ಕತ್ತಲೆಯ ನಂತರ ಟರ್ಕಿಯ ಸೈನಿಕರು ಗಡಿಯ ಮುಳ್ಳು ತಂತಿಯನ್ನು ತುಂಡರಿಸುತ್ತಾರೆ. ಪಾಳು ಬಿದ್ದ ಮೆಣಸಿನ ಭೂಮಿಯಲ್ಲೆಲ್ಲಾ ನಿರಾಶ್ರಿತರು ತುಂಬಿಕೊಳ್ಳುತ್ತಾರೆ. ಸಾವಿರಾರು ಮಂದಿ ಇರಬಹುದು, ಕಾಲ್ನಡಿಗೆಯಲ್ಲಿ, ಧೂಳೆಬ್ಬಿಸುತ್ತಾ ನಡೆದು ಬರುತ್ತಾರೆ. ಅವರನ್ನು ಲೆಕ್ಕವಿಟ್ಟುಕೊಂಡ ಜನರು 100,000 ಕ್ಕೂ ಹೆಚ್ಚು ಮಂದಿ ಕಳೆದ 72 ಗಂಟೆಗಳಲ್ಲಿ ಟರ್ಕಿಯೊಳಗೆ ದಾಟಿದ್ದಾರೆ ಎಂದು ಹೇಳುತ್ತಾರೆ: ಮೂರು ವರ್ಷಗಳ ಹಿಂದೆ ಸಿರಿಯಾದ ಅಂತರ್ಯುದ್ಧ ಆರಂಭವಾದಾಗ ಮನುಕುಲದ ಇತಿಹಾಸದಲ್ಲೆ ಅತ್ಯಂತ ದೊಡ್ಡ ಪಲಾಯನ ಇದಾಗಿದೆ. ಜೀವ ಉಳಿಸಿಕೊಳ್ಳಲೋಸ್ಕರ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಸಿರಿಯಾ ಒಂದು ಕಲ್ಪನೆ ಅಷ್ಟೆ. ಅದು ಅಸ್ತಿತ್ವದಲ್ಲಿ ಉಳಿದಿಲ್ಲ.
Around 5,000 Syrians amass at the border with Turkey next to the village of Dikmetas Friday evening, Sept 19, after ISIS took control of 40 or more cities.
John Stanmeyer/VII/National Geographic
ಹೆಂಗಸರು ಮತ್ತು ಮಕ್ಕಳನ್ನೊಳಗೊಂಡ ನಿರಾಶ್ರಿತರ ಒಂದು ಗುಂಪು ಹಳ್ಳಿಯ ಶಾಲೆಯಲ್ಲಿ ತಂಗಿತ್ತು. ಎರಡು ದಿನದಿಂದ ಬಿಸಿಯಾಗಿದ್ದ ಕಾಂಕ್ರೀಟ್ ಮೆಟ್ಟಲುಗಳನ್ನು ಬಿಟ್ಟು ಕದಲಿರಲಿಲ್ಲ. ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋಚಿಲ್ಲ. ಕುಳಿತಲ್ಲಿಂದ ಕದಲದಿದ್ದರೆ, ತಾವು ಅದೃಶ್ಯರಾಗಿರುವೆವು ಎಂಬ ಭ್ರಮೆ. ರಕ್ಷಣೆ ಇದೆ ಎಂದು ತಿಳಿದಿದ್ದಾರೆ. ಆಯಾಸಗೊಂಡಿದ್ದಾರೆ. "ಹಳ್ಳಿಯವರು ನಗರದ ಮೂಲಕ ಓಡುತ್ತಾ ಬಂದು ಕೂಗುತ್ತಿದ್ದರು, 'ಓಡಿ! ಐಸ್ಐಸ್ ನವರು ನಿಮ್ಮನ್ನು ಕೊಲ್ಲುತ್ತಾರೆ! ಓಡಿ!'” ಎಂದು ಅಮೀನ ಎಂಬ ವಯಸ್ಸಾದ ಹೆಂಗಸು ಹೇಳುತ್ತಿದ್ದಳು. ಅವಳ ಮುಖ ಸೂರ್ಯನ ಬಿಸಿಲಿನಿಂದ ಸುಟ್ಟಿತ್ತು. “ಗಂಡಸರ ತಲೆ ಕಡಿಯುತ್ತಾರೆ ಮತ್ತು ಹೆಂಗಸರನ್ನು ಮಾರುಕಟ್ಟೆಗಳಲ್ಲಿ ಮಾರುತ್ತಾರೆ. ಇಂಥ ವಿಷಯಗಳನ್ನು ಕೇಳಿದ್ದೇವೆ.”
ಇದು ಇಸ್ಲಾಮಿಕ್ ರಾಜ್ಯದ ಹೊಸ ಆಕ್ರಮಣಕಾರಿ ಪ್ರವೃತ್ತಿ. ಪೂರ್ವೋತ್ತರ ಸಿರಿಯಾದಲ್ಲಿ, ಅವರು ಕರ್ಡ್ ಜನಾಂಗವನ್ನು ನಿಶ್ಯೇಷಗೊಳಿಸುತ್ತಿದ್ದಾರೆ.
ಟರ್ಕಿಯ ಗಡಿನಗರ ಜನಜಂಗುಳಿಯಿಂದ ತುಂಬಿದೆ. ರಸ್ತೆಯ ಪಕ್ಕ ನಡೆದಾಡುವ ಸ್ಥಳವೆಲ್ಲ ಪೊಟ್ಟಣಗಳನ್ನು ಹಿಡಿದುಕೊಂಡ ಜನರಿಂದ ತುಂಬಿದೆ. ಅವರು ಏನನ್ನೂ ಸಾಗಿಸುತ್ತಿರಲಿಲ್ಲ. ಜನರ ಗುಂಪು ಕಂಗಾಲಾಗಿ ಗೊತ್ತು ಗುರಿಯಿಲ್ಲದೆ ಸುತ್ತುತ್ತಿತ್ತು. ಕೆಲವರು ಯಾವುದೊ ಕೆಟ್ಟ ಕೆಲಸ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡವರಂತೆ ಮುಜುಗರ ಪಡುತ್ತಿದ್ದರು. ಕೆಲವರು ಮೊಣಕೈಗಳೊಳಗೆ ಮುಖ ಹುದುಗಿಸಿದ್ದರು. ಪುರಸಭೆಯ ಯುವ ಕಾರ್ಯಕರ್ತರು ಅವರುಗಳ ಮಧ್ಯೆ ಓಡಾಡುತ್ತಾ ಹೊಳೆಯುತ್ತಿದ್ದ ಬಿಸ್ಕತ್ತು ಪೊಟ್ಟಣಗಳನ್ನು ನೀಡುತ್ತಿದ್ದರು. ಟರ್ಕಿಗೆ ಸ್ವಾಗತ. ಇದೋ ನಿಮ್ಮ ಬಿಸ್ಕತ್ತುಗಳು.
Thousands of men, women, and children from the town of Kobani flood the Turkish town of Dikmetas on Saturday, Sept 20.
John Stanmeyer/VII/National Geographic
ಆಫ್ರಿಕಾದಿಂದ ಹೊರ ಹೊರಟ ನಂತರ, ಜಾಡಿನುದ್ದಕ್ಕೂ ನೂರಾರು ನಿರಾಶ್ರಿತ ಸಿರಿಯನ್ನರನ್ನು ನಾನು ಖುದ್ದಾಗಿ ಭೇಟಿಯಾಗಿದ್ದೇನೆ. ಅವರು ಎಲ್ಲ ಕಡೆ ಇದ್ದಾರೆ.
ಕೆಲವರು ಜೋರ್ಡಾನಿನಲ್ಲಿ ದಿನಕ್ಕೆ $11 ನ ಕೂಲಿಯಲ್ಲಿ ತರಕಾರಿಯನ್ನು ಆಯುತ್ತಿದ್ದರು. (ಅವರ ಕೊಳಕಾದ ಟೆಂಟ್ಗಳಲ್ಲಿ ನನಗೆ ಆಶ್ರಯ ನೀಡಿದ್ದರು.) ಟರ್ಕಿಯ ಬಂದರು ನಗರವಾದ ಮರ್ಸಿನ್ನ ರಸ್ತೆಗಳಲ್ಲಿ ಬಿಕ್ಷೆ ಎತ್ತುತ್ತಿದ್ದರು, ಅವರ ಮಕ್ಕಳುಗಳು ಮುಟ್ಟಲಾರದಷ್ಟು ಕೊಳಕಾಗಿದ್ದರು. ನನ್ನನ್ನು ಕರೆದುಕೊಂಡು ಬಂದ, ಕೆಂಪು ಸಮುದ್ರದ ಮೇಲೆ ಜೀವಂತ ಸರಕುಗಳನ್ನು ಸಾಗಿಸುತ್ತಿದ್ದ ಹಡಗಿನ ಅಧಿಕಾರಿಗಳು ಸಹ ಮನೆಗೆ ಪ್ರಯಾಣಿಸಲಾಗಲಿಲ್ಲ. ಅವರಿಗೆ ಮನೆ ಇರಲಿಲ್ಲ: ಅವರೆಲ್ಲ ಸಿರಿಯನ್ನರು.
ಮೂರು ಮಿಲಿಯನ್ನಷ್ಟು ಸಿರಿಯನ್ನರು, ಎತ್ತಲೂ ನಡೆಯಲಾಗದೆ, ತಳಮಳದಿಂದ ಕುದಿಯುತ್ತಿರುವ, ನಿರಾಶ್ರಿತರಾಗಿ, ಅವರ ದಿನನಿತ್ಯದ ಜೀವನ ಲಂಗರಿಲ್ಲದ ಹಡಗಿನಂತೆ, ಭರವಸೆಯಿಲ್ಲದೆ, ಮಧ್ಯಪ್ರಾಚ್ಯದಲೆಲ್ಲಾ ಹರಡಿದ್ದಾರೆ. ಬಹುಶಃ ಇನ್ನೂ ಹೆಚ್ಚಿರಬಹುದು. ಇರಾಕ್ನಲ್ಲಿ ನಡೆದ ಯುದ್ಧದ ಪರಿಣಾಮದಿಂದ ಹೊರಬಂದ ಇರಾಕಿಗಳಿರಬಹುದು, ಒಟ್ಟಿನಲ್ಲಿ ಈ ಭಾಗದಲ್ಲಿ ನಿರ್ಗತಿಕರು, ಸ್ಥಾನಪಲ್ಲಟಗೊಂಡ ಜನರೆಲ್ಲ ಸೇರಿ 5 ಮಿಲಿಯನ್ ಇರಬಹುದು. ನೀವೇನಾದರೂ ಈ ಸಾಮೂಹಿಕ ವಲಸೆಗೂ ನಿಮಗೂ ಸಂಬಂಧವಿಲ್ಲವೆಂದು ಕೊಂಡರೆ, ನೀವು ಮೂರ್ಖರೇ ಸರಿ. ಈ ಘೋರ ವಿಪತ್ತಿನ ಅಡ್ಡ ಪರಿಣಾಮದಿಂದ ನಿಮ್ಮ ಮೊಮ್ಮಕ್ಕಳು ಕೈಕೈ ಮಿಲಾಯಿಸಿ ಹೊಡೆದಾಡುತ್ತಾರೆ.
ಇಸ್ಮಾಯಿಲ್ ಎಂಬ ಸಣಕಲು ಮನುಷ್ಯ ನಿರಾಶ್ರಿತರಿಂದ ತುಂಬಿ ತುಳುಕುತ್ತಿದ್ದ ನಗರದ ಪರಿತ್ಯಜಿಸಿದ್ದ ತರಕಾರಿ ಮಾರುಕಟ್ಟೆಯಲ್ಲಿ ಅವನ ಕುಟುಂಬದೊಡನೆ ಕುಳಿತಿದ್ದ. ಆತ ತನ್ನ 20 ಇತರೆ ಮಂದಿಯೊಂದಿಗೆ ಇಸ್ಲಾಮಿಸ್ಟ್ ಉಗ್ರರನ್ನು ಎದುರಿಸಿದ್ದ. ಅವನ ಹಳ್ಳಿಯ ಹೆಸರು ಗ್ಸೆನೇಕ್. ಕರ್ಡಿಷ್ ಸೇನಾತುಕಡಿಗಳ ಸ್ಥಾನ ಎರಡು ದಿನಗಳ ಮೊದಲೆ ಮುಚ್ಚಿಹೋಗಿತ್ತು. “ಅವರ ಹತ್ತಿರ ಟ್ಯಾಂಕ್ಗಳು ಮತ್ತು ಸಶಸ್ತ್ರ ವಾಹನಗಳಿದ್ದವು,” ಎಂದು ಹೇಳಿದ. ಆಯಾಸಗೊಂಡಿದ್ದ, ನೆಲವನ್ನೆ ದಿಟ್ಟಿಸಿ ನೋಡುತ್ತಿದ್ದ. “ನಮ್ಮ ಹತ್ತಿರ ಕಲಶ್ನಿಕೋವ್ ಬಂದೂಕುಗಳು ಮಾತ್ರ ಇದ್ದವು.” ಅವರ ಹತ್ತಿರ ಇದ್ದ ಯುದ್ಧ ಟ್ಯಾಂಕ್ಗಳು. ಬಹುಶಃ ಹಿಮ್ಮೆಟ್ಟಿದ ಇರಾಕಿ ಸೈನಿಕರು ಬಿಟ್ಟು ಹೋಗಿದ್ದ ಅಮೇರಿಕದ ಸುಸಜ್ಜಿತ ವಾಹನಗಳು. ಅವನ ಸೋದರನನ್ನು ಸೆರೆಹಿಡಿದಿದ್ದಾರೆ. ಅವನ ಸೆಲ್ಫೋನಿಗೆ ಮೇಲಿಂದ ಮೇಲೆ ಕರೆ ಮಾಡುತ್ತಿದ್ದರೂ ಅಲ್ಲಿಂದ ಉತ್ತರವಿಲ್ಲ.
A family of Syrian refugees now living in an abandoned gas station enjoy tea given to them by a local Turkish family in Suric.
John Stanmeyer/VII/National Geographic
ನಾನು ಬರೆದುಕೊಳ್ಳುವುದನ್ನು ನೋಡಿ “ಇದೆಲ್ಲಾ ಏತಕ್ಕೆ?” ಎಂದು ಕೇಳಿದ. ಇದರಿಂದ ಏನೂ ಉಪಯೋಗವಿಲ್ಲವೆಂಬಂತೆ ಕೈಯಾಡಿಸಿದ. “ಇದರಿಂದ ನಮಗೇನು ಉಪಯೋಗ?” ಆತನ ಸಹೋದರನ ಹೆಂಡತಿ, ಸುಕ್ಕುಗಟ್ಟಿದ್ದಾಕೆ, ಕೆಂಪು ಬಟ್ಟೆ ದರಿಸಿದ್ದವಳು, ಗೋಳಾಡಲು ಶುರುಮಾಡಿದಳು.
