ತೊಡುವ ಪಾದರಕ್ಷೆ ಇಂದಿನವರ ಪ್ರತಿಷ್ಠೆಯ ಸಂಕೇತ. 21ನೇ ಶತಮಾನದಲ್ಲಿ ಮನುಷ್ಯನ ನಿಜವಾದ ವ್ಯಕ್ತಿತ್ವವನ್ನು ಒಳಹೊಕ್ಕು ಪರಿಶೀಲಿಸಬೇಕಾದರೆ ಅವನ ಪಾದಗಳನ್ನು ನೋಡಿದರೆ ಸಾಕು, ಅವನ ಕಣ್ಣೊಳಗಲ್ಲ.
ಸಂಪದ್ಭರಿತವಾದ ಉತ್ತಾರಾರ್ಧಗೋಳದಲ್ಲಿ ಮನುಷ್ಯನ ಹುಚ್ಚುತನ, ತಲೆತಿರುಕತನ ಮತ್ತು ಆಡಂಬರ ವ್ಯಕ್ತಿತ್ವವನ್ನು ಫ್ಯಾಶನ್ ಪ್ರತಿನಿಧಿಸುತ್ತದೆ. ಧರಿಸುವ ಶೂಗಳು ಅವರ ಅಂತಸ್ತು, ಗುಣಮಟ್ಟ, ಪ್ರಣಯದ ಅವಕಾಶ ಅಲ್ಲದೆ ರಾಜಕೀಯವನ್ನು ಸಹ, ಇದು ನಿಜವಾಗಲೂ ದಿಕ್ಕೆಡಿಸುತ್ತದೆ. ಆದರೆ ಲಕ್ಷ ಲಕ್ಷ ಮನುಷ್ಯ ಜೀವಿಗಳು ನಡೆಯುವ ಈ ಪ್ರದೇಶದಲ್ಲಿ ಹೆಂಗಸರಿರಬಹುದು, ಗಂಡಸರಿರಬಹುದು, ಅಥವ ಮಕ್ಕಳಿರಬಹುದು, ಒಂದೇ ತರಹದ ಅಗ್ಗದ, ಬಹುಜನ ಸಮಾಜದ, ಬಹುಮುಖಿ ಇಥಿಯೋಪಿಯಾದ ಪ್ಲಾಸ್ಟಿಕ್ ಸ್ಯಾಂಡಲ್ಗೆ ಮಾತ್ರ ಅಸ್ತಿತ್ವವಿದೆ. ಬಡತನ ಬೇಡಿಕೆಯನ್ನು ತಿರಸ್ಕರಿಸುತ್ತದೆ. ಇಲ್ಲಿ ಅವಶ್ಯಕತೆಯೊಂದೆ ಆ ವರ್ಗದ ಮುದ್ರೆ.
ಬಹುವರ್ಣಗಳಲ್ಲಿ ಸಿಗುವ, ಕಪ್ಪು, ಕೆಂಪು, ಕಂದುಬಣ್ಣ, ಹಸಿರು, ನೀಲಿ ಮತ್ತು ನೇರಳೆ ಬಣ್ಣದ ವಿನೀತ ಭಾವವುಳ್ಳ ರಬ್ಬರ್ ಶೂಗಳು ಸ್ಥಳೀಯರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಸೃಷ್ಟಿಸಬಹುದಾದ ಒಂದು ಜೊತೆಯನ್ನು ಒಂದು ದಿನದ ವೇತನದಲ್ಲಿ ಕೊಳ್ಳಬಹುದಾದಂತ ಪಾದರಕ್ಷೆಗಳು (ಎರಡು ಡಾಲರ್ ಇರಬಹುದು), ‘ಅಫಾರ್’ನ ಮರಳುಗಾಡಿನ ಸುಡು ಬಿಸಿಲಿನಲ್ಲೂ ಸಹ ಸಾಕಷ್ಟು ಗಾಳಿ ಸುಳಿದಾಡುವಂತೆ ಇದು ತಣ್ಣಗಿರುತ್ತದೆ. ಬೆಂಕಿ ಒಲೆಯ ಮೇಲೆ ಕರಗಿಸಿ ಪ್ಲಾಸ್ಟಿಕ್ ಪಟ್ಟಿಗಳನ್ನು ಬೇಕಾದಂತೆ ದುರಸ್ತಿ ಮಾಡಬಹುದು. ಇಥಿಯೋಪಿಯಾದ ಈ ಸಾರ್ವಕಾಲಿಕ ಚಪ್ಪಲಿಗಳು, ತೂಕವಿಲ್ಲ, ಪುನರ್ಉಪಯೋಗಿಸಬಹುದು, ಸಾಧಾರಣ ಬಡ ಆಫ್ರಿಕನ್ನರ ಚಪ್ಪಲಿಗಳು, ಇಥಿಯೋಪಿಯಾ ಮತ್ತು ಎರಿಡ್ರಿಯಾಗಳ ಯೋಧರು ತಮ್ಮ ನಡುವೆ ನಡೆಯುವ ಹೊಡೆದಾಟ, ಯುದ್ಧಗಳಲ್ಲಿ ಸಾಯುವತನಕ ಉಪಯೋಗಿಸಿದ ನಂತರ ಯುದ್ಧದ ಅವಶೇಷವಾಗಿಯೊ ಸ್ಮಾರಕವಾಗಿಯೊ ಪರಿವರ್ತನೆಗೊಳ್ಳುತ್ತದೆ.
ಪ್ರಯಾಣದ ಆರಂಭದಲ್ಲಿ ನಮ್ಮ ಜೊತೆಯಿರಬೇಕಾಗಿದ್ದ ‘ಆರ್ಟಾ’ ಮತ್ತು ‘ಸುಮಾಟುಲಿ’ ಎಂಬ ಎರಡು ಒಂಟೆಗಳು ಮತ್ತು ಅವುಗಳ ಮೇಲ್ವಿಚಾರಕರಾದ ‘ಮೊಹಮ್ಮದ್ ಐದಾಹಿಸ್’ ಮತ್ತು ‘ಕಾದೆರ್ ಯಾರ್ರಿ’ ಕೊನೆಗೂ ಬಂದು ನಮ್ಮನ್ನು ಸೇರಿದರು. ಶುರುವಿನಲ್ಲಿದ್ದ ಹರ್ಟೊಬೋರಿಯಿಂದ ಮರಳುಗಾಡಿನಲ್ಲಿ ಹಳ್ಳಕೊಳ್ಳಗಳನ್ನು ದಾಟಿ ಓಡಿಕೊಂಡು ವಾರದನಂತರ ಬಂದು ಸೇರಿದರು. ಇಲ್ಲಿಯ ಜೀವನ ಶೈಲಿಯಂತೆ ತಡವಾಗಿ ಬಂದದ್ದಕ್ಕೆ ವಿವರಗಳನ್ನು ಅವರು ಕೊಡಲೂ ಇಲ್ಲ ನಾವು ಕೇಳಲೂ ಇಲ್ಲ. ತಡವಾಗಿರಬಹುದು ಆದರೆ ಈಗ ನಮ್ಮ ಜೊತೆ ಇದ್ದಾರೆ, ಅಷ್ಟೆ! ನಿಂಬೆ ಹಸಿರಿನ ಪ್ಲಾಸ್ಟಿಕ್ ಸ್ಯಾಂಡಲನ್ನು ಧರಿಸಿಕೊಂಡು!!
ಮರುಲಿಖಿತಕ್ಕೆ ಉಪಯೋಗಿಸಬಹುದಾದಂತ ಅಥವ ಅಳಿಸಿ ಬರೆಯುವಂತ ರಿಫ್ಟ್ ವ್ಯಾಲಿಯ ನೆಲದ ಮೇಲ್ಮೈಪದರ ಪ್ಲಾಸ್ಟಿಕ್ ಸ್ಯಾಂಡಲ್ನ ಮಿಲಯಗಟ್ಟಲೆ ಹೆಜ್ಜೆಗುರುತುಗಳಿಂದ ಆವರಿಸಿತ್ತು. ಇಥಿಯೋಪಿಯಾದ ಈ ಜನಪ್ರಿಯ ಸಾಂಡಲ್ಗಳನ್ನೇನೊ ಅವಿಚ್ಛಿನ್ನವಾಗಿ ತಯಾರಿಸಬಹುದು ಆದರೆ ಅವನ್ನು ಧರಿಸಿಕೊಳ್ಳುವವರನ್ನಲವಲ್ಲ! ಕೆಲವರು ಎಡಗಾಲು ಎಳೆದು ಹಾಕುತ್ತಾರೆ, ಕೆಲವರು ಬಲಗಾಲಿನ ಶೂಗಳನ್ನು ಬೂದಿಕೆಂಡದ ಮೇಲಿಟ್ಟು ಅಂದಗೆಡಿಸಿಕೊಂಡಿರುತ್ತಾರೆ.
‘ಅಹ್ಮದ್ ಅಲೆಮಾ ಹೆಸನ್’ ಇಥಿಯೋಪಿಯಾದ ರಿಫ್ಟ್ ವ್ಯಾಲಿಯ ಉತ್ತರದ ತನಕದ ಮಾರ್ಗದರ್ಶಕ. ಒಂದು ದಿನ ನಾವು ನಡೆಯುತ್ತಿದ್ದ ದಾರಿಯಲ್ಲಿದ್ದ ಅಂತ್ಯವಿಲ್ಲದ ಹೆಜ್ಜೆಗುರುತುಗಳನ್ನು ಬಗ್ಗಿ ನೋಡಿ ಪರಿಶೀಲಿಸಿ, ‘ಲಾಡ್ ಹೂವೇಸಿ’ ದಾಲಿಫಾಗಿಯಲ್ಲಿ ನಮಗೋಸ್ಕರ ಕಾಯುತ್ತಿದ್ದಾನೆ ಎಂದು ಅಲ್ಲಿ ಮೂಡಿದ್ದ ಒಂದೇ ಸ್ಯಾಂಡೆಲ್ನ ಹೆಜ್ಜೆ ಗುರುತನ್ನು ತೋರಿಸುತ್ತಾ ಘೋಷಿಸಿದ. ‘ಲಾಡ್’ ದಾಲಿಫಾಗಿಯಲ್ಲಿ ಕಾಯುತ್ತಿದ್ದ!
