"ನಾವು ಆ ದಾರಿಯಲ್ಲಿ ನಡೆಯಲಾಗದು."
"ಇಲ್ವಾ? ಹಾಗಾದರೆ ಅಲ್ಲಿ?"
"ಇಲ್ಲ."
"ಆ ಕಡೆ?"
"'ಇಲ್ಲ. ಮುಷ್ಕಿಲಾ"- ತೊಂದರೆ.
ನನ್ನ ಮಾರ್ಗದರ್ಶಿ ಹಮೌದಿ ಏನ್ವಾಜೆ ಅಲ್ ಬೆಡುಲ್ ಚಲನಾ ಸ್ವಾತಂತ್ರ್ಯದ ಬಗ್ಗೆ ಪಾಠ ಹೇಳುತ್ತಿದ್ದ.
ವಿಶಾಲವಾದ ಶುಷ್ಕ, ಶ್ವೇತ ಡೆಡ್ಸಿ ಕಣಿವೆಯ ಉತ್ತರದ ಕಡೆಗೆ ಕಾಲೆಳೆಯುತ್ತಾ ಸಾಗಿದೆವು. . ಗಿಜಿಗುಡುತ್ತಿದ್ದ ಹೆದ್ದಾರಿಯ ಪಕ್ಕದಲ್ಲೆ ನಡೆದೆವು: ರಸ್ತೆಯ ತುಂಬಾ ಟೊಮೊಟೊ ಹಣ್ಣುಗಳನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ಗಳ ಮುತ್ತಿನಂಥ ಸರಮಾಲೆ. ರಸ್ತೆ: ಟಾರ್ನ ಸಾಗಾಣೆ ಪಟ್ಟಿಯಂತೆ, ಯಂತ್ರಗಳಿಗೋಸ್ಕರ ನಿರ್ಮಿಸಲಾಗಿದೆ, ಅಮಾನವೀಯ ನೇರ, ವಾಹನಗಳ ಗಾಜುಗಳಿಗೆ ಬಡಿದು ಸತ್ತ, ಪುಟ್ಟ ಹಕ್ಕಿಗಳು ಚೆಲ್ಲಾಡಿದ್ದವು.
Hamoudi drives Mana’ along a nightmare road—booming with truck traffic, strewn with dead birds.
Paul Salopek
ಕಂಚಿನ ಬಣ್ಣದ ಅರಬಾ ವಾಡಿಯ ಮರಳುದಿಣ್ಣೆಗಳು ಬಹಳ ಹಿಂದುಳಿದಿತ್ತು - ಮರಳಿನ ಮೆದು ಕಣಗಳ ಬದಲಿಗೆ ಬಿಸಿಯಾದ ಜಲ್ಲಿಕಲ್ಲುಗಳು. ಟ್ರಾನ್ಸ್ ಜೋರ್ಡಾನ್ ಶ್ರೇಣಿಯಲ್ಲಿರುವ ಒಂಟೆಗಳ ಹಳೆಯ ದಾರಿಯೊಂದು ಹಿಂದುಳಿದಿತ್ತು, ಗುಲಾಬಿ ಬಣ್ಣದ ಮರಳು ಕಲ್ಲಿನ ಗೋಡೆ. ಒರಟಾದ ಗುಡ್ಡಗಳ ಮೇಲ್ಮೈಯಲ್ಲಿ ಮಧ್ಯಾಹ್ನದ ನೆರಳಿನಲ್ಲಿ ನೀಲಿ ಕಣಗಳ ಧೂಳು. ಹಿಂದೆಯೇ ಸಿರಿಯನ್ ನಿರಾಶ್ರಿತರ ಕೃಷಿ ಭೂಮಿ ಹರಡಿಕೊಂಡಿತ್ತು. ಅಮ್ಮಾನ್ನ ಊಟದ ಮೇಜಿಗೆ ತೆರಳುವ ತರಕಾರಿಗಳನ್ನು ಆಯುತ್ತಿದ್ದರು. ಮುಂದೆ ಗೆರೆಗಳಂತಿದ್ದ ಡಾಂಬರ್ನ ಕಿರಿದಾದ ಓಣಿಗಳು: ಟ್ರಕ್ಗಳ ರಸ್ತೆ. ಅತಿ ವೇಗದ, ಗದ್ದಲದ, ಬಿಸಿಲಿಗೆ ಬೊಬ್ಬೆ ಬರುವಂತ, ಯಾಂತ್ರಿಕವಲ್ಲದ ಜೀವಿಗಳಿಗೆ ಅತ್ಯಂತ ಪ್ರತಿಕೂಲ ಪರಿಸ್ಥಿತಿ. ನಮ್ಮ ಸರಕುಸಾಗಣಿಯ ಹೇಸರ ಕತ್ತೆಗಳಾದ ಸೆಲ್ವ ಮತ್ತು ಮನಾ', ಸಂಚಾರಯುಕ್ತ ಎಣ್ಣೆಯ ಹೆದ್ದಾರಿಯ ಮೇಲೆ ಬಹುದೂರ ಸಾಗಿಬಿಡುತ್ತಿದ್ದವು. ರಸ್ತೆಯಲ್ಲಿ ಕಾಲಿಡುತ್ತಿದ್ದಂತೆ ವಾಹನಗಳ ಚಾಲಕರು ಹಾರ್ನ್ ಮಾಡುತ್ತಿದ್ದರು. ರಸ್ತೆಯ ಮೇಲೆ ನಡೆಯುವುದು ನಿಜಕ್ಕೂ ದುಸ್ಥಿಯ ಪರಮಾವಧಿ. ನರಕದಂತ್ತಿತ್ತು. ಆದರೂ ಹಮೌದಿಯನ್ನು ರಸ್ತೆಯನ್ನು ಬಿಡಲು ಒಪ್ಪಿಸಲಾಗಲಿಲ್ಲ. ಕಲುಷಿತವಾದ, ಘಾಟಿನ ವಾಹನಗಳ ಹೊಗೆಯಿಂದ ಹತ್ತು ಗಜ ದೂರಕ್ಕೂ ಜರುಗಲು ನಿರಾಕರಿಸಿದ.
ಏಕೆ?
"ಪೊಲೀಸ್," ಗಂಭೀರವಾಗಿ ಹೇಳಿದ. ಮುಷ್ಕಿಲಾ. ತೊಂದರೆ.
ವಿದ್ಯುತ್ ವಾಹಕ ತಂತಿಗಳ ಕೆಳಗೆ ನಡೆಯುವುದು ಜೋರ್ಡಾನ್ನಲ್ಲಿ ನಿಷೇಧವೆಂದು ಹಮೌದಿ ವಿವರಣೆ ನೀಡಿದ: ರಸ್ತೆಯ ಪಕ್ಕದಲ್ಲೇ ವಿದ್ಯುತ್ ವಾಹಕಗಳಿದ್ದವು. (ಇದು ನಿಜವೇ? ಏಕೆ? ಎಂಬ ಪ್ರಶ್ನೆಗೆ ಅವನಲ್ಲಿ ಉತ್ತರವಿಲ್ಲ.) ಅಥವ ಅಲ್ಲಿರುವ ಮಣ್ಣು: ಸಂಕುಚಿತಗೊಳ್ಳುತ್ತಿರುವ ಡೆಡ್ ಸಿ, ಪಶ್ಚಿಮದಲ್ಲಿ ಮಂಕಾಗಿ ಹೊಳೆಯುತ್ತಿತ್ತು. ಸುತ್ತಲೂ ಜೌಗು ಪ್ರದೇಶ, ಕುಸಿಯುವ ಮರಳು ಹಳ್ಳ. ನಿಷಿದ್ಧ ಸ್ಥಳ. ಮಬ್ಬಾಗಿ ಕಾಣುತ್ತಿದ್ದ ಇಸ್ರೇಲಿ ಗಡಿಯ ಪಕ್ಕದಲ್ಲೂ ನಡೆಯುವುದನ್ನು ನಿಷೇದಿಸಿದ್ದಾರೆ. ಎರಡೂ ದೇಶಗಳು ಶಾಂತಿಯಿಂದಿದ್ದರೂ ಸಹ, ಆ ಪ್ರದೇಶ ಭದ್ರತಾ ವಲಯ. (ಇಸ್ರೇಲಿಗಳು ನೆಲಬಾಂಬನ್ನು ನಿಷ್ಟ್ರಿಯಗೊಳಿಸುತ್ತಿರುವ ಬಗ್ಗೆ ಬಹಳ ದಿನಗಳಿಂದ ಕೇಳುತ್ತಿದ್ದೆವು, ಮನುಷ್ಯ ನಿರ್ಮಿತ ಗುಡುಗು ದೂರದಲ್ಲೆಲ್ಲೊ ಪ್ರತಿಧ್ವನಿಸುತ್ತಿತ್ತು.)
ನಾನು ಸಂಶಯಗ್ರಸ್ತನಾಗಿದ್ದೆ. ಕಿರಿಕಿರಿಯಾಗಿತ್ತು. ಹಮೌದಿ ಕಿಂಗ್ ಹುಸೇನ್ ಸೇತುವೆ ತಲುಪಲು ಆತುರ ಪಡುತ್ತಿದ್ದಾನೆ ಎಂದು ಆತನ ಮೇಲೆ ಶಂಕಿತನಾಗಿದ್ದೆ - ಏಕೆಂದರೆ ಅಲ್ಲಿಂದ ನಾವಿಬ್ಬರೂ ಬೇರೆಯಾಗುತ್ತಿದ್ದೆವು. ನಾನು ಜೋರ್ಡಾನ್ ಬಿಟ್ಟು ವೆಸ್ಟ್ ಬ್ಯಾಂಕ್ಗೆ ತೆರಳುತ್ತಿದ್ದೆ. ಆದರೆ ಅದು ತಪ್ಪೆಂದು ಅರಿವಾಯಿತು.
ಭದ್ರತಾ ಅಧಿಕಾರಿಗಳು ನಮ್ಮನ್ನು ನಿಲ್ಲಿಸಿದರು.
ಟ್ರಾಫಿಕ್ ಪೊಲೀಸರು, ಸೇನೆಯವರು, ಲ್ಯಾಂಡ್ ಕ್ರೂಸರ್ಗಳ ಮೇಲೇರಿ 0.50 ಕ್ಯಾಲಿಬರ್ ಮೆಷೀನ್ ಗನ್ಗಳನ್ನು ಇಟ್ಟುಕೊಂಡು ಗಸ್ತು ತಿರುಗುತ್ತಿರುತ್ತಾರೆ. ರಹಸ್ಯದಳದ ಪೊಲೀಸರು ಸಹ, ಅವರ ತಲೆಕೂದಲ ಶೈಲಿ ಮತ್ತು ಹೊಳೆಯುವ ಬಿಳಿ ಎಸ್ ಯು ವಿ ವಾಹನಗಳು ("ನೀನು ಹೊರಬಂದು ಇಲ್ಲಿ ನಡೆ" ಎಂದು ನಾನು ಹೇಳಿದೆ. "ನಿನ್ನ ಮಾತು ನಿಜ" ಎಂದು ಹೇಳಿದ.) ನಾವು ಈ ಆಧುನಿಕ ರಸ್ತೆಗೆ ಸೇರಿದವರಲ್ಲ, ಹಮೌದಿ ಮತ್ತು ನಾನು, ಉಬ್ಬು ಹಲ್ಲುಗಳುಳ್ಳ ಗುಡ್ಡಗಾಡಿನ ಕತ್ತೆಗಳು ಸಹ. ಹರಿದು ತುಂಡಾಗಿದ್ದ ಕಿತ್ತಳೆ ಬಣ್ಣದ ಬಟ್ಟೆಯಲ್ಲಿ ಹೊಲೆದಿದ್ದ ಜೀನುಗಳು, ತಲೆಗೆ ಸುತ್ತು ಕೊಂಡಿದ್ದ ಕೊಳಕಾಗಿದ್ದ - ಬಿಸಿಲಿಗೆ ಮಾಸಲಾಗಿದ್ದ ಶೆಮಾಗ್ಗಳು. ನಮ್ಮ ಚಹಾ ಕುದಿಸುವ ಪಾತ್ರೆ ಸ್ಪೋಟಕ ವಸ್ತುವಾಗಿರಬಹುದೇನೊ, ನಾವು ಕಳ್ಳತನದಲ್ಲಿ ನುಸುಳುತ್ತಿರುವವರೆನೊ, ಕಳ್ಳ ಸಾಗಣಿಕೆದಾರಿರಬಹುದೊ, ತೊಂದರೆಯುಂಟು ಮಾಡುವವರೊ - ಒಟ್ಟಿನಲ್ಲಿ ಅಲೆಮಾರಿಗಳು, ಎಂದಿಗೂ ಶಂಕಾಸ್ಪದರು. ಜೊರ್ಡಾನಿನ ರಾಜಧಾನಿ ಅಮ್ಮಾನ್ ತಲುಪವುಷ್ಟರಲ್ಲಿ, 24 ಗಂಟೆಯೊಳಗೆ ಪೊಲೀಸರು ನಮ್ಮನ್ನು 6 ಬಾರಿ ನಿಲ್ಲಿಸಿ ಪ್ರಶ್ನಿಸಿದರು, ಇದೊಂದು ದಾಖಲೆ. ಆಫ್ರಿಕಾದಿಂದ ಹೊರಟು 2200 ಮೈಲಿಯ ದೂರದ ಪ್ರಯಾಣದಲ್ಲಿ ನಮ್ಮನ್ನು ಎಷ್ಟು ಬಾರಿ ಪರಿಶೀಲಿದ್ದರೂ, ಅಷ್ಟುಬಾರಿ. ನಮಗೆ ಈ ರಸ್ತೆಯೇ ರೇಖಾಕಾರಾಗೃಹ. ನಾವುಗಳು ನಡೆಯುತ್ತಿರುವ ಬಂದಿಗಳು. ಒಂದು ನಕ್ಷೆ ಮನಸ್ಸಿನಲ್ಲಿ ಮೂಡಿಬಂತು: ನನಗೆ ಪೊಲೀಸರು ಎಲ್ಲೆಲ್ಲಿ ತಡೆಯೊಡ್ಡಿದ್ದರು ಎಂದು. ನಮ್ಮ ಚಲನಾ ಸ್ವಾತಂತ್ರದ ನಕ್ಷೆ (ನಾವು ಇಂತಹ ಒಂದು ಸಂವಾದಾತ್ಮಕ ನಕ್ಷೆಯನ್ನು ನಿರ್ಮಿಸುತ್ತಿದ್ದೇವೆ. ಇದು ನಮ್ಮ ನಕ್ಷಾಕೋಠಿಯಲ್ಲಿದೆ.)
ಆದರೆ ಎಲ್ಲವೂ ಸರಳವಾಗಿಲ್ಲ. ಚಲನಾ ಸ್ವಾತಂತ್ರ್ಯ ಆರಂಭವಾಗುವುದು ಮನಸ್ಸಿನಲ್ಲಿ.
ನಾವು ಮರಳುಗಾಡನ್ನು ಹಿಂದೆ ಬಿಟ್ಟಂತೆ ಹಮೌದಿ ಹೆಚ್ಚು ಎಚ್ಚರಿಕೆಯುಳ್ಳವನಾದ, ಯಾವುದರ ಬಗ್ಗೆಯೂ ಖಚಿತತೆ ಇರಲಿಲ್ಲ. ಬಹಳ ಸರಳ ಮನುಷ್ಯ: ತರಬೇತಿಯಿಂದ ಪುರಾತತ್ವಶಾಸ್ತ್ರ ಮಾರ್ಗದರ್ಶಿ. ಜೋರ್ಡಾನಿನ ಚರಿತ್ರೆಯನ್ನು ಆಳವಾಗಿ ಅಭ್ಯಸಿಸಿದ್ದ. ಬಹುದೇಶ ಪ್ರಜೆಗಳ ಸ್ನೇಹಿತ. ನಿಷ್ಕಪಟ ಕತೆಗಾರ. ಹೃದಯ ಪೂರ್ತಿ ನಗುವವ, ದಣಿವರೆಯದ ಪ್ರಯಾಣಿಕ, ಮರಳುಗಾಡಿನಲ್ಲಿ ಬದುಕುಳಿಯುವ ಕಲೆ ಆರಿತವನು. ಹೆಮ್ಮೆಯ ಬೆಡೋಯಿನ್, ಆದರೂ ಪುರಾತನ ಪೆಟ್ರಾದ ಆತನ ಸುಂದರ ಮನೆಯಿಂದ ದೂರ ಸರಿದಂತೆ ಅವನಲ್ಲಿ ನಿಶ್ಯಬ್ಧತೆ ಬೆಳೆಯುತ್ತಿತ್ತು. ಆತ ಒಬ್ಬ ಬೆಡುಲ್: ಜೊರ್ಡಾನಿನ ಹಳ್ಳಿಗಾಡಿನಲ್ಲಿರುವ ಒಂದು ಅಲ್ಪಸಂಖ್ಯಾತ ಬುಡಕಟ್ಟಿನವ. ಸಾರ್ವಜನಿಕ ಹೆದ್ದಾರಿ ಹೆಚ್ಚು ಸುರಕ್ಷಿತ, ತಟಸ್ಥ - ಸಂಬಂಧ ಪಡದ ಬುಡಕಟ್ಟಿನವರ ಪ್ರಾಂತ್ಯಗಳ ಓಣಿಗಳಲ್ಲಿ. ಸುಸ್ಸಜ್ಜಿತ ರಸ್ತೆಗಳು ನನ್ನ ಶತ್ರುವಾಗಿರಬಹುದು, ಆದರೆ ಹಮೌದಿಯ ಮಿತ್ರ.
“ಉಳಿದುಕೊಳ್ಳಲು ನನಗೊಂದು ಸೂಕ್ತ ಸ್ಥಳ ಗೊತ್ತು,” ಆ ದಿನದ 30-ಮೈಲಿ ನಡಿಗೆಯ ನಂತರ ಹೇಳಿದ.
ಹಾಗೆ ಹೇಳಿದ್ದು ಬೆಡೋಯಿನ್ಗೆ ಸೇರಿದ ಮತ್ತು ಬೆಡುಲ್ಗೆ ಮಿತ್ರನಾಗಿದ್ದ ಸಯ್ಯದ್ದಿನ್ ಎಂಬುವನ ಚಿಂದಿಯಾಗಿದ್ದ ಶಿಬಿರವನ್ನು ನೋಡಿದಾಗ. ಆತ ರಸ್ತೆ ಬದಿಯಲ್ಲಿ ಅಲ್ಯುಮಿನಿಯಂ ಡಬ್ಬಗಳನ್ನು ಸಂಗ್ರಹ ಮಾಡುವವ.
ಆದರೆ ಎಲ್ಲವೂ ಸರಳವಾಗಿಲ್ಲ. ಚಲನಾ ಸ್ವಾತಂತ್ರ್ಯ ಆರಂಭವಾಗುವುದು ಮನಸ್ಸಿನಲ್ಲಿ.
ನಾವು ಮರಳುಗಾಡನ್ನು ಹಿಂದೆ ಬಿಟ್ಟಂತೆ ಹಮೌದಿ ಹೆಚ್ಚು ಎಚ್ಚರಿಕೆಯುಳ್ಳವನಾದ, ಯಾವುದರ ಬಗ್ಗೆಯೂ ಖಚಿತತೆ ಇರಲಿಲ್ಲ. ಬಹಳ ಸರಳ ಮನುಷ್ಯ: ತರಬೇತಿಯಿಂದ ಪುರಾತತ್ವಶಾಸ್ತ್ರ ಮಾರ್ಗದರ್ಶಿ. ಜೋರ್ಡಾನಿನ ಚರಿತ್ರೆಯನ್ನು ಆಳವಾಗಿ ಅಭ್ಯಸಿಸಿದ್ದ. ಬಹುದೇಶ ಪ್ರಜೆಗಳ ಸ್ನೇಹಿತ. ನಿಷ್ಕಪಟ ಕತೆಗಾರ. ಹೃದಯ ಪೂರ್ತಿ ನಗುವವ, ದಣಿವರೆಯದ ಪ್ರಯಾಣಿಕ, ಮರಳುಗಾಡಿನಲ್ಲಿ ಬದುಕುಳಿಯುವ ಕಲೆ ಆರಿತವನು. ಹೆಮ್ಮೆಯ ಬೆಡೋಯಿನ್, ಆದರೂ ಪುರಾತನ ಪೆಟ್ರಾದ ಆತನ ಸುಂದರ ಮನೆಯಿಂದ ದೂರ ಸರಿದಂತೆ ಅವನಲ್ಲಿ ನಿಶ್ಯಬ್ಧತೆ ಬೆಳೆಯುತ್ತಿತ್ತು. ಆತ ಒಬ್ಬ ಬೆಡುಲ್: ಜೊರ್ಡಾನಿನ ಹಳ್ಳಿಗಾಡಿನಲ್ಲಿರುವ ಒಂದು ಅಲ್ಪಸಂಖ್ಯಾತ ಬುಡಕಟ್ಟಿನವ. ಸಾರ್ವಜನಿಕ ಹೆದ್ದಾರಿ ಹೆಚ್ಚು ಸುರಕ್ಷಿತ, ತಟಸ್ಥ - ಸಂಬಂಧ ಪಡದ ಬುಡಕಟ್ಟಿನವರ ಪ್ರಾಂತ್ಯಗಳ ಓಣಿಗಳಲ್ಲಿ. ಸುಸ್ಸಜ್ಜಿತ ರಸ್ತೆಗಳು ನನ್ನ ಶತ್ರುವಾಗಿರಬಹುದು, ಆದರೆ ಹಮೌದಿಯ ಮಿತ್ರ.
“ಉಳಿದುಕೊಳ್ಳಲು ನನಗೊಂದು ಸೂಕ್ತ ಸ್ಥಳ ಗೊತ್ತು,” ಆ ದಿನದ 30-ಮೈಲಿ ನಡಿಗೆಯ ನಂತರ ಹೇಳಿದ.
ಹಾಗೆ ಹೇಳಿದ್ದು ಬೆಡೋಯಿನ್ಗೆ ಸೇರಿದ ಮತ್ತು ಬೆಡುಲ್ಗೆ ಮಿತ್ರನಾಗಿದ್ದ ಸಯ್ಯದ್ದಿನ್ ಎಂಬುವನ ಚಿಂದಿಯಾಗಿದ್ದ ಶಿಬಿರವನ್ನು ನೋಡಿದಾಗ. ಆತ ರಸ್ತೆ ಬದಿಯಲ್ಲಿ ಅಲ್ಯುಮಿನಿಯಂ ಡಬ್ಬಗಳನ್ನು ಸಂಗ್ರಹ ಮಾಡುವವ.
Known friends on an unknown road: Ali Salam al Sayedeen, Barakat, and Fatimah in their plastic tent.
Paul Salopek
ಸೂರ್ಯ ಮುಳುಗಿದ ನಂತರ ಅಪರಿಚಿತ ಸ್ಥಳದಲ್ಲಿ ನಮ್ಮ ಸ್ನೇಹದ ಗುರುತಂತಿದ್ದ ಈ ಶಿಬಿರಕ್ಕೆ ಬಂದಿಳಿದೆವು. ಆತನ ಸುಂದರ ತರುಣ ಹೆಂಡತಿ, ಕಪ್ಪು ಬಟ್ಟೆ ಧರಿಸಿದ್ದ, ಗರುಡ - ಮೂಗಿನ, ಹೊಳೆಯುತ್ತಿದ್ದ ಬಿಳಿ ಹಲ್ಲಿನವಳು, ಸೆಲ್ವಾ ಮತ್ತು ಮನಾ ಕತ್ತೆಗಳನ್ನು ಮರಳುಗಾಡಿನ ಕಡೆಗೆ ಕರೆದೊಯ್ದಳು. ಹಮೌದಿ ಮತ್ತು ನಾನೂ ಶಿಬಿರದೊಳಗೆ ಶಿಥಿಲವಾಗಿದ್ದ ಹಾಸಿಗೆಯ ಮೇಲೆ ಕುಸಿದೆವು. ದಣಿವಾಗಿತ್ತು, ನಾ ಬಾಗಿಲಿನ ಮೂಲಕ ಹೊರಗೆ ದೃಷ್ಟಿಸಿದೆ.
Empty wealth: a luxury resort on the Dead Sea.
Paul Salopek
ಡೆಡ್ ಸಿ ಯ ಸುತ್ತಮುತ್ತ ಪಂಚತಾರಾ ಹೋಟೆಲ್ಗಳ ಗುಂಪು ಹೊಳೆಯುತ್ತಿತ್ತು. ಬಹುಶಃ ಅಲ್ಲಿರುವ ಕೋಣೆಗಳ ಗಾಜಿನ ಮೂಲಕ ಕೈಯ್ಯಲೊಂದು ವೈನ್ಗ್ಲಾಸನ್ನು ಹಿಡಿದುಕೊಂಡು ಕವಿಯುತ್ತಿರುವ ಕತ್ತಲಿನ ಕಡೆ ದೃಷ್ಟಿ ಹಾಯಿಸುತ್ತಿರಬಹುದು. ಅವರು ಒಳ್ಳೆಯ ಜನ ಅಥವಾ ಕನಿಷ್ಟಪಕ್ಷ ಕೆಟ್ಟವರಂತು ಅಥವಾ ಈ ಭಯಾನಕ ರಸ್ತೆಯ ಬೇರೆಯವರಿಗಿಂತ ಉತ್ತಮ. ಅವರೇನಾದರೂ ಕಣ್ಣು ಮಿಟುಕಿಸಿದರೆ 300 ಗಜಗಳ ದೂರದಲ್ಲಿ ಮರುಭೂಮಿಯ ಗಾಡಾಂಧಕಾರದಲ್ಲಿ ತೊಯ್ದಾಡುತ್ತಿರುವ ಬೆಳಕೊಂದನ್ನು ಕಾಣಬಹುದು. ಆದು ಐದು ಜನರಿರುವ ಹರಿದು ಹೋಗಿರುವ ಪ್ಲಾಸ್ಟಿಕ್ನ ಶಿಬಿರದೊಳಗಿಂದ. ಅವರಲ್ಲಿ ಬೈನಾಕ್ಯುಲರ್ ಇದ್ದರೆ, ಬೆಡೋಯಿನ್ ತರುಣಿ ಫಾತಿಮಾ ಬೆಂಕಿಯ ಮುಂದೆ ಮೊಟ್ಟೆಗಳನ್ನು ಮತ್ತು ಬಯಲಿನಿಂದ ಕಲೆಹಾಕಿದ ಟೊಮೊಟೊಗಳನ್ನು ಬೇಯಿಸುತ್ತಾ ಕೆಲಸ ಮಾಡುತ್ತಿರುವುದು ಕಾಣುತ್ತದೆ. ಅವಳ ವಯಸ್ಸಾದ ಗಂಡ, ಅಲಿ ಸಲಾಮ್, ಬೆಡೋಯಿನ್ನ ಸಂಗೀತ ವಾದ್ಯವಾದ ರಬಾಭ ಎಂಬ ಆಡಿನ ಚರ್ಮದ ವಾದ್ಯವನ್ನು ಬೆಂಕಿಯ ಹತ್ತಿರ ಕಾಯಿಸುತ್ತಿದ್ದ. ಮರಳು ಬಣ್ಣದ ಚರ್ಮದ ತುರಿಗಜ್ಜಿಯಿಂದ ಉಬ್ಬುತಗ್ಗಾಗಿದ್ದ ಅವನ ಮಗು ನನ್ನ ತೊಡೆಯ ಮೇಲೆ ಕೆಮ್ಮುತ್ತಾ ಮಲಗಿತ್ತು. ಆತನ ಹೆಸರು, ಬರಾಕತ್, ಅಂದರೆ ಭಗವಂತನ ಅನುಗ್ರಹ. ಹಮೌದಿ ಹಾಡಲಿಕ್ಕೆ ಗಂಟಲನ್ನು ಸರಿಮಾಡಿಕೊಂಡ . ಹೆದ್ದಾರಿಯ ರಾತ್ರಿ ನಮ್ಮಿಬ್ಬರ ನಡುವೆ ಗುಯ್ಗುಡುತ್ತಿತ್ತು.
