ಬನೋನ ಮುಂದೆ ನಡೆಯಲಾರ. ನಡೆಯುವಾಗ ಉಪಯೋಗಿಸುವ ಕೈಕೋಲನ್ನು ಮಡಿಸಿಟ್ಟ. ತನ್ನ ಬೋನಿ ಕ್ಯಾಪನ್ನು ತೆಗೆದಿಟ್ಟಿದ್ದಾಯ್ತು.
ಅವನು ಜೋರ್ಡೇನಿಯನ್ ಗಡಿಯ ತನಕ ನಮ್ಮ ಜೊತೆ ನಡೆಯುವುದಿಲ್ಲ. ಶಾಮ್ನಿಂದ ಆರಂಭವಾಗುವ ಪುರಾತನ ಹಜ್ ದಾರಿಯನ್ನೂ ಹಿಂಬಾಲಿಸುವುದಿಲ್ಲ ಅಥವ ಬೆಂಕಿಯಂತ ಬೆಟ್ಟಗಳ ಮೇಲಿನ ಓಟ್ಟೊಮನ್ ಕೋಟೆಗಳ ಕುಸಿಯುತ್ತಿರುವ ಅವಶೇಷಗಳನ್ನು ನೋಡಲಾರ - ಕೋಟೆಕೊತ್ತಲುಗಳು ಮಧ್ಯೆ ನುಸುಳುವ ಬಿಸಿ ಗಾಳಿಯನ್ನು ಬಿಟ್ಟು ಬೇರೇನನ್ನು ರಕ್ಷಿಸಲು ಅನರ್ಹವಾಗಿವೆ. ಈ ಮಾರುತಗಳು ಕುದಿಯುತ್ತಿರುವ ಬಯಲಿನಲ್ಲಿ ದೆವ್ವದಂತೆ ತಿರುಗುತ್ತಿರುವ ಧೂಳಿನ ಕಂಬಗಳನ್ನು ಸೃಷ್ಟಿಸಿ ಕಳುಹಿಸುತ್ತಿವೆ. ಈ ಸುಂಟರಗಾಳಿಯನ್ನು ಕೆಲವರು ಜಿನ್ಗಳೆಂದು ಕರೆಯುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಮಿರುಗುವ ಬೆಂಕಿಯ ಬಣ್ಣದಲ್ಲಿ ಅದ್ದಿದಂತ ಮೋಡಗಳು ನೆಬೆಷಿಯನ್ನರ ಗೋಪುರಗಳನ್ನು ಬೆಳಗಿಸುವಾಗ ಅಲ್ಲಿರುವ ಕಲ್ಲಿನ ನಾಲೆಗಳನ್ನು ದಾಟಲಾರ. ಕೆಂಪು ಸಮುದ್ರವನ್ನು ಸೀಳಿ ಅರೇಬಿಯಾದ ತೀರಗಳಿಗೆ ಮೋಸೆಸ್ ನಡೆದ ದಾರಿಯಲ್ಲಿ ನಡೆಯಲಾರ.
ಮೊಹಮ್ಮದ್ ಬನೋನ, ನನ್ನ ಸ್ನೇಹಿತ ಮತ್ತು ಸೌದಿ ಮಾರ್ಗದರ್ಶಕ, ಮೊದಲು ತನ್ನ ದೇಹದ ಮೇಲಾಗಿದ್ದ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ತೊಂದರೆಗಳಿಂದ ತುರ್ತು ಚಿಕಿತ್ಸಾಘಟಕದಲ್ಲಿ ಮಲಗಬೇಕಾಯಿತು. ಹರ್ನಿಯಾ ಸಮಸ್ಯೆಯಲ್ಲೂ ಆತ 240 ಮೈಲಿಗಳಷ್ಟು ನಡೆದಿದ್ದ.
"‘ಅದ್ಹೇಗೆ ಸಾಧ್ಯವಾಯಿತು ಇವನಿಗೆ ಇಷ್ಟುದೂರ ನಡೆಯಲು" ಎಂದು ಆಸ್ಪತ್ರೆಯಲ್ಲಿದ್ದ ಈಜಿಪ್ಷಿಯನ್ ವೈದ್ಯ ಮೆಚ್ಚುಗೆ ವ್ಯಕ್ತ ಪಡಿಸಿದ. "ಈತ ಸಾಕಷ್ಟು ನೋವು ಅನುಭವಿಸಿದ್ದಾನೆ.ಇದೇನೂ ಸಾಧಾರಣ ವಿಷಯವಲ್ಲ."
ಬನೋನ ಒಬ್ಬ ಮಾಜಿ ಸೈನಿಕ, ಕಷ್ಟಗಳನ್ನು ಎದುರಿಸಲು ತರಬೇತಿ ಹೊಂದಿದವನು. ಈ ಬಾರಿಯಂತೂ ತೀವ್ರ ಅಪಾಯಕಾರಿ ಮಟ್ಟ ತಲುಪಿದ್ದ. (ಯಾವಾಗಿಲ್ಲ?) ಈ ಚಾರಣ, ಈ ವಿಚಿತ್ರ ಪ್ರಯಾಣ, ಎಂದೂ ಮುಗಿಯದ ಈ ನಡಿಗೆ ಪರಿಚಿತ ಜಾಗದಲ್ಲೆ ಸುತ್ತುತ್ತಾ, ವಿಷಣ್ಣತೆಯ, ನಿರುತ್ಸಾಹಗೊಳಿಸುವಂತಹ ಸ್ಥಳ, ಹೊಸಹೊಸ ಸ್ನೇಹಿತರನ್ನು ಗಳಿಸುತ್ತಾ ಮತ್ತು ಹಿಂಬಿಟ್ಟು ನಡೆಯುತ್ತಾ ಆತ್ಮೀಯರನ್ನು ಬೀಳ್ಕೊಟ್ಟು: ದಿಗಂತದಲ್ಲಿ ಕಾಣುವವರಿಗೆ ಕೈ ಎತ್ತಿ ವಂದನೆ ಸಲ್ಲಿಸುತ್ತಾ. "ನಾವೊಂದು ಉತ್ತಮ ತಂಡ". ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದ ಬನೋನ ನನ್ನ ಕೈ ಬಿಗಿಯಾಗಿ ಹಿಡಿದು, ಗದ್ಗದಿತನಾಗಿ ಕೇಳಿದ, "ಹೌದು ತಾನೆ?"
ನಾ ಏನ ಹೇಳಲಿ ಇವನ ಬಗ್ಗೆ?
ಅವನ ಉಲ್ಪಣಗೊಂಡ ಅನಾರೋಗ್ಯ ಸ್ಥಿತಿಗೆ ಅವನ ನಗುವೆ ಕಾರಣವೆ? (ಏನೆಂದರೆ ಹಿಂದಿನ ಶಸ್ತ್ರ ಚಿಕಿತ್ಸೆಯಲ್ಲಿ ಹಾಕಿದ ಹೊಲಿಗೆಗಳು ಬನೋನ ಹೊಟ್ಟೆ ಬಿರಿಯ ನಗೆಗೆ ವಾಸಿಯಾಗದೇನೆ ಕೂಡಿಕೊಳ್ಳದೇ ಇರುವುದು.)
Banounah in action: telling stories at a herder’s camp near Rabigh.
Paul Salopek
ಅಥವಾ ನಶಿಸಿಹೋಗುತ್ತಿರುವ ಬೆಡೂಯಿನ್ ಜಾನಪದ ಜ್ಞಾನವೆ?(ಹದಾಜ್ ಎಂಬ ಕಹಿಯಾದ ಕಲ್ಲಂಗಡಿ ಹಣ್ಣನ್ನು ಅರ್ಧಮಾಡಿ ಕೆನ್ನೆಗಳ ಮೇಲೆ ಇಟ್ಟುಕೊಂಡರೆ ಬಾಯಾರಿಕೆಯೆ ಆಗುವುದಿಲ್ಲ.)
Banounah demonstrates an old Bedouin remedy to ease thirst: Placing bitter desert melons on your cheeks.
Paul Salopek
ಅಥವಾ ಸಣ್ಣಸಣ್ಣ ವಿಷಯಕ್ಕೆ ಕೆರಳುವ ಸಿಡಿಮದ್ದಿನಂತ ಕೋಪವೆ? ಒಂದು ಸಲ ಒಂದು ಉಪಹಾರಗೃಹಕ್ಕೆ ತೆರಳುವಾಗ ಮಾಲೀಕ ಬಾಗಿಲಲ್ಲಿ ನನ್ನನ್ನೇ ದೃಷ್ಟಿಸುತ್ತಾ ತಡೆದ, ದುರ್ಗಂಧ ಬೀರುತ್ತಿದ್ದ ನಮ್ಮಂತಹ ವಿದೇಶಿಯರನ್ನು ಒಳಗೆ ಬಿಡುವುದಿಲ್ಲ ಎಂಬ ಧರ್ಮಾಂಧತೆಯಿಂದ - ಬನೋನ ಅವನ ಹೆಗಲ ಮೇಲೆ ಕೈ ಇಟ್ಟು ಪಕ್ಕದ ಓಣಿಯಂತಿದ್ದ ಜಾಗಕ್ಕೆ ಕರೆದುಕೊಂಡು ಹೋದ. ಕ್ಷಣದಲ್ಲೇ ಹಿಂತಿರುಗಿದ ಮಾಲೀಕ ಅಂಗಲಾಚುವ ದೇವತೆಯಂತಿದ್ದ. ನೀನು ಏನು ಹೇಳಿದೆ ಅವನಿಗೆ? ಬನೋನ ನನ್ನು ಕೇಳಿದೆ. "ನೀನು ನಮಗೆ ನೀರು ಮತ್ತು ವಿಶ್ರಮಿಸಲು ಜಾಗಕೊಡು ಇಲ್ಲದ್ದಿದ್ದರೆ ಎದುರಿಗಿರುವ ಗೋಡೆಗೆ ನಿನ್ನ ತಲೆಯನ್ನು ಅಪ್ಪಳಿಸುತ್ತೇನೆ". ಎಂದು ಪ್ರಶಾಂತ ಧ್ವನಿಯಲ್ಲಿ ಹೇಳಿದ. ನಾವು ಹೊರಡುವಾಗ ಭೀತನಾಗಿದ್ದ ಮಾಲೀಕನಿಗೆ ಕ್ಷಮೆ ಕೇಳಿದ. ಏಕೆಂದರೆ "ಒಬ್ಬ ಒಳ್ಳೆಯ ಮುಸ್ಲಿಮ್ ಇನ್ನೊಬ್ಬರ ಮೇಲೆ ಕೋಪಗೊಂಡು ಹಾಸಿಗೆಗೆ ತೆರಳುವಂತಿಲ್ಲ. ನೀನು ಶಮನ ಮಾಡಿಕೊಳ್ಳಲೇಬೇಕು, ಇಲ್ಲದಿದ್ದರೆ ಶಾಂತತೆಯಲ್ಲಿ ನಿದ್ರಿಸುವುದಕ್ಕಾಗದು."
ಬನೋನ ಪುರಾತನ ಮೆಕ್ಕಾ ಕುಟುಂಬದವನು ಅವನ ವಂಶಸ್ಥರು ಹೆಜಾಜ್ ಶೇಖ್ಗಳು ಮತ್ತು ಪ್ರವಾದಿ ಮೊಹಮ್ಮದರ ಕಾಲದ ಪ್ರಯಾಣಿಕರು (ಕಾರಾವಾನ್ಗಳು ಮತ್ತು ಅರೇಬಿಯಾದ ಹಡಗುಗಳಿದ್ದ ಕಾಲದಲ್ಲಿ ಪೂರ್ವಜನೊಬ್ಬ ಮೊರಾಕ್ಕೊ ತನಕ ಹೋಗಿದ್ದಾನೆ). "ನಾನು ಬಹಳ ಸರಳ ವ್ಯಕ್ತಿ," ಬಹಳ ವಿಷಾದದಿಂದ ಒಂದು ಸಲ ಹೇಳಿದ. "ಮಾನಸಿಕವಾಗೇನೂ ಅಲ್ಲ. ನಮ್ಮಂತಹವರು - ಬಹಳ ಸರಳ ಜನ." ಹಾಗಂತ ಬನೋನ ಏನು ಮಗುವೇನೂ ಅಲ್ಲ. ಬಹಳ ವರ್ಣರಂಜಿತ ವ್ಯಕ್ತಿತ್ವವುಳ್ಳವನು. ಮರುಭೂಮಿಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮದ್ಯಾಹ್ನದ ಹೊತ್ತು ಹರಕು ಮುರುಕು ನೆರಳನ್ನು ಆಶ್ರಯಸಿ ನಿಲ್ಲುತ್ತಿದ್ದಾಗ ಸೌದಿ ಬುಡಕಟ್ಟು ಜನಾಂಗದ ಕಥೆಗಳನ್ನು ನಯವಾಗಿ ಬಿಚ್ಚಿಡುತ್ತಿದ್ದ. ಹಾಗೆಯೇ ನನ್ನ ಕೊನೆಯಿಲ್ಲದ ದೂರುಗಳನ್ನು ಬಹಳ ತಾಳ್ಮೆಯಿಂದ ತಾದ್ಯಾತ್ಮ ಮನೋಭಾವದಿಂದ ಕೇಳುತ್ತಿದ್ದ. ಸೌದಿ ಜನಗಳ ಲಿಂಗ ಭೇದದ ಭಾವನಾತ್ಮಕ ಪರಿಣಾಮಗಳನ್ನು ನಯವಾಗಿ ಮುಚ್ಚಿಡುತ್ತಿದ್ದ.
ಅದೊಂದು ಮಧ್ಯಾನ್ಹ ‘ಮಸ್ತುರಾಃ’ದ ಕೆಂಡದಂತ ಉಪ್ಪಿನ ಬಯಲಿಗೆ ಕಾಲಿಟ್ಟೆವು.
ಜಾಜ್ವಲ್ಯಮಾನವಾದ ಬೆಳಕಿನಲ್ಲಿ ನಡೆಯುತ್ತಿದ್ದೆವು. ಗಾಳಿ ಬಿಸಿ ಹಬೆಯಂತ್ತಿತ್ತು - ಒದ್ದೆಯಾದ ಹತ್ತಿಯೊಳಗಿಂದ ಉಸಿರಾಡುತ್ತಿದ್ದೆವೆಂದೆನಿಸಿತ್ತಿತ್ತು. ಇದ್ದಕ್ಕಿದ್ದಂತೆ ಯಾವುದೆ ಎಚ್ಚರಿಕೆಯಿಲ್ಲದೆ ಶೀತಮಾರುತ ನಮ್ಮನ್ನು ಆವರಿಸಿ ಮುನ್ನಡೆಯಿತು. ಕೆಲವು ಕ್ಷಣಗಳು ನಾಡಿಬಡಿತ ನಿಂತಂತಾಯಿತು: ಹಿಮಾವೃತ, ಬಹಳ ಅಸ್ವಾಭಾವಿಕ, ಅಷ್ಟೆ ಸುಂದರ, ರಾಕ್ಷಸಾಕಾರದ ಶೈತ್ಯೀಕರಣದ ಬಾಗಿಲನ್ನು ತೆಗೆದು ಮುಚ್ಚಿದಂತ ಅನುಭವ. ಭ್ರಮಾಲೋಕದಲ್ಲಿದ್ದೆವೆಂದು ಕೊಂಡೆ, ನನ್ನ ಸಹ ಪ್ರಯಾಣಿಕರತ್ತ ದೃಷ್ಟಿ ಬೀರಿದೆ. ಅವಾದ್ ಒಮ್ರಾನ್, ನಮ್ಮ ಸೂಡಾನ್ನಿನ ಒಂಟೆ ಮೇಲ್ವಿಚಾರಕ, ಒಪ್ಪಿಗೆಯಿದೆಯನ್ನಲು ಮೌನವಾಗಿ ತಲೆಯಾಡಿಸುತ್ತಿದ್ದ. ಆದರೆ ಬನೋನ ಮಾತ್ರ ದೊಡ್ಡದಾಗಿ ಹಲ್ಲು ಕಿರಿದ. ನಾನು ಅಲ್ಪಾವರಣದ ವಾಯುಗುಣದ ಬಗ್ಗೆ, ಶೀತ ಸಂವಹನೆ ಬಗ್ಗೆ ಮತ್ತು ವಿಚಿತ್ರ ಗಾಳಿ ಹರಿವಿನ ಬಗ್ಗೆ ಹೇಳುತ್ತಿದ್ದೆ, ಬನೋನ ನನ್ನ ತರ್ಕ ವಿಚಾರವಾದಗಳ ಬಗ್ಗೆ ಮುಸಿ ಮುಸಿ ನಗುತ್ತಾ "ನಾವು ಅದೃಷ್ಟವಂತರು! ದೇವರು ನಮ್ಮ ಜೊತೆ ಇದ್ದಾನೆ!" ಎಂದ.
ಕಡಲ ತೀರದ ನಗರ ಯನ್ಬುವಿನಲ್ಲಿ ರಂಜಾನಿನ ಇಡಿ ತಿಂಗಳನ್ನು ಮಹಮ್ಮೊದ್ ಬನೋನ ಚೇತರಿಸಿಕೊಳ್ಳಲು ಕಾಯ್ದೆ, ನಮ್ಮ ಪ್ರಯಾಣದಲ್ಲಿ ಮತ್ತೆ ಸೇರುತ್ತಾನೆಂದು. ಆದರೆ ಸಾಧ್ಯವಾಗಲಿಲ್ಲ. ಆತ ರಿಯಾಧ್ನ ತನ್ನ ಮನೆಗೆ ಹಿಂತಿರುಗಿದ. ಅವನ ಬದಲು ಬಂದ ‘ಅಲಿ ಅಲ್ ಹರ್ಬಿ’ ಎಂಬ ಯುವಕ ಕುರಿಕಾಯುವವರು ನಿರ್ಮಿಸಿ ಬಿಟ್ಟುಹೋಗಿದ್ದ ಒಂದು ಕುಲುಮೆಯಂತಿದ್ದ ತಾತ್ಕಾಲಿಕ ಗುಡಿಸಲಿನಲ್ಲಿ, ಮಂಕುಕವಿದಂತೆ ಕಾಲ್ಚಾಚಿಕೊಂಡು ದಿಗ್ಭ್ರಾಂತಿಯಿಂದ ಬಿಸಿಲು ತಡೆಯಲಾರದೆ ಶೋಚನೀಯ ಸ್ಥಿತಿಯಲ್ಲಿ ಬೆವರುತ್ತಾ ಕುಳಿತಿದ್ದ, ಅವನ ಸೆಲ್ ಫೊನ್ ರಿಂಗಾಯ್ತು. ನಿಮಿಷದೊಳಗೆ ನಗಲಾರಂಭಿಸಿದ. ಅತ್ತಕಡೆಯಿಂದ ಬನೋನ ಮಾತಾಡಿ ಧೈರ್ಯ ತುಂಬುತ್ತಿದ್ದ.
"ನಮಗೆಲ್ಲಾ ಅಭಿನಂದನೆ ಹೇಳುತ್ತಿದ್ದಾನೆ" ಎಂದು ಅಲಿ ಹೇಳಿದ. "ಇಂದು ಅವನ ಹೃದಯಲ್ಲಿ ತಾನು ನಮ್ಮೊಂದಿಗಿದ್ದಾನಂತೆ. ಮತ್ತು ಪಾಲ್, ನಿನ್ನ ತಾತ ಅರೆಬಿಯನ್ ಇರಬಹುದೇನೋ" ಎಂದು ಹೇಳುತ್ತಿದ್ದಾನೆ.
