ನೊಡಾರ್ ಹೇಳುತ್ತಾನೆ: ನಿಲ್ಲು.
ನಿಲ್ಲಿಸುವುದು ಒಳ್ಳೆಯದು, ಅವನು ಹೇಳುತ್ತಾನೆ.
ಏಕೆ? ಏಕೆಂದರೆ ಜೀವಿತದ ಅವಧಿ ಹೆಚ್ಚಿಲ್ಲ, ಹಾಗೂ ಗೆಳೆತನ ಮಾತ್ರ ಉಳಿಯುವುದು. ಗೆಳೆತನವೆಂಬುದು ಬಹುಶಃ ಜೀವನದ ಅತ್ಯಮೂಲ್ಯ ಭಂಡಾರ, ನೊಡಾರ್ ಹೇಳುತ್ತಾನೆ. ಅದಕ್ಕೆ ಬೆಲೆ ಕಟ್ಟಲಾಗದು. ಮತ್ತು ಪ್ರೀತಿಯ ಎಲ್ಲ ಪ್ರಾಕಾರಗಳಿಗೂ ಮಿಗಿಲಾಗಿದ್ದು. ಹೇಗೆ ಈ ಅತ್ಯಮೂಲ್ಯ ಆಭರಣವನ್ನು ಹೊಂದುವುದು,ಈ ಅಸಾಧಾರಣ ಬಹುಮಾನ - ಗೆಳೆತನವನ್ನು? ಹೇಗೆ ಸಂಭಾಳಿಸುವುದು? ನಿಲ್ಲುವುದರಿಂದ. ಬಿಡುವು ಕೊಡುವುದರಿಂದ. ಹಳೆಯ ಅರ್ಮೆನಿಯನ್ ಭಾಗದ ತಿಬಿಲಿಸಿಯಲ್ಲಿರುವ ನೊಡಾರ್ನ ಚಿಕ್ಕ ಕೆಫೆಗೆ ತೆರಳುವುದರಿಂದ. ಅಲ್ಲಿರುವ ಚಿಕ್ಕ ಮರದ ಮೇಜುಗಳಲ್ಲಿ ಕುಳಿತುಕೊಳ್ಳಬೇಕು. ಕಾಫಿಗಾಗಿ ವಿನಂತಿಸಿಕೊಳ್ಳಬೇಕು. ಅಥವಾ ಬಿಯರ್ಗೆ. ಅಥವಾ ಕುಡಿದ ನಂತರ ಜಾರ್ಜಿಯನ್ ಜೇಡಿ ಮಣ್ಣಿನ ರುಚಿತರುವ ಹಳದಿ ಕಾಕೇಷಿಯನ್ ದ್ರಾಕ್ಷಾರಸಕ್ಕೆ. ಆದರೆ ಅವ್ಯಾವುದೂ ಮುಖ್ಯವಲ್ಲ: ಪೋಷಿಸುವವರು ಮುಖ್ಯ. ದೇಶ ಭ್ರಷ್ಟರಾಗಿರುವ ಅಜರ್ಬೈಜಾನಿ ಪತ್ರಕರ್ತರಿರಬಹುದು, ಆಷ್ಟ್ರಿಯಾದ ಭಾಷಾ ಪಂಡಿತರಿರಬಹುದು. ಪ್ರೇಮ ವಿರಹದಲ್ಲಿರುವ ತುರ್ಕರಿರಬಹುದು. ಪ್ಯಾರಿಸ್ನಿಂದ ಒಬ್ಬ ಫ್ರೆಂಚ್ ಮನುಷ್ಯ ನೋಡಾರ್ನ ಕೆಫೆಗೆ ಬಂದಿದ್ದಾನೆ. ಒಬ್ಬ ಇರಾನಿಯನ್, ಕ್ರೇನ್ ಪಕ್ಷಿಯಂತೆ ಚಮಚ ಮತ್ತು ಬಿಳಿಲೋಟಗಳ ಜೊತೆ ನರ್ತಿಸುತ್ತಿದ್ದಾನೆ. ಆತನ ಮುಖದ ಮೇಲೆ ತರ್ಕಕ್ಕೆ ಮೀರಿದ ಹೊಳೆಯುವ ನಗುವಿತ್ತು. ಖಾಯಂ ಅತಿಥಿಗಳು.
“ಈ ಜನರು” – ನೊಡಾರ್ ಹೇಳುತ್ತಾನೆ, ನಗುತ್ತಾ ಕಣ್ಣು ಮುಚ್ಚಿಕೊಂಡು, ಬಾಹುಗಳನ್ನು ವಿಶಾಲವಾಗಿ ಹರಡಿ - "ಈ ಜನರೆಲ್ಲಾ ನನ್ನ ಸ್ನೇಹಿತರು. ನಿನ್ನ ಸ್ನೇಹಿತರೂ ಆಗಬಹುದು, ಅವರಿಗೆ ನಿನ್ನ ಪರಿಚಯ ಮಾಡಿಸಲು ಅನುಮತಿ ಕೊಡು."
ಹಾಗಾಗಿ ಜಾರ್ಜಿಯಾದ ಮುಟ್ ಕ್ವಾರಿ ನದಿಯ ದಂಡೆಯಲ್ಲಿ, ಕುಸಿಯುತ್ತಿದ್ದ ಫಿನ್ ಡಿ ಸಿಯಾಲ್ನ ಕಿತ್ತು ಬೀಳುತ್ತಿದ್ದ ಕಟ್ಟಡಗಳ ಮುಂಭಾಗದ ಕೆಳಗೆ, ಮಧ್ಯಕಾಲಿನ ಯುಗದ ಪುರಾತನ ಇಟ್ಟಿಗೆ ಕಟ್ಟಡದ ಗುಮ್ಮಟಗಳ ಸ್ಥಾನಗೃಹಗಳ ಹತ್ತಿರ, ಮತ್ತು ತಮಗೆ ತಾವೆ ಸುತ್ತಾಡುತ್ತಿದ್ದ ಬೀದಿನಾಯಿಗಳ ಗುಂಪಿನ ನಡುವೆ, ನಾನು ಕುಳಿತೆ, ಪಾನೀಯ ಕೊಡಲು ವಿನಂತಿಸಿದೆ. ನನ್ನ ಪ್ರಯಾಣವನ್ನು ಈ ಋತುವಿನಲ್ಲಿ ನಿಲ್ಲಿಸಿದೆ.
Urban pemmican, Tbilisi.
Paul Salopek
ದೀರ್ಘ ಇತಿಹಾಸವಿರುವ ಇರಾನಿನ ಮೂಲಕ ನಡೆಯಲು ಕಳೆದ ಎಂಟು ತಿಂಗಳಿಂದ ನ್ಯಾಷನಲ್ ಜಿಯಾಗ್ರಫಿಕ್, ನನ್ನ ಪರವಾಗಿ ವೀಸಾ ಅನುಮತಿಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಎಂಟು ತಿಂಗಳಿಂದ ಇರಾನಿನಿಂದ ಉತ್ತರವಿಲ್ಲ. ಈ ಸುದೀರ್ಘ ಮೌನದಿಂದ ಔಟ್ ಆಫ್ ಈಡನ್ ವಾಕ್ ಪಥವನ್ನು ಬದಲಿಸ ಬೇಕಾಗಿದೆ - ಯುರೇಷಿಯಾದ ಉತ್ತರ ಭಾಗದ ಉನ್ನತ ಮತ್ತು ಹೆಪ್ಪುಗಟ್ಟಿಸುವಂತಹ ಪರ್ವತಗಳ ನಡುವೆ ಪ್ರಯಾಣಿಸುವ ಅನಿವಾರ್ಯತೆ. ಒಪ್ಪಿಕೊಳ್ಳಲೇ ಬೇಕು. ಸಹಜವಾಗಿ: ಈ ಪ್ರಯಾಣ ಘಟಿಸುವುದೆ ದಕ್ಕುವ ಅವಕಾಶಗಳಿಂದ, ಮತ್ತು ಅಡೆತಡೆಗಳು ಈ ಕತೆಯ ಆಂತರಿಕ ಭಾಗ. ಆದರೀಗ, ಏಷ್ಯಾಗೆ ತೆರಳುವ ಅನುಕೂಲಕರ ದಾರಿ ಆರಂಭವಾಗುವುದೇ ಟುರ್ಕಮೆನಿಸ್ತಾನದ ವಿಶಾಲವಾದ ಕಾರಕುಮ್ನಿಂದ: ಜುಲೈ ನಲ್ಲಿ 130 ಡಿಗ್ರಿ ಫ್ಯಾರನ್ ಹೀಟ್ನಲ್ಲಿ ಕುದಿಯುವ ಕಪ್ಪು ಮರುಭೂಮಿ. ನನಗೆ ಬೇರೆ ದಾರಿಯಿಲ್ಲದೆ ಕಾಕಸಸ್ನ ಕ್ರೂರ ಬೇಸಿಗೆಯನ್ನು ಕಳೆಯುತ್ತಾ ಕಾಯಬೇಕಾಗಿದೆ.
Beaten to Georgia by 1.8 million years. Dmanisi humans at the Georgia National Museum, Tbilisi.
Paul Salopek
ಮುಂದಿನ 3ರಿಂದ 4 ತಿಂಗಳವರೆವಿಗೆ, ನೀವುಗಳು ಪ್ರಪಂಚದ ಉತ್ತಮ ಕವಲು ದಾರಿಗಳಾದ ಇಲ್ಲಿಂದ ನಮ್ಮ ಟಪಾಲುಗಳನ್ನು ಓದಬಹುದು. ಜಾರ್ಜಿಯಾ, ಅರ್ಮೇನಿಯಾ ಮತ್ತ ಅಜರ್ಬೈಜಾನ್ನಿಂದ.
The world is a circle: Mural of the Western (“Wailing”) Wall in Jerusalem— a walking landmark some 2,000 miles behind—plastered outside a synagogue in Tbilisi.
Paul Salopek
ಜೇನುತುಪ್ಪದಿಂದ ಸವರಲ್ಪಟ್ಟ ಕಂಚಿನ ಯುಗದ ಮುಖ್ಯಸ್ಥರಲ್ಲಿ ಈ ಕಥೆಗಳು ಗುರುತಿಸಲ್ಪಡುತ್ತವೆ. ಕಲೆಗಾರರ ಮತ್ತು ಚಿನ್ನದ ಗಣಿಗಾರರ ಬಗ್ಗೆ ಕಥೆಗಳಿವೆ. 1.8 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಿಂದ ಇಲ್ಲಿಗೆ ನಡೆದುಬಂದ ಆದಿಮಾನವರ ಬಗ್ಗೆಯೂ ಸಹ. ನಾವೀಗ ಆಡಮನ (ಈವ್ಳಿಂದಲ್ಲ) ಮುಂದಿನ ಜನಾಂಗವೆಂದು ನಂಬಿದ ಆಧುನಿಕ ಅಲೆಮಾರಿಗಳ ಜೊತೆ ನಡೆಯಲಿದ್ದೇವೆ. ಜಾರ್ಜಿಯಾದ ನನ್ನ ಹೊಸ ಸ್ನೇಹಿತ ಗುರಮ್ನ ಜೊತೆ ಒಂದು ನಗರ ಪ್ರದಕ್ಷಿಣೆ ಹಾಕೋಣ. ಆತ ತಿಬಿಲಿಸಿ ನಗರದ ಕಟ್ಟಡಗಳ ಮೇಲ್ಛಾವಣಿಯನ್ನು ಹಗ್ಗದಲ್ಲಿ ತೂಗಾಡುತ್ತಾ ರಿಪೇರಿ ಮಾಡುವಾತ. ಗುರಮ್ ನಡೆಯುವಾಗಲೆಲ್ಲ ತಲೆ ಮೇಲೆತ್ತಿ ನೋಡುತ್ತಾನೆ. ಅವನಿಗೆ ಈ ಪುರಾತನ ನಗರಿಯ ಬಗ್ಗೆ ಕಾಗೆಯಷ್ಟೆ ಜ್ಞಾನವಿದೆ. ಮೇಲ್ಛಾವಣಿಯಲ್ಲಿರುವ ಕೆಂಪು ಹೆಂಚುಗಳ ಮೇಲೆ ತುಕ್ಕು ಹಿಡಿದಿರುವ ತಗಡು, ಕಳೆದ ಮೂರು ಕ್ರಾಂತಿಗಳಲ್ಲಿ ವ್ಯಯ ಮಾಡಿದ ಬುಲೆಟ್ ಗುಂಡುಗಳನ್ನು ಕಂಡು ಹಿಡಿಯುತ್ತಾನೆ.
Ego, meet technology. Nothing really changes in the long journey of our wandering species.
Paul Salopek
ಕೊನೆಯ ಮನೆಗಳ ನಂತರ ಈ ಜಾಗತಿಕ ಯಾತ್ರೆ ಕಾಯುತ್ತಿದೆ. ನೊಡಾರ್ ತನ್ನ ಸ್ಥಳದ ಹೊಸ್ತಿಲಲ್ಲಿ ಸ್ವಾಗತಿಸುವಂತೆ ಅದು ಮೌನವಾಗಿ ಸಮ್ಮತಿ ಸೂಚಿಸುತ್ತದೆ - ಪರಿಚಿತ ಸ್ಥಳಕ್ಕೆ: ಬೆಚ್ಚಗಿನ, ಆತ್ಮಿಯವಾಗಿ ಸ್ವಾಗತಿಸುವ; ಮಸುಕಿನ ನಕ್ಷತ್ರಗಳು, ತೀವ್ರತೆಯ ಕಥೆಗಳ. ಗಾಢವಾದ ಸಂಪರ್ಕಗಳ ನಡಿಗೆಗೆ.
