"ಉತ್ತರಕ್ಕೆ. ಜಿಬೌತಿಗೆ." (ಟಿಯಾರ ಡೆಲ್ ಫ಼್ಯೂಗೊ. ಎಂದು ನಾವು ಹೇಳುವುದಿಲ್ಲ. ಅದು ಬಹುದೂರದಲ್ಲಿರುವುದರಿಂದ - ಅರ್ಥವಿಲ್ಲದ್ದು ಎನ್ನಿಸುತ್ತೆ.)
"ನಿಮಗೇನಾದರೂ ಹುಚ್ಚುಗಿಚ್ಚು ಹಿಡಿದಿದ್ದೀಯಾ? ನಿಮ್ಮ ಆರೋಗ್ಯ ಸರಿ ಇಲ್ಲವೆ?"
ಪ್ರತ್ಯುತ್ತರವಾಗಿ, ಅಹ್ಮದ್ ಅಲೆಮಾ ಹೆಸನ್ - ಕಡ್ಡಿಯಂತಿದ್ದರೂ ಬಲಶಾಲಿ ಮತ್ತು ಕಿಡಿಗೇಡಿ ಸ್ವಭಾವದ ಮನುಷ್ಯ, ನನ್ನ ಮಾರ್ಗದರ್ಶಿ ಹಾಗೂ ಬೆಂಕಿಯಂತಿರುವ ಈ ಅಫಾರ್ ತ್ರಿಕೋನದಲ್ಲಿ ನನ್ನ ರಕ್ಷಕ - ಬಿದ್ದು ಬಿದ್ದು ನಗುತ್ತಾನೆ. ಎರಡು ಒಣಕಲ ಒಂಟೆಗಳ ಈ ಸಣ್ಣ ತಂಡದ ನಾಯಕ. ಅವನು ಕೇಕೆ ಹಾಕಿ ನಗುವುದನ್ನು ಬಹಳಷ್ಟು ಸಲ ಕೇಳಿದ್ದೇನೆ. ನಮ್ಮ ಈ ಯೋಜನೆಯ ಯಶಸ್ವಿಯ ಬಗ್ಗೆ ಶತಮಾನದ ತಮಾಷೆ ಎಂದು ವ್ಯಂಗ್ಯವಾಡುತ್ತಾನೆ. ಅವನಿಗೆ ಈ ಯೋಜನೆಯ 7 ವರ್ಷದ ನಡಿಗೆ, 3 ಖಂಡಗಳನ್ನು ದಾಟುವುದು, ಆಯಾಸ, ಒಂಟಿತನ, ಹೆದರಿಕೆ, ಗೊಂದಲ ಯಾವುದರ ಬಗ್ಗೆಯೂ ಖಚಿತವಿಲ್ಲದಿರುವುದು -ಇಷ್ಟೆಲ್ಲಾ ಅನುಭವಿಸಿ ಸಾಧಿಸುವುದಾದರೂ ಏನು. ಒಂದು ಚೀಲದಷ್ಟು ಕಲ್ಪನಾ ವಿಚಾರಕ್ಕೆ, ಮುಖಸ್ತುತಿಗಾಗಿ, ವೈಜ್ಞಾನಿಕ ಮತ್ತು ಸಾಹಿತ್ಯಕ ವಿಚಾರ ಧಾರೆಗಳಿಗಾಗಿ ಎಂದು. ಈ ಅಸಂಬದ್ಧತೆಯನ್ನು ಸಂತೋಷಿಸುತ್ತಾನೆ. ಅವನ ಪ್ರಕಾರ ಇದು ಸರಿ ಎಂದೆನಿಸುತ್ತದೆ. ಈ ಯೋಜನೆ ಶುರುವಾದಾಗ ನಡೆದ ಘಟನೆಗಳನ್ನು ನೋಡಿದರೆ.
ಪೂರ್ವೋತ್ತರ ಇಥಿಯೋಪಿಯಾದ ಗ್ರೇಟ್ ರಿಫ಼್ಟ್ ವ್ಯಾಲಿಯ ಪಶ್ಚಿಮದ ಪ್ರದೇಶದಲ್ಲಿನ ಶುಷ್ಕ ವಾತಾವರಣದಲ್ಲಿರುವ ಬೌರಿ ಎಂಬ ಹಳ್ಳಿಯಲ್ಲಿ ಹೊಗೆಗೂಡಿನಂತಿದ್ದ ಅಲೆಮಾನ ಮನೆಯಿಂದ ನಸುಕತ್ತಲೆಯಲ್ಲೆ ಪ್ರಯಾಣ ಪ್ರಾರಂಭಿಸಿದಾಗ ಬರಿ ಕುರಿಗಾಹಿಗಳೆ ತುಂಬಿದ್ದರು.
ಬೆಳ್ಳಬೆಳಗ್ಗೆ ಎದ್ದಾಗ ಕಂಡದ್ದು ಹಿಮ: ದಟ್ಟವಾದ, ಉಸಿರುಗಟ್ಟಿಸುವಂತಾ, ಕಣ್ಣು ಕುರುಡಾಗಿಸುವಂತಾ. ಸಮುದ್ರದ ತಳದಲ್ಲಿರುವ ಪ್ಲಾಂಕ್ಟನ್ನಂಥ, ನನ್ನ ತಲೆಗೆ ಕಟ್ಟಿಕೊಂಡಿದ್ದ ದೀಪದ ಬೆಳಕಿನಲ್ಲಿ ಸುತ್ತುತ್ತಿದ್ದಂತೆ ಕಾಣುತ್ತಿದ್ದ ಧೂಳು. ಹಳ್ಳಿಯ ನೂರಾರು ಪ್ರಾಣಿಗಳು ಎಬ್ಬಿಸಿದ್ದ ಧೂಳಿನ ಮೋಡ ಎಲ್ಲೆಲ್ಲೂ. ಆಡುಗಳು, ಕುರಿಗಳು, ಹಸುಗಳು, ಕತ್ತೆಗಳು ಮತ್ತು ಒಂಟೆಗಳು - ಆದರೆ ದುರಾದೃಷ್ಟಕ್ಕೆ ಆ ಒಂಟೆಗಳ್ಯಾವೂ ನಮ್ಮವಲ್ಲ.
John Stanmeyer-VII
ಇಂಥ ಒಂದು ಬೃಹತ್ ಯೋಜನೆಗೆ ಸಾವಿರಾರು ಗಂಟೆಯ ತಯಾರಿ ನಡೆಸಿದ್ದೆ. ಅದರಲ್ಲಿ ನಮ್ಮ ಸರಕುಗಳನ್ನು ಸಾಗಿಸುವ ಒಂಟೆಗಳೂ ಸೇರಿದ್ದವು. ಹೋದ ಅಕ್ಟೋಬರ್ ತಿಂಗಳಲ್ಲೇ ಯೋಜನೆಗೆಂದು ಬೇಕಾದ ಒಂಟೆಗಳನ್ನುವ್ಯವಸ್ಥೆಗೊಳಿಸಿದ್ದೆ. ಆದರೆ ಹೊರಡುವ ಸಮಯದಲ್ಲಿ ಒಂಟೆಗಳಿರಲೀ, ಅದರ ಸವಾರರೂ ನಾಪತ್ತೆಯಾಗಿದ್ದರು. ಸುಮ್ಮನೆ ಆ ಧೂಳಿನಲ್ಲಿ ಕಾಯುತ್ತಿದ್ದೆವು. ಉದಯಿಸುವ ಸೂರ್ಯನೇನೂ ನಮಗೆ ಕಾಯಲಿಲ್ಲ. ಮೇಲಕ್ಕೆ ಹೋದಂತೆ ಮರಳುಗಾಡು ಭುಗಿಲೆದ್ದು ಬೆಂಕಿಯಾಗತೊಡಗಿತು. ನಮ್ಮ ಪಶ್ಚಿಮಕ್ಕೆ ವರ್ಷಕ್ಕೆ ಕಾಲುಇಂಚಿನಂತೆ ಬಿರುಕು ಬಿಡುತ್ತಿರುವ ಕಣಿವೆಯ ಕೊನೆಯಲ್ಲಿ ನಮ್ಮ ಮೊದಲ ಸರಹದ್ದು : ಜಿಭೂತಿ ಇತ್ತು.
ನಿಮಗೇನಾದರೂ ಹುಚ್ಚುಗಿಚ್ಚು ಹಿಡಿದಿದ್ದೀಯಾ? ನಿಮ್ಮ ಆರೋಗ್ಯ ಸರಿ ಇಲ್ಲವೆ? ಎಂಬ ಪ್ರಶ್ನೆಗೆ ಹೌದು? ಅಥವ ಇಲ್ಲ? ಅಥವ ಇರಬಹುದೇನೋ?
ಮೇಲಿರುವ ಆಕಾಶ ಹೊಳೆಯುವ ಸೀಸದಂತಿತ್ತು .
ಅಫಾರ್ ತ್ರಿಕೋನ ಒಂದು ಭಯಂಕರ ಮರಳುಗಾಡು. 120F ನಲ್ಲಿ ಕುದಿಯುವ ಪ್ರದೇಶ, ಅಲ್ಲಿ ನಡೆಯುವುದೆಂದರೆ ನೀರಿಲ್ಲದ ಮರಳುಗಾಡಿನಲ್ಲಿ ನಡೆಯುವಂತೆ, ಮೃತ್ಯು ಶತಃಸಿದ್ದ, ಚಂದ್ರನ ಮೇಲ್ಮೈ ನಂತ ನೀರಿರದ ಪ್ರದೇಶ. ಮಿಲಿಯಾಂತರ ವರ್ಷಗಳಿಂದ ನೀರು ಆವಿಯಾಗಿ ಉಪ್ಪಿನ ಬಾಣಲೆ ಕಣ್ಣು ಕೋರೈಸುತ್ತದೆ. ಆ ದಿನ ಮಳೆಯಾಯಿತು. ಆದರೆ ನಮಲ್ಲಿ ಜಲ ನಿರೋಧಕ ಗುಡಾರಗಳಿರಲಿಲ್ಲ. ಅಲೆಮಾನ ಹತ್ತಿರ ಒಂದು ಇಥಿಯೋಪಿಯಾದ ಧ್ವಜ ಇತ್ತು. ಅದನ್ನೆ ಆತ ಸುತ್ತಿಕೊಂಡಿದ್ದ. ಒಂಟೆ ಮೇಲ್ವಿಚಾರಕರಿಲ್ಲದ್ದರಿಂದ ನಾವೇ ಅದನ್ನು ಮುನ್ನಡೆಸಬೇಕಾಯಿತು. (ಆ ಒಂಟೆಗಳು ಯಾರವು? ಎಂದು ತಿಳಿಯದು, ಅಫಾರ್ ಶೈಲಿಯಲ್ಲಿ ಯಾರದ್ದೋ ಒಂಟೆಗಳನ್ನು ಬಿಚ್ಚಿಕೊಂಡು ಬಂದಿದ್ದ.) ಅಕೇಷಿಯಾ ಗಿಡಗಳಿಂದ ತುಂಬಿದ್ದ, ಮಳೆಯಿಂದ ಕಂದು ಬಣ್ಣದ ಚಾಕೊಲೇಟ್ ಬಣ್ಣಕ್ಕೆ ತಿರುಗಿದ್ದ ನೆಲದ ಮೇಲೆ ನಿಧಾನವಾಗಿ ನಡೆದೆವು. ನಾವು ಛಾಯಾಚಿತ್ರದ ನಕಲಿನಂತಿದ್ದ ಮೇಲ್ಮೈ ಮೇಲೆ ಚಲಿಸಿದೆವು. ಒಂಟೆಗಳ ಅಗಲವಾದ ಅಟ್ಟೆಗಳಂತಿದ್ದ ಪಾದಗಳಿಗೆ ಮಳೆಯಿಂದ ತೋಯ್ದಿದ್ದ ನೆಲದ ಮೇಲ್ಮೈ ಅಂಟಿಕೊಂಡು ಕಾಲೆತ್ತಿದಾಗ ಉಳಿಯುತ್ತಿದ್ದುದು ನುಣ್ಣನೆಯ ಒಣ ಪುಡಿಯ ಬಿಳಿ ಚಕ್ರಗಳು.
Paul Salopek
ಅಲೆಮಾಗೆ ದಣಿವಾಗಿತ್ತು.
ಅಲೆಮಾ ನಡೆಯುವುದಕ್ಕಾಗಿ ಇದ್ದ ಅಮೇರಿಕದ ಪಾದರಕ್ಷೆ, ಕೈದೀಪ, ಟೋಪಿ - ಮತ್ತೆ ಅವನ ಸೆಲ್ಫೋನ್ಗಳನ್ನು ಮೊದಲ ಶಿಬಿರದಲ್ಲೆ ಮರೆತುಬಂದಿದ್ದ. ಅದಕ್ಕಾಗಿ ಅಡುಮಾದ ಎರಡನೆ ಶಿಬಿರದಿಂದ ನಿನ್ನೆ ಹಳ್ಳಿಗೆ ಹಿಂತಿರುಗಿ ಇವೆಲ್ಲ ಪರಿಕರಗಳನ್ನು ತೆಗೆದುಕೊಂಡು ಇಂದು ಓಡುತ್ತಾ ಮತ್ತೆ ಎರಡನೆ ಶಿಬಿರ ತಲುಪಿದ್ದ. ತೊಡೆಸಂದಿಯಲ್ಲಿ ಕುರ ಎದ್ದಿದೆ ಎಂದು ನಗುತ್ತಾ ತಗಾದೆ ಮಾಡುತ್ತಿದ್ದ.
ಇಲ್ಲಿ ಮರೆವು ಅರ್ಥವಾಗುವಂತದ್ದೆ. ಇಂಥ ಅಗಾಧ ಪ್ರಮಾಣದ ಪ್ರಯಾಣದ ಎಲ್ಲ ವಿವರಗಳನ್ನು ನೆನಪಿಟ್ಟುಕೊಳ್ಳುವುದು ಅಸಾಧ್ಯದ ಕೆಲಸ. ಒಂದು ಸಂಜೆಯ ಸುತ್ತಾಟದ ಅನುಭವದಂತಿದೆ. ನಾನಂತೂ ತಿಂಗಳುಗಟ್ಟಲೆ ಈ ಪ್ರಯಾಣದ ತಯಾರಿ ನಡೆಸಿದ್ದರೂ ಸುಮಾರು ವಸ್ತುಗಳನ್ನು ಮರೆತು ಬಂದಿದ್ದೆ. ಉದಾಹರಣೆಗೆ ಸರಂಜಾಮುಗಳನ್ನು ತುಂಬುವ ನೈಲಾನ್ ಚೀಲಗಳನ್ನು ಮರೆತು ಬಂದಿದ್ದಕ್ಕಾಗಿ, ಏರೋಪ್ಲೇನಿನಲ್ಲಿ ಪ್ರಯಾಣ ಮಾಡುವಾಗ ತಂದಿದ್ದ ಚಕ್ರಗಳಿದ್ದ ಸೂಟ್ ಕೇಸ್ ಗಳನ್ನೇ ಒಂಟೆ ಬೆನ್ನಿಗೆ ಕಟ್ಟುವಂಥ ಪರಿಸ್ಥಿತಿ ಒದಗಿತ್ತು.
Loading up for the trek from Bouri village to the Ethiopia-Djibouti border.
John Stanmeyer-VII
ಮಧ್ಯ ಅವಾಷ್ ಯೋಜನೆಯ ವಿಜ್ಞಾನಿಗಳು ನಮ್ಮ ಪ್ರಯಾಣವನ್ನು ಹರ್ಟೊ ಬೌರಿಯಿಂದ ಆರಂಭಿಸಲು ತಿಳಿಸಿದ್ದರು. ಸಾಂಕೇತಿಕವಾಗಿ ಬಿರುಕಿನ ಆ ಜಾಗವನ್ನು ಶೂನ್ಯ ಬಿಂದುವೆಂದು ಪರಿಗಣಿಸಿದ್ದರು, ಮತ್ತು ಈ ಜಾಗ ಮಾನವನ ಪಳೆಯುಳಿಕೆಗಳಿಂದ, ಮೂಳೆಗಳಿಂದ ತುಂಬಿದ ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತ ಪ್ರದೇಶವಾಗಿತ್ತು. ಇತಿಹಾಸದಲ್ಲೆ ಅತ್ಯಂತ ಹಳೆಯದಾದ ಮತ್ತು ಪ್ರಸಿದ್ದವಾದ ಪ್ರಪಂಚದ ಮೊದಲ ಮೂರು ಪುರಾತನ ಮಾನವರೆಂದು ಕರೆಯಲ್ಪಟ್ಟಿದ್ದ ಪಳೆಯುಳಿಕೆಗಳು ಸಿಕ್ಕಿದ ಸ್ಥಳವದು.
ಸುಮಾರು 1,60,000 ವರ್ಷಗಳ ಹಿಂದೆಯೇ ಕಣ್ಮರೆಯಾಗಿರಬಹುದಾದ ಹೋಮೊ ಸೆಫಿಯನ್ ಇದಾಲ್ತು, ಅಗಲ ಮುಖ ಮತ್ತು ದೃಡಶಾಲಿಯಾಗಿದ್ದ - ನಮ್ಮ ಪೂರ್ವಜ, ಆದರೆ ನಿಖರ ಪೂರ್ವಜನೇನಲ್ಲ.
ಮಧ್ಯ ಅವಾಷ್ ಯೋಜನೆಯ ಸಂಶೋಧಕರಾದ ಟಿಮ್ ವೈಟ್, ಬರ್ಹೇನ್ ಆಸ್ಫಾ, ಮತ್ತು ಗಿಡೆ ವೊಲ್ಡ್ ಗೇಬ್ರಿಯಲ್ ರವರು ನಮ್ಮ ಅತ್ಯಂತ ನಿಕಟ ಮಾನವಪೂರ್ವಜರ ಪಳೆಯುಳಿಕೆಗಳನ್ನು ಇಥಿಯೋಪಿಯಾದಲ್ಲಿ ಸಂಶೋಧಿಸಿದ್ದಾರೆ. 4.4 ಮಿಲಿಯ ವರ್ಷಗಳ ಹಿಂದೆ ಬದುಕಿದ್ದ. ಆರ್ಡಿಪಿಥಿಕಸ್ ರಾಮಿಡಸ್ ಎಂಬ ಎರಡುಕಾಲಿನಲ್ಲಿ ನಡೆಯುತ್ತಿದ್ದ ಮಂಗನ ಪಳೆಯುಳಿಕೆಯನ್ನು ಸಹ. (ಇದರ ಬಗ್ಗೆ ಮುಂದೆ ಇನ್ನಷ್ಟು ಬೆಳಕು ಚೆಲ್ಲಲ್ಲಿದ್ದೇನೆ) ನನ್ನ ಮಾರ್ಗದರ್ಶಿ ಅಲೆಮಾ, 60, ಈ ಸಂಶೋಧಕರ ಹಿರಿಯ ಪಳೆಯುಳಿಕೆ ಅನ್ವೇಷಕ.
ಹೋರಾಟಕ್ಕೆ ಹೆಸರುವಾಸಿಯಾದ ಯೋಧರನ್ನು ಹೊಂದಿರುವ ಈ ಅಲೆಮಾರಿ ಬುಡಕಟ್ಟಿಗೆ ಸೇರಿದ ಅಲೆಮಾ ಮೂರು ಭಾಷೆಗಳನ್ನು ಅರಿತಿದ್ದಾನೆ. ಅಫಾರ್, ಅಮ್ಹರಿಕ್ ಮತ್ತು ಹರಕು ಮುರುಕು ಇಂಗ್ಲಿಷ್ ಅನ್ನು ಈ ಮಧ್ಯ ಅವಾಷ್ ಯೋಜನೆಯ ಸಂಶೋಧನಕಾರರಿಂದ ಕಲಿತಿದ್ದಾನೆ. ಅವನೊಂದು ಬಗೆಯ ವಿಶೇಷ ಪುರಾತತ್ವಶಾಸ್ತ್ರಜ್ಞ. ರಿಫ಼್ಟ್ ವ್ಯಾಲಿಯ ಬಹು ಮುಖ್ಯ ಬೌಗೋಳಿಕ ಪದಾರ್ಥಗಳನ್ನು ಗುರುತಿಸುವಾಗ "ವಾವ್" ಎಂದೂ "ಕ್ರೇಜಿ, ಮ್ಯಾನ್" ಎಂದು ಮತ್ತು "ಜೀಜಸ್" ಎಂದು ಉದ್ಗರಿಸುತ್ತಾನೆ. ಆತ ಬಲಬಾಟ್, ಎಂದರೆ ಅಫಾರ್ನ ಬೌರಿ ಮೊಡೈಟು ಪಂಗಡದ ನಾಯಕ ಎಂದು. ಅವನ ಸೆಲ್ಫೋನ್ ಇಥಿಯೋಪಿಯಾದ ಹಳೆತಲೆಗಳ ಮತ್ತು ಫ್ರೆಂಚ್ ವಿದ್ವಾಂಸರ ಫೋನ್ ನಂಬರ್ಗಳಿಂದ ತುಂಬಿದೆ. ಎಂಟನೆ ತರಗತಿಯವರೆಗಷ್ಟೇ ಓದಿದ್ದರೂ ಅವನ ತಲೆ ಲಿಯೂನಾರ್ಡ್ನ ಅನ್ವೇಷಕ ಬುದ್ದಿ ಮತ್ತು ಐನ್ಸ್ಟೀನ್ನಷ್ಟು ಹರಿತ ಬುದ್ದಿಯಿಂದ ತುಂಬಿದೆ. ಇವನದೊಂದು ಅಸಾಧಾರಣ ಅದ್ಭುತ ವ್ಯಕ್ತಿತ್ವ.
ಮಧ್ಯ ಅವಾಷ್ ಯೋಜನೆಯ ವಿಜ್ಞಾನಿಗಳು ನಮ್ಮನ್ನೂ ಅಡುಮಾ ಶಿಬಿರದಲ್ಲಿ ಭೇಟಿಯಾಗಿ ನಮ್ಮನ್ನು ಒಂದು ಪುರಾತತ್ವ ಸಂಶೋಧನೆಯ ಸ್ಥಳವನ್ನು ತೋರಿಸಲು ಕರೆದೊಯ್ದರು.
ಅಲ್ಲಿದ್ದ ಕಲ್ಲಿನ ಆಯುಧಗಳನ್ನು ತೋರಿಸುತ್ತಾ "ಇವುಗಳು ನೀವು ಹಿಂಬಾಲಿಸುತ್ತಿರುವ ಮನುಷ್ಯನ ಮೊಟ್ಟ ಮೊದಲ ಆಯುಧಗಳಿರಬಹುದೇನೊ" ಎಂದು ಯನಾಟನ್ ಸಾಹ್ಲ್ ಎಂಬ ಇಥಿಯೋಪಿಯನ್ ಸಂಶೋಧಕ ವಿವರಣೆ ನೀಡಿದ. "ಆಫ್ರಿಕಾದ ಹೊರಗೆ ಭೇಟಿಯಾದ ಮೂಲ ಮಾನವರನ್ನು ಗಮನಿಸಿದರೆ, ನಿಂತಲ್ಲೆ ಗುರಿಯಿಟ್ಟು ಎಸೆದು ಕೊಲ್ಲುವ ತಂತ್ರ ಅರಿತಿದ್ದ ಮತ್ತು ಆಯುಧಗಳನ್ನು ಉಪಯೋಗಿಸಲು ಕಲಿತಿದ್ದ ಇವರದ್ದು ಬೇರೆಯವರಿಗೂ ಮೀರಿದ್ದ ಮುಂದುವರಿದ ತಂತ್ರಜ್ಞಾನವಾಗಿತ್ತು.
ಸುಮಾರು 80,000 ವರ್ಷಗಳ ಹಿಂದೆ ಈ ಕಲ್ಲಿನ ಆಯುಧದ ಮಾಲೀಕ ನುರುಜುಕಲ್ಲುಗಳ ಮೇಲೆ ಬೀಳಿಸಿಕೊಂಡು ಹೋಗಿರಬಹುದಾದಂತ ಜಾಗವನ್ನು ಬಗ್ಗಿ ನೋಡುತ್ತಿದ್ದಾಗ. ನಾವು ತಲೆ ಎತ್ತಿ ನೋಡಿದೆವು.
Middle Stone Age point, Afar region, Ethiopia.
Paul Salopek
ಮರಳುಗಾಡಿನ ಮಧ್ಯದಿಂದ ಪ್ರತ್ಯಕ್ಷವಾದ ಒಬ್ಬ ಅಫಾರ್ ಹೆಂಗಸು, ಕೊಲೆಯಾಯ್ತೇನೋ ಎಂಬಂತೆ ಕಿರಿಚುತ್ತಾ ಬರುತ್ತಿದ್ದಳು. ಕೈಯನ್ನು ಬೀಸುತ್ತಾ ಸನ್ನೆ ಮಾಡುತ್ತಿದ್ದಳು. ಇವಳೇನು ನಮಗೆ ಅವಳ ಜಾಗಕ್ಕೆ ಬರದಂತೆ ತಡೆಯುತ್ತಿದ್ದಳಾ? ಅಥವಾ ಹುಚ್ಚಿಯಾ? ಎಂದು ಯೋಚಿಸುತ್ತಿದ್ದಾಗ ಬಂದು ನೆಲದ ಮೇಲೆ ಬಿದ್ದು ಗೊರಕೆಹೊಡೆಯುತ್ತಿದ್ದ ನಮ್ಮ ಗುಂಪಿನ ಒಬ್ಬ ಸದಸ್ಯನಿಗೆ ಸರಿಯಾಗಿ ಒದ್ದಳು. ಪಕ್ಕದಲ್ಲಿದ್ದ ಮಧ್ಯಕಲ್ಲು ಯುಗದ ಆಯುಧದಂತಿದ್ದ ಒಂದು ಕಲ್ಲನ್ನು ಎತ್ತಿಕೊಂಡು ತಲೆಯಲ್ಲಿರುವ ಮೆದುಳನ್ನು ಹೊರತೆಗೆಯುವೆನೆಂದು ಧಮಕಿ ಹಾಕಿದಳು. ಇದೇನು, ಹಳೆಸಾಲದ ವರಾತವೊ? ಅಥವ ಪ್ರಣಯಕ್ಕೆ ಸಂಬಂಧಿಸಿದ ಜಗಳವೋ?
ಅಷ್ಟರಲ್ಲಿ ಒದೆಸಿಕೊಂಡವ, ಗಹಗಹಿಸಿ ನಗಲಿಕ್ಕೆ ಆರಂಭಿಸಿದ. ನಾನು ಈ ನಗುವಿನ ಗುರುತು ಹಿಡಿದೆ, ಈ ನಗೆಯ ಮಾಲೀಕನೇ ಮುಂದಿನ ಆರು ವಾರಗಳಲ್ಲಿ ನಮ್ಮನ್ನು ಜಿಬೌತಿಗೆ ಮತ್ತು ಕೆಂಪು ಸಮುದ್ರಕ್ಕೆ ತಲುಪಿಸುವವನು.
