ಮೊಟ್ಟಮೊದಲು: ಹೇಸರಗತ್ತೆ ಕತ್ತೆಯಲ್ಲ.
ಕತ್ತೆ, ಅಶ್ವತಳಿಯ ಕುಟುಂಬಕ್ಕೆ ಸೇರಿದ ಹೀನ ಸ್ವಾಭಿಮಾನದ: ಪುಟ್ಟ, ವಿನೀತ, ಉದ್ದ ಕಿವಿಗಳುಳ್ಳ ಜೀವಿಗಳು ಕುದುರೆಯೊಂದಿಗೆ ಸಂಕರಣಗೊಂಡಾಗ ಹೇಸರಗತ್ತೆಗಳು ಉಧ್ಭವವಾದದ್ದು. ಬೇರೆ ಮಾತಲ್ಲಿ ಹೇಳುವುದಾದರೆ ಹೇಸರಗತ್ತೆ, ಕತ್ತೆಯೆಂಬ ಕಚ್ಛಾ ಮೂಲ ಲೋಹದಿಂದ ಸೃಷ್ಟಿಸಿದ ಉತ್ತಮ ಮಿಶ್ರಲೋಹ. ಹೇಸರಗತ್ತೆಯನ್ನು ಕತ್ತೆಯೆಂದು ಕರೆಯುವುದಾದರೆ, ಹೇಸರಗತ್ತೆಯ ಚರ್ಮವನ್ನು ಸುಲಿಯುವ ಹಿರಿಯರ ವಕ್ರದೃಷ್ಟಿಯ ತಿರಸ್ಕಾರವನ್ನು ಗಳಿಸಲು ಹೊರಟಿರುವ ಆರಂಭಿಕರಾಗುವುದಂತೂ ಸತ್ಯ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೂ, ಅದೊಂದು ಪದಗಳ ನಡುವಿನ ಹೋರಾಟ.
ಜಾಕ್ ಹೇಸರಗತ್ತೆಗಳು (ಗಂಡು) ಮತ್ತು ಜೆನ್ನಿ ಅಥವಾ ಮೋಲ್ಲಿ ಹೇಸರಗತ್ತೆಗಳು (ಹೆಣ್ಣು) ಇವೆ. ಅಲ್ಲಿ ಬ್ಲೂ ಮ್ಯೂಲ್ಸ್, ಕಾಟನ್ ಮ್ಯೂಲ್ಸ್, ಶುಗರ್ ಮ್ಯೂಲ್ಸ್ ಮತ್ತು ಮೈನಿಂಗ್ ಮ್ಯೂಲ್ಸ್ ಸಹ ಇವೆ. ಸಾವಿರ ಪೌಂಡ್ ತೂಕದ ದೈತ್ಯ ಹೇಸರಗತ್ತೆಯೊಂದು ಸಹ ಇದೆ. ಜಾರ್ಜ್ ವಾಷಿಂಗ್ಟನ್ ಒಬ್ಬ ಹೇಸರಗತ್ತೆ ತಳಿಗಾರ. ಆದರೆ ಎಲ್ಲಾ ಹೇಸರಗತ್ತೆಗಳು ರಾಜಕೀಯವನ್ನು ಪ್ರತಿರೋದಿಸುತ್ತವೆ. ಯಾವುದೇ ಆದರ್ಶವಾದಿ ಹೇಸರಗತ್ತೆ ಇಲ್ಲ.
Maybe she will, maybe she won’t.
John Stanmeyer
ಮಿಶ್ರತಳಿಯವಾಗಿರುವುದರಿಂದ, ಹೇಸರಗತ್ತೆಗಳು ಜೈವಿಕವಾಗಿ ಗೊಡ್ಡು, ಇದು ಅವುಗಳ ಸ್ವಭಾವವನ್ನು ವಿವರಿಸಲು ಸಹಾಯ ಮಾಡುತ್ತದೆ: ಪ್ರಪಂಚವನ್ನು ಕಂಡರೆ ಕೋಪ.
ಮೆಕ್ಸಿಕನ್ನರಲ್ಲಿ ಒಂದು ಗಾದೆ ಮಾತಿದೆ: "ಒಂದು ಹೇಸರಗತ್ತೆ ಅದರ ಮಾಲೀಕನನ್ನು ಹೇಗೆ ಕೊಲ್ಲಬೇಕೆಂದು ದಿನದಲ್ಲಿ 7 ಬಾರಿ ಆಲೋಚಿಸುವುದಂತೆ." ನಿಸ್ಸಂದೇಹವಾಗಿ ಇದು ಉತ್ಪ್ರೇಕ್ಷೆ. ಆದಾಗ್ಯೂ, ಯಾರಿಗೂ, ಈ ಅನಿಶ್ಚಿತ ಯುಕ್ತಿಯ ಮೇಲೆ ಭಿನ್ನಾಭಿಪ್ರಾಯವಿಲ್ಲ.
ಹೇಸರಗತ್ತೆಗಳು ಹೆಸರನ್ನು ಸಹಿಸುವುದಿಲ್ಲ.
ಈ ವಾಸ್ತವಸಂಗತಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಬಹುದು. ನಿಜ, ಯಾರು ಬೇಕಾದರೂ ಹೇಸರಗತ್ತೆಯನ್ನು ಅವರಿಷ್ಟದಂತೆ ಕರೆಯಬಹುದು. ಉದಾಹರಣೆಗೆ, ಟರ್ಕಿಯ ಉದ್ದಕ್ಕೂ ನನ್ನ ನಡೆಯುವ ಜೊತೆಗಾರರಾಗಿ ಬಂದವರೆಲ್ಲ ನಮ್ಮ ಬಿಳಿ ಜೆನ್ನಿಗೆ ಬೇರೆ ಬೇರೆ ನಾಮಕರಣ ಮಾಡಿದ್ದಾರೆ. ಬಾರ್ಬರಾ ಎಂದು ಕರೆದ ಡೆನಿಜ಼್ ಕಿಲಿಕ್, ಅದಕ್ಕೆ ಕಾರಣವೇನೆಂದು ಅವನೊಬ್ಬನೆ ವಿವರಿಸಬಲ್ಲ. ಮುಸ್ತಫಾ ಫಿಲಿಜ಼್ ಅವಳಿಗೆ ಸನ್ಶೈನ್ ಎಂಬ ಬಿರುದು ಕೊಟ್ಟ. ಮುರಾತ್ ಯಾಜ಼ರ್ ಅವಳನ್ನು ಸ್ವೀಟೀ ಎಂದು ಕರೆದ. ಜಾನ್ ಸ್ಟ್ಯಾನ್ಮೆಯೆರ್, ನನ್ನ ಛಾಯಾಗ್ರಾಹಕ ಸಹೋದ್ಯೋಗಿ, ಅವಳನ್ನು ಸ್ನೋ ಫ್ಲೇಕ್ ಎಂದು ಉಲ್ಲೇಖಿಸುತ್ತಾನೆ. ನಾನು ಕಿರ್ಕಾತಿರ್, ಎಂದು ಕರೆಯಲು ಇಷ್ಟಪಡುತ್ತೇನೆ. "ಬೂದು ಬಣ್ಣದ ಹೇಸರಗತ್ತೆ"ಗೆ ಟರ್ಕಿಷ್ ಹೆಸರು. ಇದು ಅವಳ ಹಳೆ ಯಜಮಾನ ಅನುಗ್ರಹಿಸಿದ ಮೂಲ ಹೆಸರು, ಮರ್ಸಿನ್ ನ ಗುಡ್ಡಗಾಡು ಅರಣ್ಯ ಪ್ರದೇಶದ ಅಲೇವಿ ಬುಡಕಟ್ಟಿನ ಮರಕುಯ್ಯುವವ. ಸತ್ಯವೇನೆಂದರೆ, ಎಲ್ಲ ಹೇಸರಗತ್ತೆಗಳಂತೆ, ಇವಳೂ ಸಹ ಕ್ಷುದ್ರಮನುಷ್ಯರು ಇಟ್ಟ ಯಾವ ತಲೆಬರಹಕ್ಕೂ ಉತ್ತರ ನೀಡುವುದಿಲ್ಲ. ಕಿರ್ಕಾತಿರ್ ಕರೆದ ತಕ್ಷಣ ಬರುವುದಿಲ್ಲ. ಅಥವ ಸಿಳ್ಳೆ ಹಾಕಿದಾಗಲೂ ಬರುವುದಿಲ್ಲ. ಅವಳಿಗೆ ಬರಬೇಕೆನ್ನಿಸಿದಾಗ ಮಾತ್ರ ಬರುತ್ತಾಳೆ. ಇದೇನು ಆಗಾಗ್ಗೆ ಆಗುವುದಿಲ್ಲ.
ಕಿರ್ಕಾತಿರ್ಗೆ 22 ವರ್ಷ ವಯಸ್ಸು.
Mules eat everything. (One of my cargo mules in Jordan, Selwa, ate my Bedouin guide’s walking stick.)
John Stanmeyer
ಹೇಸರಗತ್ತೆಯ ವರ್ಷಗಳಲ್ಲಿ ಎಷ್ಟು ವರ್ಷಗಳಾಗಿರಬಹುದು? 5 ಮಿಲೆನಿಯಗಳಿರಬಹುದು. ಕಿರ್ಕಾತಿರ್ಳ ಜೊತೆ ಜಾಡಿನಲ್ಲಿ ನಡೆಯುವುದೆಂದರೆ ಈ ಭೂಗ್ರಹದ ಮೇಲೆ ಜೀವಿಸಿರುವ ಪುರಾತನ ಜೀವಿಯೊಂದರ ಜೊತೆ ನಡೆದಂತೆ: ರೆಡ್ವುಡ್ ಅಥವ ಬ್ರಿಸಲ್ ಕೋನ್ ಪೈನ್ ಮರಕ್ಕೆ ಕಟ್ಟಿಹಾಕಿ ಭಾನುವಾರ ಬೆಳಗಿನ ಹೊತ್ತು ವಿರಾಮವಾಗಿ ಅಲೆದಾಡುವಂತೆ. ಮೊದಲಬಾರಿ ಅವಳನ್ನು ಪರೀಕ್ಷಾರ್ಥ ಅಡ್ಡಾಟಕ್ಕೆ, ಜುಲೈ ತಿಂಗಳಲ್ಲಿ ಕರೆದೊಯ್ದಾಗ, ಬೆನ್ನ ಮೇಲೆ ಜೀನು ಹಾಕುವ ಅಂಚಿನಲ್ಲಿ ಅದರ ಚರ್ಮ ಸುಕ್ಕುಗಟ್ಟಿತ್ತು. "ಆಕೆಗೆಷ್ಟು ವಯಸ್ಸಾಗಿದೆ?" ಎಂದು ಮಾಲೀಕನನ್ನ ಕೇಳಿದೆ. ಮಾಲೀಕ, ಅಹಮದ್, ಸ್ವರ್ಗದತ್ತ ನೋಡಿದ. ಅಂಗೈಯನ್ನು ಮೇಲೆಕ್ಕೆತ್ತಿ ಭುಜಗಳನ್ನು ಅಲುಗಿಸಿದ. ಅಹ್ಮದ್ ತಕ್ಕ ಮಟ್ಟಿನ ನಟ. ಅವಳ ದಾಖಲೆಗಳು, ಅವಳನ್ನು ಖರೀದಿಸಿದ ನಂತರ, ಸತ್ಯವನ್ನು ಹೇಳಿದವು.
ಅವಳಿಗೇನೂ ತುಂಬಾ ವಯಸ್ಸಾಗಿಲ್ಲ ಎಂದು ಮೂಸಿದ ಡೆನಿಜ಼್ ಕಿಲಿಕ್, ನಾನು ಟರ್ಕಿಗೆ ಬರುವ ಮುನ್ನವೆ ಇವಳನ್ನು ಖರೀದಿಸಿಲು ಒಪ್ಪಿಕೊಂಡಿದ್ದ. ಹಾಗಾಗಿ ಇದು ಅವನ ಜವಾಬ್ದಾರಿಯೆಂದು ತಿಳಿದಿದ್ದ. ಟರ್ಕಿಯಲ್ಲಿ ಪ್ರಯಾಣದ ಮೊದಲ ದಿನದ ಮದ್ಯಾಹ್ನ ಪೂರ್ತಿ ಅವನ ಸ್ಮಾರ್ಟ್ ಫೋನ್ ನಲ್ಲಿ ಗಂಭೀರವಾಗಿ ಇಣುಕಿ ನೋಡುತ್ತಿದ್ದ. ಹೇಸರಗತ್ತೆಗಳು 50ವರ್ಷವೇನು, ನೂರು ವರ್ಷ ಬದುಕುವುವೆಂದು ಖಚಿತ ಪಡಿಸುವ ವೆಬ್ಸೈಟನ್ನು ಕಷ್ಟಪಟ್ಟು ಹುಡುಕುತ್ತಿದ್ದ.
ಹೇಸರಗತ್ತೆಗಳು ಎಲ್ಲವನ್ನೂ ತಿನ್ನುತ್ತವೆ.
ಈ ತರಹ ಹಳ್ಳಿ- ದಾರಿಯ ಕಾಲ್ನಡಿಗೆ ಪ್ರಯಾಣದಲ್ಲಿ, ಸಹಿಸಿಕೊಳ್ಳುವ ಹೊಟ್ಟೆ ಬಹಳ ಒಳ್ಳೆಯ ಗುಣ. ಕುದುರೆಗಳು ಬಹಳ ಸೂಕ್ಷ್ಮ ಸ್ವಭಾವದವು. ಮೊದಲೇ ಹೇಳಿದಂತೆ ಹೇಸರಗತ್ತೆಯ ಜೀರ್ಣಶಕ್ತಿ ಅದರದೆ ಆದ ಅನಾನುಕೂಲತೆಗಳನ್ನು ಹೊಂದಿದೆ. ಜೋರ್ಡಾನಿನಲ್ಲಿ, ನಡೆಯುವಾಗ ಜೊತೆಗಾರ ಸರಕು ಸಾಗಣಿಕೆಯ ಹೇಸರುಗತ್ತೆಗಳಲ್ಲಿ, ಒಂದಾದ ಸೆಲ್ವ ಎಂಬ ಒಂದು ಪ್ರಾಣಿ ನನ್ನ ಬೆಡೂಯಿನ್ ಮಾರ್ಗದರ್ಶಿ ಹಮೌದಿ ಎನ್ವಾಜೆ ಅಲ್ ಬೆಡುಲ್ ನ ಕೈ ಕೋಲನ್ನು ತಿಂದು ಹಾಕಿತ್ತು. ಬರಡು ಮರುಭೂಮಿಯಲ್ಲಿ ಕೈಕೋಲು ಸಿಕ್ಕುವುದು ಕಷ್ಟ. ಹಮೌದಿ, ಸೆಲ್ವ ಗೆ ಶಾಪ ಹಾಕಿದ. ಕೆಲವು ದಿನಗಳ ತೀವ್ರ ಹುಡುಕಾಟದ ನಂತರ, ಕೊನೆಗೂ ಒಂದು ಕಡ್ಡಿ ಸಿಕ್ಕಿತು. ಸೆಲ್ವ ಅದನ್ನೂ ಸಹ ತಿಂದು ಹಾಕಿತು.
ಹೇಸರಗತ್ತೆಗಳು ಕುದುರೆಗಳಿಗಿಂತ ತೀಕ್ಷ್ಣಮತಿಗಳು.
ಇದು ಹೇಸರಗತ್ತೆಗಳ ಕುಲದಲ್ಲಿ ಎಲ್ಲರಿಗೂ ತಿಳಿದಿರುವಂತ ವಾಸ್ತವ ಸಂಗತಿ. ಹೇಸರಗತ್ತೆಗಳು, ಉದಾಹರಣೆಗೆ, ಎಂದಿಗೂ ಅನಗತ್ಯವಾದ ಅವಕಾಶಗಳನ್ನು ತೆಗೆದುಕೊಳ್ಳುವುದಿಲ್ಲ. ಹೇಸರಗತ್ತೆಗಳ ಗಾಡ ಕಪ್ಪಿನ ಕಣ್ಣುಗುಡ್ಡೆಗಳನ್ನು ನೋಡಿದರೆ: ಏನೊ ಗುಣಿಸದ ಲೆಕ್ಕಾಚಾರಗಳು ಅವುಗಳ ಕಣ್ಣಿನ ಅಕ್ಷಿಪಟಲದ ಹಿಂಭಾಗದಲ್ಲಿ ಹಂತ ಹಂತವಾಗಿ ದುಮ್ಮಿಕ್ಕುತ್ತಿರುವುದನ್ನು ನೀವು ಗಮನಿಸಬಹುದು. ಹೇಸರಗತ್ತೆಗಳು ಸದಾಕಾಲ ಪ್ರತಿ ತಂತ್ರವನ್ನು ಹೆಣೆಯುತ್ತಿರುತ್ತವೆ. ಕಿರ್ಕಾತಿರ್ ಬಹಳ ಜಾಗರೂಕ ಹೇಸರಗತ್ತೆ. ಆಕೆ ಸಂಚಾರ ನಿಯಮದ ಎಲ್ಲಾ ಸಂಜ್ಞೆಗಳ ಮೇಲೆ ಗಮನವಿಟ್ಟಿರುತ್ತಾಳೆ. ಎಲ್ಲಾ ರಸ್ತೆ ಡುಬ್ಬಗಳ ಹತ್ತಿರವೂ ನಿಂತು ವಾಹನಗಳ ವೇಗವನ್ನು ಕುಂಠಿತಗೊಳಿಸುತ್ತಾಳೆ. ಬಹಳ ದೀರ್ಘಕಾಲದವರೆಗೆ ಇದನ್ನು ಮಾಡುತ್ತಿದ್ದಳು.
ಒಂದು ಅಪರಾಹ್ನ, ಡೆನಿಜ಼್ ಮತ್ತು ನಾನು ಗಜಿಯನ್ಟೆಪ್ ಎಂಬ ಟರ್ಕಿಯ ನಗರದಲ್ಲಿದ್ದ ಪಶುವೈದ್ಯ ಕಛೇರಿಗೆ ನಡೆದೆವು. ನಮಗೆ ತಜ್ಞರ ಅಭಿಪ್ರಾಯ ಅಗತ್ಯವಾಗಿತ್ತು.
Walking with Kirkatir (aka Snowflake, and many other honorifics) is like trekking with the planet’s oldest living being.
John Stanmeyer
“ನಮ್ಮ ಹೇಸರಗತ್ತೆಗೆ ಒಂದು ಸಮಸ್ಯೆ ಇದೆ,” ಎಂದು ಒಬ್ಬ ಸಣಕಲ, ತರುಣ, ಲೆಕ್ಕಾಚಾರ ಗುಣದ ವೈದ್ಯವೃತ್ತಿಯ ಬಿಳಿ ಪೋಷಾಕನ್ನು ಧರಿಸಿ ಮುಂಗಟ್ಟೆಯ ಹಿಂದೆ ನಿಂತಿದ್ದ ಪಶು ವೈದ್ಯನಿಗೆ ತಿಳಿಸಿದೆವು. "ನಮ್ಮ ಹೇಸರಗತ್ತೆಯು ರಾತ್ರಿ ಇಡಿ ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ನಮ್ಮ ಶಿಬಿರದ ಹತ್ತಿರ ಮರಕ್ಕೆ ಆಕೆಯನ್ನು ಕಟ್ಟಿ ಹಾಕಿದಾಗ, ಆಕೆ ಹಿಂದೆ ಮುಂದಕ್ಕೆ ಓಡಾಡುವಳು - ಹೌದು, ಹಿಂದಕ್ಕೆ ಮತ್ತು ಮುಂದಕ್ಕೆ - ಸತತವಾಗಿ. ಈ ವಿಚಿತ್ರ ನೃತ್ಯವನ್ನು ಮಾಡುತ್ತಾಳೆ."
ಮತ್ತು ನಂತರ, ನಾನು ಮತ್ತು ಡೆನಿಜ಼್ ಆಂಗಿಕವಾಗಿ ಅಭಿನಯಿಸಿದೆವು, ಕಿರ್ಕಾತಿರ್ಳ ರುಂಬಾವನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭಿನಯಿಸಿದೆವು: ಮೊಣಕಾಲುಗಳನ್ನು ಜೋಡಿಸಿಕೊಂಡು ಮೂರು ಹೆಜ್ಜೆ ಮುಂದೆ ಬಂದು, ನಮ್ಮ ತಲೆಗಳನ್ನು ನಾಟಕೀಯವಾಗಿ ಒಗೆದು - ವಿಶಾಲವಾಗಿ, ಎಡದಿಂದ ಬಲಕ್ಕೆ ಸುತ್ತಿ - ನಂತರ ಮೂರು ಹೆಜ್ಜೆ ಹಿಂದಕ್ಕೆ ನಡೆದೆವು. ಪಶುವೈದ್ಯರಲ್ಲಿ ಕೇಳಿದೆವು. ಪ್ರಾಯಶಃ, ನಮ್ಮ ಹೇಸರಗತ್ತೆಯೇನಾದರೂ ತಿಳಿಯಲಾರದ ನರರೋಗದಿಂದೇನಾದರೂ ಬಳಲುತ್ತಿದೆಯೆ? ಅಥವ ಹೇಸರಗತ್ತೆಯ ಅನಿದ್ರಾ ರೋಗವೆ? ನಮ್ಮ ಹೇಸರಗತ್ತೆಯೇನು ಹುಚ್ಚಿಯೆ?
ಅವರಿಗೆ ಮನನ ಮಾಡಿಕೊಡಲು ಹೆಜ್ಜೆಗಳನ್ನು ಮೂರ್ನಾಲ್ಕು ಬಾರಿ ಪುನರಾವರ್ತಿಸಿದೆವು. ನಿಖರವಾದ ಖಾಯಿಲೆಯ ಗುಣಗಳಿಗಾಗಿ.
ಪಶುವೈದ್ಯನ ಕಣ್ಣುಗಳು ನಮ್ಮೆಡೆಗೂ ಹಾಗೂ ಕ್ಲಿನಿಕ್ನ ತೆರೆದ ಬಾಗಿಲಲ್ಲಿ ಗುಂಪುಗೂಡುತ್ತಿದ್ದ ಜನರ ಕಡೆಗೂ ಹೊರಳಾಡುತ್ತಿದ್ದವು. ಇಲ್ಲ, ಎಂದು ಕೊನೆಗೂ ಪಶುವೈದ್ಯ ಹೇಳಿದ. ನಮ್ಮ ಹೇಸರಗತ್ತೆ, ಸಂಪೂರ್ಣವಾಗಿ ಸಹಜ ಸ್ಥಿತಿಯಲ್ಲಿದೆ, ಎಂದು ನಮಗೆ ಭರವಸೆ ನೀಡಿದನು.
Kirkatir gears up for a long walk.
Video by Paul Salopek
