"ನಾನು ಸವಾರಿ ಮಾಡುತ್ತಿದ್ದ ವುಮ್ಬ್ರೌಶಾ ಎಂಬ ಒಂಟೆಯನ್ನು ಕರೆತರಲು ಸುಲ್ತಾನ್ ಹೊರಟ. ಅವಳು ಬಹಳ ಅದ್ಭುತವಾದ ಒಂಟೆ, ಒಮಾನ್ ನ ವಿಖ್ಯಾತ ತಳಿಯವಳು."
- ಸರ್ ವಿಲ್ಫ್ರೆಡ್ ತೆಸೀಜರ್, ಅರೆಬಿಯನ್ ಸ್ಯಾಂಡ್ಸ್
ಸೀಮಾ ಮತ್ತು ಫೇರ್ಸ್, ನಮ್ಮ ಗೂಳಿ ಒಂಟೆಗಳು, ಒಮಾನ್ ನ ವಿಖ್ಯಾತ ಒಂಟೆಗಳ ತಳಿಜಾತಿಗೆ ಸೇರಿದವೇನಲ್ಲ.
ಅವುಗಳು ಸುಡಾನಿನ ನೀಲಿ - ಕೊರಳಪಟ್ಟಿಯ ಸರಕಿನ ಒಂಟೆಗಳು.
ಒಂಟೆಗಳ ಪ್ರಪಂಚದಲ್ಲಿ ನುಗ್ಗಾಗಿದ್ದ ಫೋರ್ಡ್ ಎಫ್ - 150 ಪಿಕಪ್ ಗಾಡಿಗಳಂತೆ. ಇನ್ನೂ, ಕೆಲವೇ ಹಳೇ ಗಾಡಿಗಳಂತೆ, ಸ್ವಾಮಿ ನಿಷ್ಠೆಗೆ ಸ್ಪೂರ್ತಿ ಕೊಡುತ್ತವೆ. ನನ್ನ ವಯಸ್ಸಿನ ಕೆಲವು ಮನುಷ್ಯರಂತೆ ಇಡೀ ಮಧ್ಯಾಹ್ನ ಅವುಗಳನ್ನು ತೊಳೆಯುತ್ತಾ ಸ್ವಾಮಿ ನಿಷ್ಠೆಯನ್ನು ವ್ಯಕ್ತಪಡಿಸುತ್ತೇವೆ.
ಹೀಗೆ ತೊಳೆಯುವಾಗ ಪ್ರಾಣಿಗಳ ಬಣ್ಣ ಬಣ್ಣದ ವ್ಯಕ್ತಿತ್ವ ಹೊರಹೊಮ್ಮುತ್ತದೆ.
ಫೇರ್ಸ್ 5 ವರ್ಷದ ವಯಸ್ಕ ಒಂಟೆ. ನಮ್ಮ ಒಂಟೆಗಳ ಮುಖ್ಯ ಮೇಲ್ವಿಚಾರಕ ಅವಾದ್ ಉಮ್ರಾನ್ ಹೇಳುವಂತೆ ಈ ಒಂಟೆ ‘’ಭಾರ ಕಾಲು" ಗಳಿಂದ ಬಳಲುತ್ತಿದೆ. ಇದು ಗುಣಪಡಿಸಲಾಗದ ಸೋಮಾರಿತನಕ್ಕೆ ಒಂದು ಔಪಚಾರಿಕ ಪದ. ಒಂದು ಬಕೆಟ್ ಬೆಚ್ಚನೆಯ ನೀರನ್ನು ಒಂಟೆಯ ಗೂನಿನ ಮೇಲೆ ಸುರಿದು ಕೊಳಕಾಗಿದ್ದ ಕೂದಲನ್ನು ಉಜ್ಜಿದೆವು. ಆಗ ಆ ಕ್ಷಣದಲ್ಲಿ ಅದರ ಆರೂ ಕಣ್ಣ ರೆಪ್ಪೆಗಳನ್ನು ಮುಚ್ಚಿ (ನಿಕ್ಟಿಟೇಟಿಂಗ್ ಪೊರೆ ಎಂಬ ಅಧಿಕವಾದ ಕಣ್ಣು ರೆಪ್ಪೆ, ಬೀಸುವ ಮರಳು ಕಣಗಳಿಂದ ಕಣ್ಣನ್ನು ರಕ್ಷಿಸುತ್ತದೆ.) ಧೀರ್ಘವಾದ ಭಾವಪರವಶತೆಗೆ ಒಳಗಾದ ಹಾಗೆ. ನಮ್ಮ ಬೆರಳುಗಳ ನಡುವೆ ತನ್ನ ಭುಜಗಳನ್ನು ಹೊರಳಾಡಿಸುತ್ತ ಆನಂದ ಪಡುತ್ತಿದ್ದ. ನಂತರ ಅಶ್ಲೀಲವಾಗಿ ವರ್ತಿಸಿದ.
ಮೂರು - ವರ್ಷದ - ಹದಿಹರೆಯದ ಒಂಟೆ ಸೀಮಾಗೆ ಕೆಲವು ಅಧಿಕಾರಿಯುತ ಸಮಸ್ಯೆಗಳಿದ್ದವು. ಅವನದು ಮಕ್ಕಳಾಟದ ಸ್ವಭಾವ. (ನೀವು ಬೇರೆಲ್ಲೋ ನೋಡುತ್ತಿದ್ದಾಗ ನಿಮ್ಮ ಇಡೀ ತಲೆಯನ್ನು ಅವನ ಬಾಯೊಳಗೆ ತೆಗೆದುಕೊಳ್ಳುವುದು) ಸ್ನಾನ ಮಾಡುವಾಗ ಮಕ್ಕಳಂತೆ ವರ್ತಿಸುವುದು. ಮೈಮೇಲೆ ಆಸಿಡ್ ಸುರಿದಂತೆ, ವಿಷಕಾರಿ ಆಂತ್ರಾಕ್ಸ್ ಎರಚಿದಂತೆ, ಕುದಿಯುತ್ತಿರುವ ಎಣ್ಣೆಯನ್ನು ಮೈಮೇಲೆ ಸುರಿದಂತೆ. ಅಗಾಲ್ನಿಂದ ಕಟ್ಟಿ ಕುಳ್ಳಿರಿಸಿದಾಗ, ಅಗಾಲ್ ಎಂದರೆ ಸೌದಿಗಳು ತಮ್ಮ ತಲೆಗೆ ಸುತ್ತಿಕೊಳ್ಳುವ ಬಟ್ಟೆಯ ಮೇಲೆ ಕಟ್ಟಿಕೊಳ್ಳುವ ಸಣ್ಣ ಹಗ್ಗ. ಮೊಣಕಾಲೂರಿ ಕುಳಿತುಕೊಂಡ. ಡೈನೋಸಾರ್ನಂತೆ ಮೈಯಲ್ಲಾ ನಡಗಿಸುತ್ತಾ ಗುಡುಗಿದ. ಆಗ ಗೊತ್ತಾಯಿತು. ಒದ್ದೆಯಾದಾಗ, ಸೀಮಾ ಸಂಕುಚಿತಗೊಳ್ಳುತ್ತಾನೆ. ಒದ್ದೆಗೊಂಡ ಚಿಹುಹಾ ನಂತೆ ಕಾಣುತ್ತಿದ್ದ.
ಅವನ ಹಿಂದೆ ತತ್ತರಿಸುತ್ತಾ, ಕೈಗಳನ್ನು ಬೀಸುತ್ತಾ, ಎರಡು ಭಾಷೆಗಳಲ್ಲಿ ಬಯ್ಯುತ್ತಿದ್ದೆವು. ಆಗ ಗೊತ್ತಾಯಿತು ನಾನೊಬ್ಬನೇ ನಗುತ್ತಿದ್ದುದು. ನಂತರ ಬಾಯಿ ಮುಚ್ಚಿಕೊಂಡೆ.
