ನಾವು ಹೇಸರಕತ್ತೆಯನ್ನು ಯೂಫ್ರಟಿಸ್ ಹತ್ತಿರ ಕಟ್ಟಿ ಹಾಕಿ ಬಾಡಿಗೆ ಕಾರಿನಲ್ಲಿ ಎಡೆಸ್ಸಾ ಕಡೆಗೆ ತೆರಳಿದೆವು:
ಮೆಸಪೊಟೇಮಿಯಾದಲ್ಲಿ ಅದೊಂದು ಪ್ರಸಿದ್ಧ ತೀರ್ಥಕ್ಷೇತ್ರ. ಅಸ್ಸಿರಿಯನ್ನರಿಂದ ಉದ್ಭವಿಸಿದ್ದು. ಗ್ರೀಕರು, ನಬೇಷಿಯನ್ನರು, ರೋಮನ್ನರು, ಸಸ್ಸಾನಿಡ್ಸ್ ಗಳು, ಬೈಸಂಟೇನಿಯನ್ನರು, ಅರಬ್ಬರು, ಅರ್ಮೇನಿಯನ್ನರು, ಸೆಲ್ಜುಕ್ರು, ಕ್ರೂಸೇಡರ್ಸ್ ಹಾಗೂ ಮತ್ತೆ ಸೆಲ್ಜುಕ್ರ ಖಡ್ಗದ ಮೊನೆಗಳ ನಡುವೆ ವ್ಯಾಪಾರ ನಡೆದಿದೆ. ಸುಮಾರು 4000 ವರ್ಷಗಳ ಹಿಂದೆ ಇದ್ದ ನಿಮ್ರೋದ್ ಎಂಬ ಕ್ರೂರಿ ರಾಜ ಅಸ್ಸಿರಿಯನ್ನರ ಸ್ಮಾರಕ ಮಂದಿರವನ್ನು ತಿರಸ್ಕರಿಸಿದ್ದಕ್ಕೆ ಅಬ್ರಹಾಮ್ನನ್ನು ಜೀವಂತ ಸುಡಲು ಆದೇಶಿಸುತ್ತಾನೆ. ಆದರೆ ಅಬ್ರಹಾಮನ ದೇವರು ಬೆಂಕಿಯ ಜ್ವಾಲೆಗಳನ್ನು ನೀರಾಗಿ ಮತ್ತು ಕಟ್ಟಿಗೆಯನ್ನು ಮೀನಾಗಿ ಪರಿರ್ವತಿಸಿ ಈ ಪ್ರವಾದಿಯನ್ನು ರಕ್ಷಿಸುತ್ತಾನೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ದೇವರು ನಿಮ್ರೋದನ ಮೂಗಿನ ಮೂಲಕ ಸೊಳ್ಳೆಯನ್ನು ಕಳುಹಿಸಿ ಮೆದುಳನ್ನು ಕಚ್ಚಿಸಿ ಶಿಕ್ಷೆಕೊಡುತ್ತಾನೆ. ಬುದ್ಧಿ ಭ್ರಮಣೆಗೊಂಡ ರಾಜ ತನ್ನ ತಲೆಯನ್ನು ಉಣ್ಣೆಬಟ್ಟೆ ಸುತ್ತಿದ ಸುತ್ತಿಗೆಗಳಿಂದ ಹೊಡೆದು, ನಂತರ ಮರದ ದೊಣ್ಣೆಗಳಿಂದ ತನ್ನ ರುಂಡ ಉರುಳಿಸಲು ತನ್ನದೇ ಸೈನಿಕರಿಗೆ ಆಜ್ಞಾಪಿಸುತ್ತಾನೆ, ಹೀಗೆ ನಿಮ್ರೋದ್ ಅಂತ್ಯ ಕಾಣುತ್ತಾನೆ. ಇತ್ತೀಚಿನ ದಿನಗಳಲ್ಲಿ ಸನ್ಲಿಯೂರ್ಫಾ, ಎಂದು ಕರೆಯುವ ಈ ಆಧುನಿಕ ನಗರದಲ್ಲಿ ಕೊಳವೊಂದಿದೆ. ಇದು ಅಬ್ರಹಾಮನ ಪವಾಡವನ್ನು ನೆನಪಿಸುತ್ತದೆ. ಈ ಕೊಳದಲ್ಲಿ ಪವಿತ್ರ ಕಾರ್ಪ್ ಮೀನುಗಳು ತುಂಬಿವೆ. ಯಾತ್ರಿಕರು ಆ ಮೀನುಗಳಿಗೆ ಒಂದು ಲಿರಾ ಮೌಲ್ಯದ ಉಂಡೆಗಳನ್ನು ತಿನಿಸುತ್ತಾರೆ. ಸಾವಿಲ್ಲದ ಈ ಮೀನುಗಳು ಕೊಂಚ ದಡೂತಿಯೇ. ಒಂದನ್ನು ತಿಂದರೆ, ನಿಮ್ಮ ದೃಷ್ಟಿಯನ್ನು ಕಳೆದುಕೊಳ್ಳುವಿರಿ.
ಅಬ್ರಹಾಮನ ಕೊಳದ ಹತ್ತಿರವೆ ಸಿಲ್ಕ್ ರಸ್ತೆಯ ಕಾಲದ ಹಳೆಯ ಬಜಾರೊಂದಿದೆ. ಅಲ್ಲಿರುವ ದರ್ಜಿಗಳು ಕರ್ಡ್ ರು. ನೆರಳಿರುವ ಪ್ರಾಂಗಣದಲ್ಲಿ ಕುಳಿತು ಸಾವಿರಾರು ವರ್ಷಗಳಿಂದ ಹರಿದ ವಸ್ತ್ರಗಳಿಗೆ ತೇಪೆ ಹಾಕುತ್ತಿರುವರು, ಚಾ ಕುಡಿಯುತ್ತಾ ಸೂಜಿಕಣ್ಣಿಗೆ ತೇವ ಮಾಡಿದ ದಾರವನ್ನು ತೂರಿಸುತ್ತಾ ದೃಷ್ಟಿಯನ್ನು ಹಾಳುಗೆಡುವುಕೊಳ್ಳುತ್ತಾರೆ.
ಸನ್ಲಿಯೂರ್ಫಾದ ಸವೆದು ಹೋದ ಹಲಗೆಗಳ ಅಂಗಡಿಗಳಲ್ಲಿ ಹರಿದು ಬರುತ್ತಿದ್ದ ಸರಕು ಸಾಮಾಗ್ರಿಗಳು ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೇರಿ ನಂತರ ಅವನತಿ ಹೊಂದಿದ ಪ್ರಬಲ ಸಾಮ್ರಾಜ್ಯಗಳ ಹಣೇಬರಹವನ್ನು ಹೇಳುತ್ತಿತ್ತು. ಬಹುಶಃ ಈಗಲೂ ಹೇಳಬಹುದೇನೊ. ಇಂದು, ಶತಮಾನಗಳ ಹಿಂದೆ ಸಿಯರ್ಸ್, ರೀಬಕ್ ಅಂಡ್ ಕಂಪನಿಗಳು ಮಾರಾಟ ಮಾಡಿದ ಪುರಾತನ ಅಮೆರಿಕನ್ - ನಿರ್ಮಿತ ಹೊಲಿಗೆ ಯಂತ್ರಗಳ ಮೇಲೆ ದರ್ಜಿಗಳು ಬೆನ್ನು ಬಾಗಿಸಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕಾಲುಗಳಲ್ಲಿ ಹೊಲಿಗೆ ಯಂತ್ರಗಳನ್ನು ತುಳಿಯುತ್ತಿದ್ದರು. ಬೇರೊಂದು ಕಾಲದ ಮಜಭೂತಾದ ಕಲಾಕೃತಿಗಳು. ಬಳಸಿ ಎಸೆಯುವ ಚೈನೀಸ್ ಪಾಲಿಯಸ್ಟರ್ಗಳು ಬರುವ ಮೊದಲೇ ಇದ್ದ ವರ್ಷಕಾಲದವು. ಒಂದು ಕಾಲದಲ್ಲಿ ಅಮೆರಿಕ ತನ್ನ ಸಾಲಕ್ಕಿಂತ ಹೆಚ್ಚು ರಫ್ತು ಮಾಡಿದ ಪ್ರಪಂಚದಿಂದ.
“ನಾವು ಕೊನೆಯ ತಲೆಮಾರಿನವರು” ಎಂದ ದರ್ಜಿ ಮುಹಮ್ಮದ್ ಸಾದಿಕ್ ದೆಮಿರ್. ಸ್ವಾನುಕಂಪವಿಲ್ಲದೆ. ಅಸಹಾಯಕತನಕ್ಕೆ ತನ್ನ ಭುಜವನ್ನು ಕೊಡವಿದ. “ಈಗಿನ ಜನರು ಹರಿದ ಬಟ್ಟೆಗಳನ್ನು ರಿಪೇರಿ ಮಾಡಿಸುವುದಿಲ್ಲ. ಹೊರೆಗೆ ಎಸೆಯುತ್ತಾರೆ.”
ವಾಸ್ತವದಲ್ಲಿ, ಇದನ್ನು ಡೆನಿಜ಼್ ಕಿಲಿಕ್ ಹೇಳುವುದು.
On the trail near Tarsus, walking partner Deniz Kilic stands before graffiti commemorating his namesake, a 1960s revolutionary.
Paul Salopek
ಕಿಲಿಕ್, ನನ್ನ ಟರ್ಕಿ ಮಾರ್ಗದರ್ಶಿ, ನನ್ನ ದುಭಾಷಿ, ಮನೆಗೆ ಹೊರಟಿದ್ದಾನೆ.
ಇಥಿಯೋಪಿಯದಿಂದ ಆರಂಭಿಸಿದ ಔಟ್ ಆಫ಼್ ಈಡನ್ ವಾಕ್ ನ ಜಾಡಿನಲ್ಲಿ ನಡಿಗೆಯ ಯಾವ ಜೊತೆಗಾರನೂ ಅನುಭವಿಸದಷ್ಟು ನೋವನ್ನು ಈತ ಅನುಭವಿಸಿದ. ಮೊಣಕಾಲು ಮುರಿದು ದಬ್ಬೆಕಟ್ಟಿಕೊಂಡಿದ್ದ. ನೋವು ಕೊಡುತ್ತಿದ್ದ ಪಾದ. ಬೊಕ್ಕೆಗಳ ಮೇಲೆ ಬೊಕ್ಕೆಗಳು. ನಡಿಗೆಯ ಬಗ್ಗೆ ನಾನು ಕೊಡುತ್ತಿದ್ದ ಉಪನ್ಯಾಸಗಳನ್ನೆಲ್ಲಾ ಸಹಿಸಿಕೊಂಡಿದ್ದ, ನೇರ ದಾರಿಯಲ್ಲಿ ನಡೆಯದಿರುವುದು, ಬೆಟ್ಟ ಗುಡ್ಡಗಳನ್ನು ಸುತ್ತಿ ಬಳಸಿ ನಡೆಯುವುದು. ಆದರೂ ಕಿಲಿಕ್ ಎಂದೂ ನಿಲ್ಲಲಿಲ್ಲ. ಬೆಳಗಿನ ಹೊತ್ತು ಅವನ ಬೂಟುಗಳನ್ನು ಧರಿಸಲು ಹಿಂಸೆಪಡುತ್ತಿದ್ದ. ತತ್ತರಿಸಿ ಬೀಳುತ್ತಿದ್ದ, ಆದರೂ ನಿಧಾನಗತಿಯ ಈ ಪ್ರಯಾಣವನ್ನು ಪ್ರೀತಿಸಿದ್ದ. ಅದು ಅವನಲ್ಲಿದ್ದ ರಸ್ತೆ ರಿವಾಜುಗಳ ಆಕರ್ಷಣೆಯನ್ನು ಹೊರಹಾಕಿತ್ತು. ಅಣಕಿಸುವುದು, ಹಾಸ್ಯಮಾಡುವುದು, ಭೇಟಿಯಾದವರನ್ನೆಲ್ಲಾ ಶರಣಾಗಿಸುತ್ತಿದ್ದ. ಅತ್ಯಂತ ವಿನಯಶೀಲ ರೈತನಿಗೂ ಹೋಕಾ - ಮಾಸ್ಟರ್, ಟೀಚರ್ ಎನ್ನುತ್ತಿದ್ದ. ಮರ್ಸಿನ್ನಿಂದ ಸನ್ಲಿಯೂರ್ಫಾದವರೆಗೆ 200 ಮೈಲಿಗಳ ದೀರ್ಘ ಪ್ರಯಾಣದ ಬೆಟ್ಟಗಳ, ರಸ್ತೆಗಳ, ಕಡಲತೀರಗಳ ಮತ್ತು ಬಯಲು ಪ್ರದೇಶಗಳ ಹಾದಿಯಲ್ಲಿ ಆತ ನನ್ನ ವಿವೇಕಿ ಸ್ನೇಹಿತನಾಗಿ ಅನಾಟೊಲಿಯಾದ ಕಿಟಕಿಯಾಗಿದ್ದ. ನನ್ನ ಮೊದಲ 3-ಡಿ ಚಲನಚಿತ್ರ - ಡಾನ್ ಆಫ್ ದಿ ಪ್ಲಾನೆಟ್ ಆಫ್ ಏಪ್ಸ್ ನ್ನು ವೀಕ್ಷಿಸಲು ಬಲವಂತವಾಗಿ ಕರೆದೊಯ್ದಿದ್ದ - ಅದನ್ನು ಸಂಶೋಧನೆಯೆಂದು ಆರೋಪಿಸಿದ್ದ. ಆತನ ತಂದೆ ತಾಯಿಗಳು 1960ರ ಕ್ರಾಂತಿಕಾರಿ ಡೆನಿಜ಼್ ಗಿಸ್ಮಿಸ್ನ ಹೆಸರನ್ನು ಅವನಿಗೆ ಇಟ್ಟಿದ್ದರು, ಚೆಗುವರನ ಟರ್ಕಿಯ ಆವೃತ್ತಿ, ಎಲ್ಲ ರಾಜಕಾರಣಿಗಳ ಮೇಲೂ ಆತನಿಗೆ ತೀವ್ರ ತಿರಸ್ಕಾರವಿತ್ತು. ಆತನ ಎಲ್ಲ ಆಲೋಚನೆಗಳು ಪಾಪ್ಸಾಂಗ್ನ ಒಂದು ವಾಕ್ಯದಿಂದ ಪೂರ್ಣಗೊಳ್ಳುತ್ತಿತ್ತು.
ಹೇಸರಗತ್ತೆಯೊಡನೆ ಕೊಳ್ಳವೊಂದನ್ನು ದಾಟುತ್ತಾ: ”ವಿ ಆಲ್ ಲೀವ್ ಇನ್ ಎ ಯೆಲ್ಲೊ ಸಬ್ಮೆರಿನ್…”
ಹೆಪ್ಪುಗಟ್ಟುತ್ತಿದ್ದ ಮೋಡಗಳನ್ನು ದೃಷ್ಟಿಸಿ ಸಿಟ್ಟಿನಿಂದ ಗುರುಗುಡುತ್ತಾ: “ಹಿಯರ್ ಕಮ್ಸ್ ದಿ ರೈನ್ ಎಗೈನ್, ಫಾಲಿಂಗ್ ಆನ್ ಮೈ ಹೆಡ್ ಲೈಕ್ ಎ ಮೆಮೊರಿ…”
ನಾನು ಮತ್ತೆ ನಿನ್ನನ್ನು ಭೇಟಿಯಾಗುತ್ತೇನೆ, ನಾನವನಿಗೆ ಹೇಳಿದೆ.
ಎಲ್ಲ ಮಾರ್ಗದರ್ಶಿಗಳಂತೆ, ಕಿಲಿಕ್ನನ್ನು ಅರ್ಜೆಂಟೀನಾ ಮತ್ತು ಚಿಲಿಯ ನಡುವಿನ ಬೀಗಲ್ ಚಾನೆಲ್ಗೆ ಆಹ್ವಾನಿಸಿದೆ, ಪ್ರಯಾಣ ಅಂತ್ಯಗೊಳ್ಳುವ ಗೆರೆಗೆ. ಇದೇ ಕನಸು: ಈ ಪ್ರಯಾಣವನ್ನು ರೂಪಿಸಲು ಸಹಕರಿಸಿದ ಎಲ್ಲಾ ಸಹ ಮಾರ್ಗದರ್ಶಿಗಳು 2020ರಲ್ಲಿ ಒಂದು ಗೂಡುತ್ತಾರೆ. ಮೊಹಮ್ಮದ್ ಬನೋನಾನನ್ನು ನೋಡುವೆ, ಮೆಕ್ಕಾದ ಪುತ್ರ, ಟಿಯರಾ ಡೆಲ್ಫಿಗೂನ ಅಂಟಾರ್ಟಿಕ್ ಮಾರುತಗಳೆದುರು ಉಂಡೆಯಂತೆ. ನೋವಾ ಬುರ್ಷಟೀನ್ ಳನ್ನು ನೋಡುವೆ, ಈಕೆ ಇತ್ತೀಚೆಗೆ ಇಸ್ರೇಲಿ ಸೈನ್ಯದಿಂದ ಬಿಡುಗಡೆಗೊಂಡ ತರುಣಿ, ಕಡಲ ತೀರದ ಸಮೆಗಲ್ಲುಗಳ ಮೇಲೆ ನಡೆಯುವಳು. ಆಫ಼್ರಿಕಾದ ರಿಫ಼್ಟ್ ನ ಮೂಳೆ ಬಣ್ಣದ ಬಯಲಿನ ಪಳೆಯುಳಿಕೆಗಳ ಬೇಟೆಗಾರ, ಎಲೆಮಾ ಹೆಸನ್, ಮತ್ತು ಪೆಟ್ರಾದ ಬೆಡೋಯಿನ್ ಮಾರ್ಗದರ್ಶಿ, ಹಮೌದಿ ಅಲ್ವಿಜಾ ಅಲ್ ಬೆಡುಲ್. ಮತ್ತು ರಾಮಲ್ಲಾದ ಬಸ್ಸಮ್ ಅಲ್ ಮೊಹರ್. ಅಲ್ಲಿ ರಷ್ಯನ್, ಚೈನೀಸ್ ಮತ್ತು ಕೊಲಂಬಿಯಾದ ಮಾರ್ಗದರ್ಶಿಗಳಿರುತ್ತಾರೆ. 21 ಸಾವಿರ ಮೈಲುಗಳಷ್ಟು ಮೌಲ್ಯದ ಸಹಯಾತ್ರಿಕರು. ನಾವೆಲ್ಲಾ ಒಟ್ಟಿಗೆ ಹೆಜ್ಜೆ ಹಾಕುತ್ತೇವೆ, ಒಂದು ಗುಂಪಾಗಿ, ಮಾನವ ಜೀವಿಯ ಅಂತಿಮ ಮೈಲಿಯ ಪ್ರಯಾಣದಲ್ಲಿ, ಮಾನವ ಕಲ್ಪನೆಯ ಕೊನೆಯ ಕಡಲತೀರದಲ್ಲಿ. ಕಿಲಿಕ್ ಹಾಡುತ್ತಾನೆ, “ಬೇಬಿ, ಇಟ್ಸ್ ಕೊಲ್ಡ್ ಔಟ್ಸೈಡ್…” ಈ ಪ್ರಯಾಣ ಅವರಿಗೆ ಸೇರಿದ್ದು. ಎಲ್ಲ ಎಳೆಯನ್ನು ಸೇರಿಸಿ ನೇಯ್ದಂತೆ, ಈ ಕಥೆಯನ್ನು ಅವರೆಲ್ಲಾ ಸೇರಿ ಹೆಣೆದು ಅಸ್ತಿತ್ವಗೊಳಿಸಿದರು.
ನಿಮ್ಮ ಅನುಪಸ್ಥಿತಿ ನನ್ನ ಮೂಲಕ ಹೇಗೆ ಸಾಗಿದೆಯೆಂದರೆ ಸೂಜಿಯ ಮೂಲಕ ಸಾಗಿರುವ ದಾರದಂತೆ. ನಾನು ಎಲ್ಲವನ್ನೂ ಅದರ ಬಣ್ಣದ ದಾರದಿಂದ ಹೊಲೆದಿದ್ದೇನೆ.
- ಡಬ್ಲ್ಯು.ಎಸ್. ಮರ್ವಿನ್
In a bazaar in southern Turkey, Kurdish tailors pump antique sewing machines by foot.
Video by Paul Salopek
