ಸಿರಿಯನ್ನರು ಟರ್ಕಿಯ ಗಡಿಭಾಗದ ವ್ಯವಸಾಯದ ಭೂಮಿಯಲ್ಲಿ ಜೋಡಿಸಿರುವ ಹಡಗುಗಳ ಕಂಟೇನರ್ಗಳಲ್ಲಿ ಹಗಲು ರಾತ್ರಿಯೆನ್ನದೆ ಜೀವನ ಕಳೆಯುತ್ತಿದ್ದಾರೆ.
ಇದೊಂದು ಮಾದರಿ ನಿರಾಶ್ರಿತರ ಶಿಬಿರ, ಕಿಲಿಸ್.
ಇಲ್ಲಿ ಶಾಲೆಗಳಿವೆ. ಒಂದು ಆಧುನಿಕ ಸೂಪರ್ ಮಾರ್ಕೆಟ್ ಸರ್ಕಾರಿ - ಅನುಧಾನಿತ ಡೆಬಿಟ್ ಕಾರ್ಡ್ ಗಳನ್ನು ಶಿಬಿರದ ನಿರಾಶ್ರಿತರಿಗೆ ಕೊಟ್ಟಿದೆ. ಈ ನಿರಾಶ್ರಿತರ ಮಾರುಕಟ್ಟೆಯಲ್ಲಿ ಕ್ಷೌರದಂಗಡಿ, ಚಹಾ ಅಂಗಡಿ, ಹಾಡು ಹಕ್ಕಿಗಳ ಅಂಗಡಿಗಳಿವೆ. ವಾಸಿಸಲು ಯೋಗ್ಯವಾದ ಶಿಬಿರ ಡಬ್ಬಗಳು, ಶುಚಿಯಾಗಿದ್ದವು ಮತ್ತು ಟೆಲಿವಿಷನ್ ಸೆಟ್ಗಳನ್ನು ಹೊಂದಿದ್ದವು. ಶಿಬಿರಗಳ ಮಧ್ಯೆ ಇರುವ ನಡೆದಾಡುವ ದಾರಿಗಳು ಅಚ್ಚುಕಟ್ಟಾಗಿ ನಿರ್ಮಿಸಲ್ಪಟ್ಟಿತ್ತು. ಬೇರೆ ಬೇರೆ ರಾಷ್ಟ್ರಗಳ ಮಾನವ ಶಾಸ್ತ್ರಜ್ಞರ ತಂಡಗಳು ಕಿಲಿಸ್ನಲ್ಲಿದ್ದವು. ಅಲ್ಲಿರುವ ಸುವ್ಯವಸ್ಥೆಯನ್ನು ಗಮನಿಸಿ ದಂಗುಬಡಿದು ಹೋಗಿದ್ದರು. ತುರ್ಕರ ವಿಶಾಲ ಮನೋಭಾವಕ್ಕೆ ಶರಣಾಗಿದ್ದರು.
ಸಿರಿಯಾದಿಂದ ಗೊತ್ತು ಗುರಿಯಿಲ್ಲದೆ ಅಲೆಯುತ್ತಾ ಮೂರುವರ್ಷಗಳ ಹಿಂದೆ ಬಂದ ತೀವ್ರವಾಗಿ ಬಳಲಿದ್ದ ಮೊದಲ 252 ನಿರಾಶ್ರಿತರ ಗುಂಪು, ಕಿಲಿಸ್ ಈಗ ಸಮಸ್ಯೆಯ ಸಂಕೇತವಾಗಿದೆ, ಪರಿಹಾರವಲ್ಲ.
Mohammed Nasuh in the Kilis refugee camp. His wife Amina weeps.
Paul Salopek
ಇಂದು, ಶಿಬಿರ ಮೇರೆ ಮೀರಿದ ಒತ್ತಡದಲ್ಲಿದೆ. ಇದು 14,000 ಜನರಿಗೆ ಆಶ್ರಯತಾಣವಾಗಿದೆ - ಯುದ್ಧ ಭೂಮಿಯಿಂದ ಆಶ್ರಯ ತಾಣವನ್ನು ಅರಸುತ್ತಾ ಬಂದ ಸುಮಾರು 1.3 ಮಿಲಿಯನ್ ನಿರಾಶ್ರಿತರ ಒಂದು ತುಣುಕಷ್ಟೆ. ಟರ್ಕಿ ರಾಷ್ಟ್ರ ನಿರಾಶ್ರಿತರಿಗೆಂದು ವಸತಿ ಮತ್ತು ಊಟ ಕಲ್ಪಿಸಲು ಬಿಲಿಯನ್ ಡಾಲರ್ಗಳಷ್ಟು ಖರ್ಚುಮಾಡಿದೆ. ಸರ್ವಾಧಿಕಾರಿ ಅಸಾದ್ನ ವಿರುದ್ಧ ದೇಶದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧ ಹೆಚ್ಚು ಕಾಲ ಇರುವುದಿಲ್ಲ ಎಂದು ಟರ್ಕಿದೇಶ ಭಾವಿಸಿತ್ತು; ಮತ್ತೆ ಸಿರಿಯಾಕ್ಕೆ ನಿರಾಶ್ರಿತರೆಲ್ಲ ಹಿಂದಿರುಗಿ ಎಂದೆಂದಿಗೂ ಟರ್ಕಿ ದೇಶಕ್ಕೆ ಕೃತಜ್ಞರಾಗಿರುವರು ಎಂದು ತಿಳಿದಿತ್ತು. ಆದರೆ ಯುದ್ಧ ಮುಂದುವರೆದಿದೆ. ನಿರಾಶ್ರಿತರನ್ನು ಸ್ವಾಗತಿಸುವ ಮನಸ್ಸು ಗಡಸಾಗುತ್ತಿದೆ. ಸಿರಿಯನ್ನರ ವಿರುದ್ಧ ಪ್ರತಿಭಟನೆ ಟರ್ಕಿ ನಗರಗಳಲ್ಲಿ ಹೆಚ್ಚಾಗುತ್ತಿದೆ. ಆದರೂ ನಿರಾಶ್ರಿತರ ವಲಸೆ ನಿಂತಿಲ್ಲ: ಕಳೆದ ವಾರದಲ್ಲೇ ಸುಮಾರು 160,000ರಷ್ಟು ಕರ್ಡ್ ಜನಾಂಗದವರು ಇಸ್ಲಾಮಿಕ್ ಸೇನೆಯ ಅತಿಕ್ರಮಣದಿಂದ ಚೆಲ್ಲಾಪಿಲ್ಲಿಯಾಗಿ ಗೊತ್ತು ಗುರಿಯಿಲ್ಲದೆ ಗಡಿ ದಾಟಿ ಬಂದಿದ್ದಾರೆ. ಹೊಸದಾಗಿ ಇಸ್ಲಾಮಿಕ್ ಸೇನೆಯ ಮೇಲೆ ನಡೆಯುತ್ತಿರುವ ಅಮೆರಿಕ ನೇತೃತ್ವದ ಬಾಂಬ್ ದಾಳಿಯಿಂದ ಈ ಮಾನವ ಪ್ರವಾಹಕ್ಕೆ ತಡೆಯಿಲ್ಲವಾಗಿದೆ.
“ನಾವು ಕಾಯುತ್ತೇವೆ,” ಎಂದ ಮೊಹಮ್ಮದ್ ನಸುಹಾ, ಕಿಲಿಸ್ ನಿರಾಶ್ರಿತರ ಶಿಬಿರದಲ್ಲಿ ತನ್ನ ಕುಟುಂಬದೊಡನೆ ಒಂದು ವರ್ಷದಿಂದ ನೆಲೆಸಿರುವ ಈತ, ಸಿರಿಯಾದ ಮಾಜಿ ಕರ್ನಲ್. “ತಿನ್ನುವುದು. ಮಲಗುವುದು. ಸುಮ್ಮನೆ ಕಾಲ ಕಳೆಯುವುದು. ನಾನು ಯಾವ ಕೆಲಸವನ್ನಾದರೂ ನಿರ್ವಹಿಸಲು ತಯಾರಿದ್ದೇನೆ. ಶೌಚಾಲಯ ತೊಳೆಯುವ ಕೆಲಸ ಮಾಡುವೆ. ನಾನು ಎಲ್ಲಿಗಾದರೂ ತೆರಳಲು ಸಿದ್ಧ. ಖಂಡಿತಾ ಇದು ಜೀವನವಲ್ಲ.”
The lucky ones: Children displaced by the civil war in Syria sing their national anthem in a refugee school operated by the Turkish government. After more than three years of fighting, the the cost of such facilities is no longer sustainable. Kilis camp, Turkey.
Video by Paul Salopek, Adam Jabari Jefferson
