ಮೂರು ವರ್ಷಗಳ ಹಿಂದೆ, ಹಳೆ ಸೋವಿಯತ್ ರಿಪಬ್ಲಿಕ್ ಆಫ್ ಜಾರ್ಜಿಯಾದ ಅಲಜ಼ಾನಿ ನದಿಯ ದಂಡೆಯಲ್ಲಿ, ಪುರಾತತ್ವಶಾಸ್ತ್ರಜ್ಞ ಜುರಾಬ್ ಮಕರದ್ಜೆಯವರು ಸುತ್ತಲೂ ಇದ್ದ ವ್ಯವಸಾಯದ ಹಸಿರು ಭೂಮಿಯಿಂದ ಮೇಲೆದ್ದಿದ್ದ ೪೦ ಅಡಿ ಆಳದವರೆವಿಗೆ ಇದ್ದ ಗುಡ್ಡವನ್ನುಕಡಿದು ಸಮಾಧಿ ಸ್ಥಳವನ್ನು ನೋಡಿದ್ದರು.
“ನಮ್ಮಲ್ಲಿದ್ದ ಸಸ್ಯಶಾಸ್ತ್ರಜ್ಞರೊಬ್ಬರು ಮೊದಲು ಅದನ್ನು ಗುರುತಿಸಿದರು,” ಎಂದು ಮಕರದ್ಜೆ ಯವರು ಭೂಮಿಯಿಂದ ಹೊರಹಾಕಿದ್ದ ಕೆಲವು ಕಲಾಕೃತಿಗಳಿಂದ ಹೊರಹೊಮ್ಮುತ್ತಿದ್ದ ಸುವಾಸನೆ ಗುರುತಿಸುತ್ತಾ ಹೇಳಿದರು. “ಆಕೆ ಪ್ರಯೋಗ ಶಾಲೆಯಲ್ಲಿದ್ದಳು. ಸೂಕ್ಷ್ಮದರ್ಶಕದೊಂದಿಗೆ ಕೆಲಸ ಮಾಡುತ್ತಿದ್ದಳು. ಅವಳು ಕೆಲವು ಮಾದರಿಗಳನ್ನು ವಿಶ್ಲೇಷಿಸುತ್ತಿದ್ದಳು. ಅವಳ ಮುಖದಲ್ಲಿ ಮಂದಹಾಸ ಮೂಡಿತು."
ಈ ಸಂದರ್ಭದಲ್ಲಿ, ಆ ಮಾದರಿಗಳು, ಕಾಡು ಹಣ್ಣುಗಳಾಗಿದ್ದವು - ಸಮಾಧಿಯಲ್ಲಿದ್ದ ಮೃತದೇಹಗಳಿಗೆ ಅರ್ಪಿಸಿದ್ದವುಗಳಾಗಿದ್ದವು. ಅವುಗಳು ಬೀರುತ್ತಿದ್ದ ಕಂಪು: ದಟ್ಟವಾಗಿ ಸಿಹಿಯುಳ್ಳವು, ಆದರೆ ತಗ್ಗಿದ ಕಸ್ತೂರಿಯ ಸುವಾಸನೆ, ಮೊಲಾಸಿಸ್ನ ಕುರುಹುಗಳಿದ್ದವು. ಆ ಕಾಡು ಹಣ್ಣುಗಳು ಬಹಳ ಆಶ್ಚರ್ಯಕರ ರೀತಿಯಲ್ಲಿ ಸಂರಕ್ಷಿಸಲ್ಪಟ್ಟಿದ್ದವು. ಅವುಗಳ ಬಣ್ಣ ಇನ್ನೂ ಕೆಂಪಗಿತ್ತು. ಅವು ೪೩೦೦ ವರ್ಷಗಳಷ್ಟು ಹಿಂದಿನವು. ಅವುಗಳನ್ನು ಬಹಳಷ್ಟು ಎಚ್ಚರಿಕೆಯಿಂದ ಪುರಾತನ ಜೇನು ತುಪ್ಪದಲ್ಲಿ ಕೆಡದಂತೆ ಸಂರಕ್ಷಿಸಿಡಲಾಗಿತ್ತು.
ಅನಾನೂರಿ-೩ ಎಂದು ಕರೆಯಲ್ಪಡುತ್ತಿದ್ದ ಆ ಕಂಚಿನ ಯುಗದ ಸಮಾಧಿಸ್ಥಳದಲ್ಲಿ ಕಂಡುಬಂದ ಬೇರೆವಸ್ತುಗಳು, ಇನ್ನೂ ಹೆಚ್ಚು ನಯನಮನೋಹರವಾಗಿದ್ದವು. ಮರದ ದಿಮ್ಮಿಗಳಿಂದ ನಿರ್ಮಿಸಿದ್ದ ಆ ಸಮಾಧಿ ಕೋಣೆಗಳಲ್ಲಿ ಎರಡು ಬಂಡಿಗಳಿದ್ದವು. ಎತ್ತಿನ ನೊಗದೊಂದಿಗೆ, (ಅಷ್ಟು ಹಿಂದಿನ ಕಾಲದ ಕಾಕಸಸ್ನ ದಕ್ಷಿಣ ಭಾಗಕ್ಕೆ ಇನ್ನೂ ಪಳಗಿಸಿದ ಕುದುರೆಗಳು ಬಂದಿರಲಿಲ್ಲ); ಸುಂದರವಾದ ಚಿನ್ನದ ಆಭರಣಗಳು: ಅಲ್ಲಿದ್ದ ಮಿಶ್ರಲೋಹದ ಮಣಿಗಳು ಬಾಲ್ಟಿಕ್ ಪ್ರದೇಶದಿಂದಲೊ ಅಥವಾ ಭಾರತದಿಂದಲೋ ವ್ಯಾಪಾರ ಮಾಡಿ ತಂದವುಗಳಾಗಿತ್ತು; ಮತ್ತು ಜವಳಿ, ಚರ್ಮಗಳು ಮತ್ತು ಬುಟ್ಟಿಗಳು ಬಹಳ ವಿಸ್ಮಯಕಾರಿಯಾಗಿ ಸುಸ್ಥಿತಿಯಲ್ಲಿದ್ದವು. ಆ ದಿಬ್ಬದಲ್ಲಿ ಹೂತಿದ್ದವರು ಯಾರಿದ್ದರೂ ಅವರು ಯಾರೊ ಮುಖ್ಯಸ್ಥರೊ ಅಥವಾ ಯಾರೊ ಧಾರ್ಮಿಕ ಮುಖಂಡರಿರಬಹುದು. ಆತನ ಜೊತೆ ಆರು ದೇಹಗಳಿದ್ದವು. ಗುಲಾಮರಿರಬಹುದು. ಅನಾನೌರಿ-೩ ಖಂಡಿತವಾಗಿಯೂ ಮಾರ್ಟ್ಕೊಪಿ ಮತ್ತು ಬೆಡೆನಿ ಎಂದು ಕರೆಯಲ್ಪಡುತ್ತಿದ್ದ ಈ ಅಜ್ಞಾತ ಜನಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಇವರುಗಳು ಕಳೆದ ಶತಮಾನಗಳಲ್ಲಿ ಕಾಳುಗಳನ್ನು ಬೆಳೆಯುತ್ತಿದ್ದ ಮತ್ತು ಜಾನುವಾರುಗಳನ್ನು ಸಾಕುತ್ತಿದ್ದ ವಿಶಾಲವಾದ ಟ್ರಾನ್ಸ್ ಕಾಕೇಷಿಯನ್ ನಾಗರೀಕತೆಯಾದ ಅರಾಕ್ಸಸ್-ಕುರಾ ಸಂಸ್ಕೃತಿಗೆ ಸೇರಿದವರು. ಮಕರಾಜೆಯವರು ಟಿಬಿಲಿಸಿಯ ಓಟರ್-ಲಾರ್ಡ್ ಕಿಪನಿಡ್ಜ಼ೆ ಪುರಾತತ್ವ ಕೇಂದ್ರದ ಒಳಗೆ ಮೇಜಿನ ಮೇಲೆ ಹರಡಿದ್ದ ಈ ಅತ್ಯಂತ ಹಳೆಯ ನಿಕ್ಷೇಪವನ್ನು ನೋಡಿದಾಗ ನನ್ನ ತಲೆಗೆ ಹೊಳೆದಿದ್ದು ಈ ರುಚಿಕಟ್ಟಾದ ಜೀವ ವಿಜ್ಞಾನದ ಟಿಪ್ಪಣಿ: ಪುರಾತತ್ವ ಶಾಸ್ತ್ರಜ್ಞರ ಈ ಕಾರ್ಯಕ್ಕೆ ಇತಿಹಾಸ ಪೂರ್ವದ ಜೇನ್ನೊಣಗಳು ಸಹಾಯ ಮಾಡಿದ್ದವು
"ತೇವದ ಜೇಡಿ ಮಣ್ಣು ಕಲಾಕೃತಿಗಳನ್ನು ಕೊಳೆಯದಂತೆ ರಕ್ಷಿಸಿದೆ", ಎಂದು ಗೂಳಿಯ ಭುಜದ, ಚೌಕಾಕಾರದ ದವಡೆಯುಳ್ಳ ನಾಚಿಕೆಯ ಸ್ವಭಾವದ, ದೊಡ್ಡ ಕೆಂಪು ಮುಖದ ಮಕರದ್ಜೆ ಹೇಳುತ್ತಾರೆ. “ಆದರೆ ಈ ಜನರು ಸಮಾಧಿ ಸ್ಥಳದಲ್ಲಿದ್ದ ಸಾಮಾನುಗಳನ್ನು ರಕ್ಷಿಸಲು ಜೇನುತುಪ್ಪವನ್ನು ಸವರಿದ್ದಾರೆ. ಅವರಿಗೆ ತಾವು ಏನು ಮಾಡುತ್ತಿದ್ದೇವೆಂದು ತಿಳಿದಿತ್ತು."
Archaeologist Zurab Makharadze and a bushel of 4,000-year-old nuts.
Paul Salopek
ಕಾಡು ಹಣ್ಣುಗಳಷ್ಟೆ ಅಲ್ಲ - ನೆಲದ ಹಣ್ಣುಗಳು - ಧಾರ್ಮಿಕ ಆಚರಣೆಗೆ ಅರ್ಪಿಸಿದ್ದ ಹಲವಾರು ಬುಷೆಲ್ಗಳಷ್ಟು ಪದಾರ್ಥಗಳು, ಹೇಜ಼ಲ್ ಕಾಯಿಗಳನ್ನು ಜೇನುತುಪ್ಪದಲ್ಲಿ ನೆನೆಸಲಾಗಿತ್ತು, ಜೊಂಡಿನಲ್ಲಿ ಹೆಣೆದಿದ್ದ ಬುಟ್ಟಿಗಳಷ್ಟು ಬೀಜಗಳನ್ನು ಸಹ. ಕೆಲವು ನೇಯ್ದ ಬಟ್ಟೆಗಳು ಮತ್ತು ಕೊಳೆಯುವಂಥ ಸಾವಯವ ವಸ್ತುಗಳನ್ನು ಸಹ. ಇಲ್ಲಿಂದ ಬಿಡುಗಡೆ ಹೊಂದಿದ ಆತ್ಮಗಳು ಮುಂದಿನ ಪ್ರಪಂಚದಲ್ಲಿ ಬದುಕಲು ಬೇಕಾದ ಪರಿಕರಗಳನ್ನು ಹೊಂದಲು ಇವೆಲ್ಲವುಗಳನ್ನು ಜೋಡಿಸಲಾಗಿತ್ತು.
ಕಳೆದ ಎರಡು ವರ್ಷಗಳಿಂದ ಆಫ್ರಿಕಾದ ಉತ್ತರದಿಂದ ಮಧ್ಯ ಏಷ್ಯಾಕ್ಕೆ ಮತ್ತು ಟರ್ಕಿಯ ಪೂರ್ವದಲ್ಲಿನ ಕಾಕಸಸ್ಗೆ ನಡೆಯುವಾಗ ಈ ಅಪರೂಪದ ಪ್ರಯಾಣದುದ್ದಕ್ಕೂ ನನಗೆ ಶಕ್ತಿ ನೀಡಿದ್ದು ಸ್ಥಳೀಯ ಜೇನುತುಪ್ಪ. ಬಿಸಿಯಾದ ಅರೇಬಿಯಾದಲ್ಲಿ ಗಾಳಿಯಂತೆ ನಿರ್ಮಲವಾಗಿದ್ದ ಮರುಭೂಮಿಯ ಜೇನುತುಪ್ಪವನ್ನು ತಿಂದೆ. ಅನಾಟೊಲಿಯಾದ ಹಿಮವದ್ಭರಿತ ಪರ್ವತಗಳಲ್ಲಿ ಹಿಮದಂತೆ ಕಾಣುತ್ತಿದ್ದ, ಹಳೆಯದಾದ ಹರಳೀಕೃತ ಜೇನುತುಪ್ಪವನ್ನು ತಿಂದೆ. ಶಕ್ತಿಯಿಂದ ತುಂಬಿದ ಜೇನುತುಪ್ಪ ಪ್ರಯಾಣಿಕರ ರಾಕೆಟ್ ಇಂಧನವಾಗಿದೆ. ಸುಟ್ಟಿರುವ ಜಾಗಕ್ಕೆ ಒಳ್ಳೆಯ ಮುಲಾಮು ಆಗುತ್ತದೆಂದು ಸಹ ನಾನು ಬಲ್ಲೆ.
ಸಹಸ್ರಾರು ವರ್ಷಗಳಿಂದ ಈ ಜೇನುತುಪ್ಪ ಸರ್ವರೋಗಕ್ಕೂ ಮದ್ದೆಂದು ಹೆಸರಾಗಿದೆ.
"ತುಸು ಶಾಖವನ್ನು ನೀಡುತ್ತದೆ, ಗಾಯಗಳನ್ನು ಮತ್ತು ಹುಣ್ಣುಗಳನ್ನು ಶುದ್ಧಮಾಡುತ್ತದೆ, ತುಟಿಯಲ್ಲಿರುವ ಹುಣ್ಣುಗಳನ್ನು ಮೃದುಗೊಳಿಸುತ್ತದೆ, ಕುರಗಳನ್ನು ಮತ್ತು ಗಾಯಗಳನ್ನು ಗುಣಪಡಿಸುತ್ತದೆ," ಎಂದು ೪ನೇ ಶತಮಾನ ಬಿ.ಸಿ. ಯ ಗ್ರೀಕ್ನ ಪ್ರಾಯೋಗಿಕ ವೈದ್ಯ ಹಿಪೋಕ್ರೇಟ್ಸ್ ಹೇಳುತ್ತಾನೆ.
ಆದರೆ ಅವುಗಳ ಶವಸಂರಕ್ಷಿತ ಶಕ್ತಿಗಳ ಬಗ್ಗೆ ಹೆಚ್ಚು ತಿಳಿದಿಲ್ಲ.
ಜೇನುತುಪ್ಪದಲ್ಲಿ ಅತಿಯಾಗಿರುವ ಸಕ್ಕರೆಯ ಅಂಶ ಉಪ್ಪಿನ ರೀತಿಯಲ್ಲಿ ವರ್ತಿಸುತ್ತದೆ: ಅದು ಬ್ಯಾಕ್ಟೀರಿಯಾದಿಂದ ನೀರಿನ ಅಂಶವನ್ನೆಲ್ಲ ಹೀರಿಕೊಂಡು ಸೂಕ್ಷ್ಮ ಜೀವಿಗಳನ್ನು ಒಣಗಿಸಿ ಸಾವಿನಡೆಗೆ ತಳ್ಳುತ್ತದೆ. ಜೇನುತುಪ್ಪದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಸಹ ಸಣ್ಣ ಪ್ರಮಾಣದಲ್ಲಿ ಇದೆ. ಇದು ಪೂತಿನಾಶಕದ ಗುಣವುಳ್ಳದ್ದು. ಕಾಡು ಹಣ್ಣುಗಳ ಮೇಲೆ ಅಥವಾ ಕಾಯಿಗಳ ಮೇಲೆ ಧಾರಾಳವಾಗಿ ಜೇನುತುಪ್ಪವನ್ನು ಸವರಿದರೆ, ಸಾವಿನ ನಂತರದ ಜೀವನದಲ್ಲಿ ಬೇಕಾದ ಕುರುಕಲು ತಿಂಡಿಯಾಗಿರುತ್ತದೆ. ಶಾಶ್ವತವಾಗಿ ನಶಿಸದಿರುವ ಆಹಾರವಾಗಿರುತ್ತದೆ. ಇದು ಶವಗಳಿಗೂ ಸಹ ಅನ್ವಯಿಸುತ್ತದೆ. ಪುರಾತನ ಅಸ್ಸೀರಿಯನ್ನರು ತಮ್ಮ ಶವಗಳನ್ನು ಜೇನುತುಪ್ಪದಿಂದ ಸಂರಕ್ಷಿಸುವುದನ್ನು ಹಿರೋಡೊಟುಸ್ ಗುರುತಿಸಿದ್ದಾನೆ ಮತ್ತು ೩೨೩ ಬಿ.ಸಿ.ಯಲ್ಲಿ ಸತ್ತ ನಂತರ, ಪ್ರಸಿದ್ದ ಅಲೆಕ್ಸಾಂಡರ್ ನ ಶವವನ್ನು ಚಿನ್ನದ ಶವಸಂಪುಟದ ಒಳಗೆ ಜೇನುತುಪ್ಪದಲ್ಲಿ ಮುಳುಗಿಸಿಡಲಾಯಿತೆಂದು ವರದಿಗಳಿವೆ. ಸಾರ್ವಜನಿಕ ಪ್ರದರ್ಶಿತವಾಗುವ ಆತನ ವಸ್ತುಗಳು ಹೆಚ್ಚು ಅಂದವಾಗಿರುವಂತೆ ನೋಡಿಕೊಳ್ಳಲಾಗಿದೆ.
ಆದರೆ ಇಲ್ಲೊಂದು ಮೆಲ್ಲಿಫಿಕೇಷನ್ ಎಂಬ ಆಶ್ಚರ್ಯಕರ ಸಂಗತಿಯಿದೆ.
ಮೆಲ್ಲಿಫಿಕೇಷನ್ ಎಂದರೇನು?
Human bones on the floor of the Ananauri 3 burial chamber. Scientists found them coated with the telltale remnants of honey—pollen and bee fragments.
Georgia National Museum
೧೬ ನೇ ಶತಮಾನದ ಚೀನಿ ಔಷದ ವ್ಯಾಪಾರಿ ಮತ್ತು ’ಬೆಂಗ್ಕಾಉ ಗ್ಯಂಗ್ಮು’ ಎಂಬ ಸ್ಮಾರಕಯುಕ್ತ ಪುಸ್ತಕದ ಲೇಖಕ ಲಿ ಶಿಜ್ಹನ್ನ ಪ್ರಕಾರ ಆ ಪುಸ್ತಕವೊಂದು ಡ್ರ್ಯಾಗನ್ ಮೂಳೆಗಳ ಕಷಾಯ ಮತ್ತು ಮನುಷ್ಯನ ತೀರಿಕೊಂಡ ಕೂದಲುಗಳಿಂದ ಸೂಚಿತವಾಗಿರುವ ರೋಗ ಪರಿಹಾರ ಗುಣಗಳುಳ್ಳ ಸಂಕಲನ - ಮೆಲ್ಲಿಫೀಕೇಷನ್ ಎಂದರೆ ಅರೇಬಿಯಾದ ಪರಹಿತ ಚಿಂತನೆ ಮಾಡುವ, ಸಾಮಾನ್ಯವಾಗಿ ವಯಸ್ಸಾದ ಪವಿತ್ರ ಪುರುಷರು, ಬೇರೆ ಆಹಾರ ಪದಾರ್ಥವನ್ನು ಸೇವಿಸುವುದನ್ನು ನಿಲ್ಲಿಸಿ ಜೇನುತುಪ್ಪವನ್ನು ಮಾತ್ರ ಸೇವಿಸಲು ಆರಂಭಿಸಿ ಎಲ್ಲಿಯವರೆವಿಗೆ ಎಂದರೆ ಅವರ ಬೆವರಲ್ಲೂ ಸಹ ಜೇನು ತುಪ್ಪ ಬರಬೇಕು. ಅವರ ಮಲವೂ ಜೇನುತುಪ್ಪವಾಗಬೇಕು, ಗಾಯವಾದರೂ ಜೇನುತುಪ್ಪವೆ ಸ್ರವಿಸಬೇಕು: ಒಟ್ಟಿನಲ್ಲಿ ಸಾಯುವವರೆವಿಗೂ. ನಂತರ ಸಕ್ಕರೆಯಿಂದ ಹರಳೀಕೃತಗೊಂಡ ದೇಹವನ್ನು ಜೇನುತುಪ್ಪದಿಂದ ತುಂಬಿರುವ ಬೃಹದಾಕಾರದ ಹೂಜಿಗಳಲ್ಲಿ ಒಂದು ಶತಮಾನದವರೆವಿಗೂ ಮುಳುಗಿಡಿಸುತ್ತಾರೆ. ಅಂತಿಮ ಫಲಿತಾಂಶ: ಮಾನವಾಕಾರದ ಕ್ಯಾಂಡಿ - “ಮೆಲ್ಲಿಫೈಡ್ ಮನುಷ್ಯ”- ಮುರಿದ ಎಲುಬುಗಳಿಗೆ ಅದ್ಭುತವಾದ ಪರಿಹಾರ.
ಅನಾನೌರಿ-೩ ದಿಬ್ಬದೊಳಗೆ ಹೆಸರಿಲ್ಲದ ಶವವೊಂದು ಜೇನುತುಪ್ಪದಿಂದ ಸಂರಕ್ಷಿಸಲ್ಪಟ್ಟಿತ್ತು.
“ಆ ದೇಹಗಳಲ್ಲಿ ನಿಜವಾದ ಜೇನುತುಪ್ಪ ವಿರಲಿಲ್ಲ” ಎಂದು ಜಾರ್ಜಿಯನ್ ಪುರಾತತ್ವಶಾಸ್ತ್ರಜ್ಞ, ಮಕರದ್ಜೆ ನನಗೆ ತಿಳಿಸಿದರು. “ಅದು ಬಹಳ ಹಿಂದೆಯೇ ಅದೃಶ್ಯವಾಗಿತ್ತು. ಅವರ ಮೂಳೆಗಳು ಹೂಗಳ ಪರಾಗದಿಂದ, ಮತ್ತು ಜೇನು ಹುಳುಗಳು ಮುರಿದ ಕಾಲ್ಬೆರಳುಗಳಿಂದ ಆವರಿಸಿತ್ತು.
