ಕೆನಡಾ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಶೀತಭೂವಲಯದಲ್ಲಿ 40 ದಶಲಕ್ಷ ವರ್ಷಗಳ ಹಿಂದೆ ವಿಕಾಸಗೊಂಡ ಸಸ್ಥನಿಗಳು. ಪಳೆಯುಳಿಕೆ ದಾಖಲೆಗಳ ಪ್ರಕಾರ ಪಶ್ಚಿಮಕ್ಕೆ ಬೇರಿಂಗ್ ಕೊಲ್ಲಿಯ ನೆಲಸೇತುವೆಗಳ ಮುಖಾಂತರ ಯುರೇಷಿಯ, ನಂತರ ಅರೇಬಿಯಾಕ್ಕೆ ವಲಸೆ ಬಂದಿವೆ, ಪೂರ್ವದೆಡೆ ಪಸರಿಸುತ್ತಿದ್ದ ಅಂದಿನ ಮಾನವನ ಉದಯುಬ್ಬರದ ಎದುರು.10,000 ವರ್ಷಗಳ ಹಿಂದೆ ಹೊಸ ಪ್ರಪಂಚವನ್ನು ಅನ್ವೇಷಿಸುತ್ತಿದ್ದ ಪುರಾತನ ಮಾನವರು ಅವುಗಳನ್ನು ಬೇಟೆಯಾಡಿ ನಿರ್ಮೂಲಗೊಳಿಸಿದ್ದಾರೆ. ಈ ಮಾನವರು ನಡೆದ ಹೆಜ್ಜೆ ಗುರುತಿನ ಜಾಡನ್ನೇ ನಾನೀಗ ಅನುಸರಿಸುತ್ತಿರುವುದು.
“ನಿನ್ನ ಅವರೆಡು ಒಂಟೆಗಳ' ಹೆಸರೇನು?” ವಿಮಾನಚಾಲಕ ಕೇಳಿದ.
ಪ್ರಕಾಶಮಾನವಾದ ಅನಂತ ಬೆಳಕನ್ನು ದೃಷ್ಟಿಸಿದ ಪರಿಣಾಮ, ನನ್ನ ತಲೆ ಗಿರಕಿ ಹೊಡೆಯುತ್ತಿತ್ತು.
“ಫೇರ್ಸ್,” ಎಂದು ಹೇಳಿದೆ. “ಫೇರ್ಸ್ ಮತ್ತು ಸೀಮಾ.”
Fares (left), Seema (right).
Paul Salopek
