ಅದನ್ನು- ಇಂಗ್ಲೀಷ್ ನಲ್ಲಿ, ಏನೆಂದು ಕರೆಯುವೆ?- ನರಮೇಧ? ಹೌದ? ಅದು ನರಮೇಧವೇ," ಮುರಾತ್ ಯಾಜ಼ರ್ ಹೇಳುತ್ತಾನೆ. "ಅದರ ಬಗ್ಗೆ ನನ್ನ ಅಜ್ಜಿ ನನ್ನ ತಾಯಿಗೆ ಹೇಳಿದ್ದರು."
ನನ್ನ ಚಾರಣದ ಮಾರ್ಗದರ್ಶಿ ಮತ್ತು ನಾನು ಅನಿಯ ಮೂಲಕ ಅಲೆದಾಡುತ್ತಿದ್ದೆವು.
ಅನಿ ಅಂದರೆ ಏನು? ಆಧುನಿಕ ಟರ್ಕಿಯಲ್ಲಿ ನಶಿಸಿಹೋದ ಪ್ರಪಂಚದ ಅವಶೇಷವದು: ಅಭುಕ್ತ ಮೂಲೆಯಲ್ಲಿ ಮರೆತುಹೋದ ನಾಗರೀಕತೆಯ, ಸುಂದರವಾದ ಸ್ಥಳ-1100 ವರ್ಷಗಳ ಹಿಂದಿನ ಒಂದು ಶಕ್ತಿಶಾಲಿ ಚಕ್ರಾಧಿಪತ್ಯದ ರಾಜಧಾನಿ. ಸಿಲ್ಕ್ ರಸ್ತೆಯ ಈ ನಗರದ ಭಗ್ನಾವಶೇಷಗಳು ಪೂರ್ವೋತ್ತರ ಅನಾಟೋಲಿಯದ ಆಕಾಶ ಬಡಿಯುವಂತಿದ್ದ ಬೆಟ್ಟಗುಡ್ಡಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಬಿರುಕುಬಿಟ್ಟ ಕೆಥೆಡ್ರಲ್ಗಳು. ಕುಸಿಯುತ್ತಿದ್ದ ಕೋಟೆ ಗೋಡೆಗಳು ಯಾವುದರಿಂದಲೂ ಏನನ್ನೂ ರಕ್ಷಿಸುತ್ತಿರಲಿಲ್ಲ. ಎಲ್ಲಿಗೂ ಹೋಗಲಾರದ ಖಾಲಿ ಖಾಲಿ ವಿಶಾಲ ಹೆದ್ದಾರಿಗಳು ಈ ಅಧ್ಬುತ ಅಸಾಮಾನ್ಯ ಏಕವರ್ಣ ಚಿತ್ರಗಳ ನಡುವೆ, ಭೀಕರ ಮೌನದಿಂದ ತುಂಬಿದ್ದ, ಡಾಲಿಯ ಕಲ್ಪನಾ ಲೋಕದ ಕಲಾ ಪ್ರಾಕಾರದಲ್ಲಿ, ವರ್ಣ ಲೇಪಿಸಿದಂತೆ. ನಾನು ಮತ್ತು ಮುರಾತ್ ಅಲೆದಾಡಿದೆವು. ಅರ್ಮೇನಿಯನ್ನರು ಈ ಭೂಭಾಗದಿಂದ ಅದೃಶ್ಯರಾದ ಬಗ್ಗೆ ನಾವು ಮಾತನಾಡುತ್ತಿದ್ದೆವು.
Broken arch: a relic of ancient Ani on the closed Turkey-Armenia border.
Paul Salopek
1914ರಲ್ಲಿ, ಇಂದು ಟರ್ಕಿಯೆನಿಸಿಕೊಳ್ಳುವ ಭಾಗದಲ್ಲಿ ಎರಡು ದಶಲಕ್ಷ ಅರ್ಮೇನಿಯನ್ನರು ಜೀವಿಸುತ್ತಿದ್ದರು. ಮುಸ್ಲಿಮರ ಆಳ್ವಿಕೆಯಲ್ಲಿದ್ದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯವದು. ಅವರಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. 1922ರ ಹೊತ್ತಿಗೆ, 400,000 ಮಾತ್ರ ಉಳಿದಿದ್ದರು.
1.5 ದಶಲಕ್ಷಕ್ಕೂ ಮೇಲ್ಪಟ್ಟ ಜನರಿಗೆ, ಏನು ಸಂಭವಿಸಿತು? ಹೆಚ್ಚಿನಂಶ ಕೊಲ್ಲಲ್ಪಟ್ಟರು. ಇತಿಹಾಸಜ್ಞರು ಹೇಳುವಂತೆ, ಅವರನ್ನು ನಿರ್ಮೂಲನಗೊಳಿಸಲು ಗುರಿಮಾಡಲಾಯಿತು. ಬಂದೂಕಿನ ತುದಿಯ ಬೆದರಿಕೆಯಲ್ಲಿ ನೀರಿಲ್ಲದ ಮರುಭೂಮಿಯೆಡೆ, ಅವರನ್ನು ನಡೆಸಲಾಯಿತು. ಅವರೆಲ್ಲರೂ ಸಾಮೂಹಿಕ ಹತ್ಯೆಯಾದರು.
"ಎಲ್ಲ ಅರ್ಮೇನಿಯನ್ನರನ್ನು ಯೂಫ್ರಟಿಸ್ ನದಿಯ ಹತ್ತಿರದ ಮನೆಗಳಲ್ಲಿ ಕೂಡಿ ಹಾಕಲಾಯಿತು , ನಂತರ ಅವರೆಲ್ಲರನ್ನು ರಾತ್ರಿಯಲ್ಲಿ ನದಿಗೆ ತಳ್ಳಲಾಯಿತು. ಅವರೆಲ್ಲರನ್ನು ನೀರಿನಲ್ಲಿ ಮುಳುಗಿಸಿದರು, ಎಂದು ನನ್ನ ಅಜ್ಜಿ ಹೇಳುತ್ತಿದ್ದರು" ಎಂದು ಮುರಾತ್ ನನಗೆ ಹೇಳಿದ.
ಮೊದಲನೆ ವಿಶ್ವ ಮಹಾಯುದ್ಧಕ್ಕೆ ಎಂಟುತಿಂಗಳಿತ್ತು, ಯೂರೋಪ್ ಅದಾಗಲೆ ತನ್ನನ್ನೇ ಭಕ್ಷಿಸಲು ಆರಂಭಿಸಿತ್ತು. ಬಹು ಸಂಸ್ಕೃತಿಯ ಓಟ್ಟೋಮನ್ ಚಕ್ರಾಧಿಪತ್ಯ ಭೀಕರ ಉದ್ರೇಕದಿಂದ ಅಳಿಯುತ್ತಿತ್ತು. ಓಟ್ಟೋಮನ್ ಟರ್ಕಿಯ ಬಹುಸಂಖ್ಯಾತರು- ತಮ್ಮ ರಾಷ್ಟ್ರನಾಯಕರ ಶಿಸ್ತಿನ ಆದೇಶಗಳು ಮತ್ತು ರಾಜ್ಯದ ಗಡಿಯ ಪ್ರದೇಶದಲ್ಲಿದ್ದ ಕ್ರಿಶ್ಚಿಯನ್ನರು ಸಹಬಾಳ್ವೆ ನಡೆಸುತ್ತಿದ್ದ ಮುಸ್ಲಿಮರ, ಮೇಲೆ ತೋರಿದ ದೌರ್ಜನ್ಯ, ಹತ್ಯಾಕಾಂಡ ಮತ್ತು ಸಾಮೂಹಿಕ ಬಹಿಷ್ಕಾರಗಳಿಂದ ಉದ್ರಿಕ್ತಗೊಂಡು- ಪುರಾತನ ಕಾಲದಿಂದ ನೆರೆಯವರಾಗಿದ್ದ; ಅಲ್ಪಸಂಖ್ಯಾತ ಅಸ್ಸಿರಿಯನ್ನರು ಮತ್ತು ಗ್ರೀಕರು, ಆದ ಹೆಚ್ಚು ಭಾಗ ಅರ್ಮೇನಿಯನ್ನರ ವಿರುದ್ದ ಹಗೆ ಸಾಧಿಸಿದರು. ಅವರು ಅರ್ಮೇನಿಯನ್ನರನ್ನು ನಾಸ್ತಿಕರೆಂದು ಆರೋಪಿಸಿದರು. ವಿಶ್ವಾಸ ಘಾತುಕರೆಂದು ದೂರಿದರು. ಸಾಮ್ರಾಜ್ಯವನ್ನು ಕಬಳಿಸಲು ಹೊಂಚುಹಾಕಿ, ಒಂದುಗೂಡಿದ್ದ (ರಷ್ಯನ್ನರು ಮತ್ತು ವಸಾಹತುಷಾಹಿ ಯುರೋಪಿಯನ್ನರು) ವರ ಪರವಾಗಿದ್ದಾರೆಂದು ಈ ಘೋರ ದುಷ್ಕೃತ್ಯದ ಕತ್ತಿಯ ಕೈಗಳು? ಸ್ಥಳೀಯ ಕರ್ಡರು. ಅರ್ಮೇನಿಯನ್ನರನ್ನು ಸಾಮೂಹಿಕವಾಗಿ ಗುಂಡಿಟ್ಟು ಹಾಗೂ ಕೊಚ್ಚಿ ಹತ್ಯೆಗೈದರು. ಕರ್ಡಿಷ್ ಗುಂಪುಗಳು, ಹಸಿದಿದ್ದ ಅರ್ಮೇನಿಯನ್ ಹೆಂಗಸು ಮತ್ತು ಮಕ್ಕಳ ನಿರಾಶ್ರಿತರ ಪ್ರದೇಶಗಳಿಗೆ ನಿರ್ದಾಕ್ಷಿಣ್ಯವಾಗಿ ನುಗ್ಗುತ್ತಿದ್ದರು. ಕರ್ಡ್ ಗ್ರಾಮಸ್ಥರು, ಅರ್ಮೇನಿಯನ್ನರು ತ್ಯಜಿಸಿಹೋದ ವ್ಯವಸಾಯ ಭೂಪ್ರದೇಶವನ್ನು, ಪ್ರಾಣಿಪಕ್ಷಿಗಳ ಮಂದೆಗಳನ್ನು ಮತ್ತು ಮನೆಗಳನ್ನು ವಶಪಡಿಸಿಕೊಂಡರು.
ಕ್ಷೀಣವಾಗಿ ಅನುರಣಿಸುತ್ತಿದ್ದ ದಾರುಣ ವ್ಯಥೆಯ ಮೂಲಕ ನಡೆಯುತ್ತಿದ್ದೆವು. ಮುರಾತ್ ಮತ್ತು ನಾನು, ಅನಾಟೋಲಿಯದ ಅಡ್ಡಹಾಯುತ್ತಿದ್ದೆವು. ಅರ್ಮೇನಿಯನ್ನರ ಪರಿತ್ಯಕ್ತ ಮನೆಗಳಲ್ಲಿ ನೆರಳಿಗಾಗಿ ಅರಸುತ್ತಿದ್ದೆವು. ಕಳೆಗಳು ತುಂಬಿ, ಮರಗಳು ಬೆಳೆದ ಮನೆಗಳು, ಮಸೀದಿಗಳಾಗಿ ಪರಿವರ್ತಿತವಾದ ಗಟ್ಟಿಮುಟ್ಟಾದ ಚರ್ಚ್ಗಳನ್ನು ದಾಟಿದೆವು. ಬಹಳ ಹಿಂದೆ ಈ ಅತಿಕ್ರಮಣದಲ್ಲಿ ಬಲಿಯಾದವರು ನೆಟ್ಟಿದ್ದ ವಾಲ್ನಟ್ ತೋಟಗಳನ್ನು ಬಳಸಿ ನಡೆದೆವು. ಮುರಾತ್ ಈ ಬಗ್ಗೆ ಕೊರಗುತ್ತಿದ್ದ. ಆತ ಕರ್ಡ್, ಇತಿಹಾಸದೊಡನೆ ಅವನ ತಾಕಲಾಟವನ್ನು ನಾನು ಗಮನಿಸುತ್ತಿದ್ದೆ, ಅವನೆಂದೂ ಕಲ್ಪಿಸಿಕೊಳ್ಳಲಾಗದ ಈ ಪಾರಂಪರಿಕ ಸ್ವತ್ತಿನೊಡನೆ, ತೀವ್ರವಾಗಿ ಕಾಡುವ ಭೂಭಾಗದೊಡನೆ.
"ಒಮ್ಮೆ, ಇಸ್ತಾಂಬುಲ್ ನಲ್ಲಿ ಒಬ್ಬ ಅರ್ಮೇನಿಯನ್ ಮನುಷ್ಯನಲ್ಲಿ, ಕ್ಷಮೆ ಯಾಚಿಸಿದೆ,” ಆತ ನನಗೆ ಹೇಳಿದ. "ನನ್ನ ಪೂರ್ವಜರು ನಡೆಸಿದ ಕೃತ್ಯಕ್ಕಾಗಿ ನಿನ್ನಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಆತನಿಗೆ ಹೇಳಿದೆ.”
ಆ ಮನುಷ್ಯ ಹೇಗೆ ಪ್ರತಿಕ್ರಿಯಿಸಿದ?
"ಆತನೇನು ಹೇಳಲು ಸಾಧ್ಯ?" ಮುರಾತ್ ಭುಜ ಕೊಡವಿ ಹೇಳಿದ. "ಆತ, ’ವಂದನೆಗಳು ನಿನಗೆ’, ಎಂದ."
ನಾವು ಶೀತ ಮಾರುತದಲ್ಲಿ ನಿಂತಿದ್ದೆವು. ಅನಿಯ ಪುರಾತತ್ವ ಅವಶೇಷಗಳ ಕತೆಯನ್ನು ವಿವರಿಸುವ ಬೃಹತ್ ಫಲಕವೊಂದು ಪ್ರವೇಶ ದ್ವಾರದಲ್ಲಿತ್ತು. ಬಗ್ರೇಷಿಯನ್ ರಾಜರುಗಳ ಆಳ್ವಿಕೆಯಲ್ಲಿ ವಿಕಸಿಸಿದ ಮತ್ತು ವಿಸ್ತಾರವಾದ ಮಹಾನಗರವೆಂದು ಬರಹ ತಿಳಿಸುತ್ತಿತ್ತು. ಬಗ್ರೇಷಿಯನ್ನರೆಂದರೆ ಅರ್ಮೇನಿಯನ್ನರು, ಎಲ್ಲೂ ಸಹ ಅರ್ಮೇನಿಯನ್ ಎಂಬ ಪದ ಬಳಸಲ್ಪಟ್ಟಿರಲಿಲ್ಲ. * 1915ರಲ್ಲಿ ನಡೆದ ಘಟನೆಯನ್ನು ನರಮೇಧವೆಂದು ಬಣ್ಣಿಸುವುದು, ಬಹಳ ವರ್ಷಗಳ ಕಾಲ ಟರ್ಕಿಯಲ್ಲಿ ಅಪಾಯಕಾರಿಯಾಗಿತ್ತು. ಟರ್ಕಿಯ ನ್ಯಾಯಾಧೀಶರುಗಳು ಈ ವಿಶೇಷಣವನ್ನು (ಪದವನ್ನು) ಪ್ರಚೋದಕ, ಉದ್ರೇಕಕಾರಿ, ಅಪಮಾನಿಸುವ ವಿಷಯವೆಂದು ಬಹಿಷ್ಕರಿಸಿದ್ದರು. ಈ ಮೂರೂ ಉಚ್ಛಾರಣೆಯನ್ನು ಬಳಸುವ ಟರ್ಕಿಯ ಬರಹಗಾರರು ಮತ್ತು ಪತ್ರಿಕೋದ್ಯಮಿಗಳನ್ನು ಆಡಳಿತ ನಿಂದಕರೆಂದು ನಿರ್ಣಯಿಸಿ ಶಿಕ್ಷೆಗೊಳಪಡಿಸುತ್ತಿದ್ದರು. ತೀವ್ರ ರಾಷ್ಟ್ರೀಯವಾದಿಗಳು ಒಬ್ಬನನ್ನು ಹತ್ಯೆಮಾಡಿದ್ದರು.
ಈ ಘಟನೆಗಳಿಗೆ ಅಧಿಕೃತ ವಿವರಣೆ ಬೇರೆಯೆ ಇದೆ. ಹೀಗೆಂದು ಹೇಳುತ್ತಾರೆ: ಅರ್ಮೇನಿಯನ್ನರು ಅನುಭವಿಸಿದರು, ಇದೊಂದು ತಳ್ಳಿಹಾಕಲಾಗದ ಸತ್ಯ, ಆದರೆ ಓಟ್ಟೋಮನ್ ಸಾಮ್ರಾಜ್ಯ, ಛಿದ್ರಗೊಳ್ಳುವ ಸಮಯದಲ್ಲಿ ಭಾರಿ ಹೊಡೆತವನ್ನು ತಿಂದ ಹಲವಾರು ಜನಾಂಗಗಳಲ್ಲಿ ಇದೊಂದಷ್ಟೆ, ಅವರ ವಿನಾಶ ತೀವ್ರವೂ ಅಲ್ಲ ಅಥವ ವ್ಯವಸ್ಥಿತವಾಗೂ ಇರಲಿಲ್ಲ, ಇದೊಂದು ಯುದ್ಧವಷ್ಟೆ. ಹಾಗೂ ಹಿಂಸೆ ಎರಡೂ ಕಡೆ ಹರಡಿದೆ. ಅರ್ಮೇನಿಯನ್ನರು ಅಳಿದಿದ್ದಾರೆ, ಬಂಡಾಯವೆದ್ದ ಅರ್ಮೇನಿಯನ್ ಗುಂಪುಗಳ ಕೈಯಲ್ಲಿ ತುರ್ಕರು ಸಹ ಅಳಿದಿದ್ದಾರೆ. ಇತಿಹಾಸ ತಿರುಚುವಿಕೆಯ ಈ ದುರಾಗ್ರಹದ ಓದುವಿಕೆ ಬಿರುಕು ಬಿಟ್ಟುಕೊಳ್ಳಲಾರಂಭಿಸಿದೆ. ಏಪ್ರಿಲ್ ನಲ್ಲಿ, ಅಂದಿನ ಟರ್ಕಿಯ ಪ್ರಧಾನ ಮಂತ್ರಿಗಳಾದ ರೆಸಿಪ್ ತಯಿಪ್ ಎರ್ಡೂಗನ್, ಟರ್ಕಿ ಯ ಅರ್ಮೇನಿಯನ್ ಸಂತತಿಯವರಿಗೆ ಔಪಚಾರಿಕವಾಗಿ ಸಂತಾಪವನ್ನು ವ್ಯಕ್ತಪಡಿಸಿದ ಮೊಟ್ಟಮೊದಲ ಟರ್ಕಿಯ ನಾಯಕ, ಈ ಸಂತತಿಯವರು ಇಂದು ವಿಶ್ವದೆಲ್ಲೆಡೆ ಚದುರಿದ್ದಾರೆ. "ನೋವಿನಲ್ಲಿ ಸಮಪಾಲು ಪಡೆದ" ಇಬ್ಬರ ಬಗ್ಗೆ ಬಹಳ ಜಾಗರೂಕತೆಯಿಂದ, ಮಾತನಾಡಿದ್ದಾರೆ.
ಅನಾಟೋಲಿಯಾದ ಕರ್ಡಿಶ್ ಒಳನಾಡಿನ ನಡುವೆ ನಡೆಯುವ ಸಾಮಾನ್ಯ ನಾಗರೀಕರು, ಈತನಿಗಿಂತ ಬಹಳ ಮುಂದಿರುವುದನ್ನು ಗ್ರಹಿಸಬಹುದಾಗಿದೆ.
"ನಾವು ಅರ್ಮೇನಿಯನ್ನರ ಜೊತೆ ಹೊಡೆದಾಡಿದ್ದೇವೆ, ಮತ್ತು ಹಲವರು ಸತ್ತರು," ಎಂದು ಕಾಸ್ ಕಲೆ ಹಳ್ಳಿಯ ಮುಖ್ಯಸ್ಥ ಬಿಳಿ ಕೂದಲಿನ ಸಲೆಹ್ ಎಮ್ರೆ ಹೇಳುತ್ತಿದ್ದ. "ಆದರೆ ಇದು ತಪ್ಪು. ಅವರು ಈ ನೆಲಕ್ಕೆ ಸೇರಿದವರು" ಎಂದು ಎಮ್ರೆ ಮಾತು ನಿಲ್ಲಿಸಿದ. ತನ್ನ ಒರಟಾದ ಕೈಗಳನ್ನು ಅವನ ಸಮುದಾಯದ ಮನೆಗಳತ್ತ ತೋರಿಸಿದ. "ನನ್ನ ತಂದೆಯ ಚಿಕ್ಕಪ್ಪ ದೊಡ್ಡಪ್ಪಂದಿರು ಕನಿಷ್ಟ ಬೆಲೆಯಲ್ಲಿ ಇದನ್ನು ಅರ್ಮೇನಿಯನ್ ವರ್ತಕನೊಬ್ಬನಿಂದ ಕೊಂಡುಕೊಂಡರು." ಕೊಟ್ಟ ವಿವರಗಳು ಜೀರ್ಣಿಸಿಕೊಳ್ಳಲು ಕಾಲಾವಕಾಶ ನೀಡಿದ. ನಂತರ ಒಂದುಕಾಲದಲ್ಲಿ ಅರ್ಮೇನಿಯನ್ನರಿಂದ ತುಂಬಿದ್ದು ಈಗ, ಟರ್ಕಿಯ ಹಳ್ಳಿಗಳಾಗಿರುವ ಹೆಸರುಗಳನ್ನು ಪಟ್ಟಿ ಮಾಡುತ್ತಾ ಬಂದ: ವ್ಯಾನ್, ಪಟ್ನೋಸ್, ಅಗ್ರಿ. ಇಲ್ಲಿ ಒಬ್ಬ ಅರ್ಮೇನಿಯನ್ ಸಹ ಜೀವಿಸುತ್ತಿಲ್ಲ. ನರಮೇಧದ ಪದ ಬಳಸದೆ ವಿವರಣೆ ನಿಲ್ಲಿಸಿದ.
ಈ ಮುದುಕ ಪಶ್ಚಿಮದ ಕಡೆಯ ಸೂರ್ಯನ ಕಿರಣಗಳೂ ಆವರಿಸಿದ ಬಯಲನ್ನು ದೃಷ್ಟಿಸುತ್ತಾ ಅಡ್ಡಲಾಗಿದ್ದ ಹಿತ್ತಾಳೆ ಬಣ್ಣದ ಹುಲ್ಲುಗಾವಲನ್ನು ಸ್ವರ್ಗಸದೃಶ ಹುಲ್ಲುಗಳು ಅವನ ಅಗೋಚರ ಸುದೀಪ್ತಿಯನ್ನು ಎಚ್ಚರಿಸಿದಂತೆ, ಬದುಕುಳಿದವರು ಪಲಾಯನಗೈದ ಹತ್ತಿರದ ದೇಶದ ಕಡೆ. "ನಾನು ಅರ್ಮೇನಿಯಾಗೆ ಭೇಟಿ ನೀಡಲು ಇಚ್ಛಿಸುತ್ತೇನೆ," ಎಮ್ರೆ ಹೇಳಿದ. "ಅರ್ಮೇನಿಯನ್ನರು ನಮ್ಮ ನೆರೆಹೊರೆಯವರು." * ದೃಶ್ಯ: ದಿಯಾರ್ ಬಾಕಿರ್ ನ ಚರ್ಚೊಂದರ ಪ್ರಾಂಗಣ, ಟರ್ಕಿಯ ಕರ್ಡರ ಸಾಂಸ್ಕೃತಿಕ ರಾಜಧಾನಿ.
ಸೌರ್ಪ್ ಗಿರಾಗೂಸ್. ಮಧ್ಯ ಪ್ರಾಚ್ಯದಲ್ಲೆ ಅತಿದೊಡ್ಡ ಅರ್ಮೇನಿಯನ್ನರ ಚರ್ಚ್. ಇಸ್ತಾನ್ಬುಲ್ ನಲ್ಲಿ ಉಳಿದಿರುವ ಅರ್ಮೇನಿಯನ್ ಸಮುದಾಯದವರು ಕೊಟ್ಟ ದೇಣಿಗೆಯಿಂದ ಹೊಸದಾಗಿ ನವೀಕರಿಸಲ್ಪಟ್ಟಿತ್ತು. ಇದು ಭರವಸೆಯ ಸ್ಮಾರಕ, ಸಾಮರಸ್ಯ ಮೂಡಿಸಲು, ಕಳೆದ ನೂರು ವರ್ಷಗಳಲ್ಲಿ ಇಂತಹು ದೊಂದೊಂದು ಸೂಚಕಗಳು ಅರ್ಮೇನಿಯಾದ ಕರ್ಡಿಷ್ ವಲಯದಲ್ಲಿ ಬೇರು ಬಿಡುತ್ತಿವೆ. (ಬಿಟ್ಲಿಸ್ ಎಂಬ ದೂರದೊಂದು ಪಟ್ಟಣದಲ್ಲಿ, ಅಲ್ಲಿಯ ಕರ್ಡಿಷ್ ಮಹಾಪೌರ, ಒಂದು ಬೀದಿಗೆ ಅರ್ಮೇನಿಯನ್-ಅಮೇರಿಕನ್ ಲೇಖಕ ವಿಲಿಯಮ್ ಸರೂಯನ್ ನ ಹೆಸರಿಟ್ಟಿದ್ದಾನೆ.) ಬೃಹತ್ ಗಂಟೆ ಗೋಪುರದಡಿಯಲ್ಲಿ ಜನರು ಗಜಿಬಿಜಿಯಿಂದಿದ್ದರು. ಅವರೆಲ್ಲಾ ಬಿದ್ದಿದ್ದ ಎಲೆಗಳನ್ನು ಗುಡಿಸುತ್ತಿದ್ದರು. ಹೊರಗಡೆಯ ಮೇಜಿಗೆ ಕಾಫಿಯನ್ನು ತಂದಿಡುತ್ತಿದ್ದರು. ಹರಟುತ್ತಿದ್ದರು. ಕೆಲವರು ಮೊಂಬತ್ತಿ ಬೆಳಗಿಸುತ್ತಿದ್ದರು. ಕೆಲವರು ಮುಸ್ಲಿಮರು, ಹೆಚ್ಚಿನವರು ಸಂಪ್ರದಾಯಸ್ಥ ಅರ್ಮೇನಿಯನ್ ಕ್ರಿಶ್ಚಿಯನ್ನರು. ಉಸ್ತುವಾರಿ ವಹಿಸಿದ್ದ ಅರಾಮ್ ಕಚಿಜಿಯಾನ್, ಎರಡೂ ಪಂಗಡಕ್ಕೆ ಸೇರಿದವ.
Custodian of memory: Aram Khatchigian in the rebuilt Sourp Giragos Armenian church in Diyarbakir, the Kurdish cultural capital in Turkey.
Murat Yazar
"15ನೆ ವಯಸ್ಸಿನ ತನಕ, ನಾನು ಕರ್ಡ್ ಮುಸ್ಲಿಮನೆಂದು ನಾನು ನಂಬಿದ್ದೆ," ಕಚಿಜಿಯಾನ್ ಹೇಳುತ್ತಿದ್ದ. "ನಂತರ, ನನ್ನ ಹೃದಯದಲ್ಲಿನ ಬದಲಾವಣೆಗಳು, ಅರಿವಿಗೆ ಬರಲಾರಂಬಿಸಿತು."
ತನ್ನ ಪೂರ್ವೋತಿಹಾಸವನ್ನು ಹೇಗೆ ಹುಡುಕಿದೆ ಎಂದು ವಿವರಿಸಿದ. ಅವನ ತಾತ 12 ವರುಷದ ಹುಡುಗ ಮತ್ತು ತಾತನ ಚಿಕ್ಕಸಹೋದರಿ 9 ವರ್ಷದ ಹುಡುಗಿ: ವಾಸ್ತವದಲ್ಲಿ ಅರ್ಮೇನಿಯನ್ನರು - "ಕೊಳೆತು ನಾರುತ್ತಿದ್ದ ಶವಗಳ ವಾಸನೆ" ತುಂಬಿದ್ದ ದಿಯಾರ ಬಾಕಿರ್ ನ ಮೃತ್ಯು ಕೂಪದ ಪ್ರದೇಶದಲ್ಲಿ ಒಂದೇ ಕುಟುಂಬದಲ್ಲಿಯ ಬದುಕುಳಿದವರಿಬ್ಬರು. ಪೊದೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ಈ ಹುಡುಗ ಮತ್ತು ಹುಡುಗಿಯನ್ನು ಕಂಡ ಒಬ್ಬ ಕರ್ಡಿಷ್ ರೈತ ಇವರ ಜೀವ ಉಳಿಸಿದ, ತನ್ನ ಮಕ್ಕಳೆಂದು ತಿಳಿದು ಅವರಿಗೆ ತನ್ನ ಹೆಸರನ್ನಿತ್ತ. ಅವರು ಮುಸ್ಲಿಮರಾಗಿ ಮತಾಂತರಗೊಂಡರು. "ಬದುಕುಳಿದ ಎಲ್ಲ ಅರ್ಮೇನಿಯನ್ನರು ಇದನ್ನೇ ಮಾಡಿದ್ದು," ಎಂದು ಕಚಿಜಿಯಾನ್ ಹೇಳಿದ. "ಇಲ್ಲದಿದ್ದರೆ ಅವರನ್ನೆಲ್ಲಾ ಸಾಯಿಸುತ್ತಿದ್ದರು." ಅಷ್ಟರಲ್ಲಿ ಒಬ್ಬ ಮನುಷ್ಯ ನಮ್ಮ ಮೇಜಿಗೆ ಗುಪ್ತವಾಗಿ ಸಮೀಪಿಸಿದ, ಆತ ಆಲಿಸುತ್ತಿದ್ದ.
"ನೀನು ನರಮೇಧವನ್ನು ಒಪ್ಪಿಕೊಳ್ಳುವೆಯಾ?" ಆತ ಒತ್ತಾಯಿಸಿದ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ.
ನಾನೊಂದು ಸಂದರ್ಶನ ಮಾಡುತ್ತಿದ್ದೆನೆಂದು, ನಾ ಅವನಿಗೆ ಹೇಳಿದೆ.
"ನಾನದನ್ನು ಲಕ್ಷಿಸುವುದಿಲ್ಲ," ಎಂದು ಹೇಳಿದ. "ನೀನು ನರಮೇಧವನ್ನು ಒಪ್ಪುತ್ತೀಯಾ ಇಲ್ಲವೋ?"
ಕೆಲವು ಅರ್ಮೇನಿಯನ್ನರಿಗೆ, ಕುದಿಯುತ್ತಿದ್ದ ಪ್ರಶ್ನೆಯೊಂದೆ, ಜೀವನವನ್ನು ಆವರಿಸಿತ್ತು. ರಾಷ್ಟ್ರೀಯ ಹೋರಾಟದ ಜೀವಾಳ, ಆಧುನಿಕ ಗುರುತು ಅಥವಾ ಅಸ್ತಿತ್ವ: ಟರ್ಕಿ ಮತ್ತು ಇತರೆ ಪ್ರಪಂಚ, ಕಟ್ಟಕಡೆಗೆ ನರಮೇಧದ ಸತ್ಯವನ್ನು ಅಂಗೀಕರಿಸಬೇಕು, ನ್ಯಾಯಯುತ ವಿವರಣೆಯುಳ್ಳ ನರಮೇಧ ಅನಾಟೋಲಿಯದಲ್ಲಿ ಅನಾವರಣಗೊಂಡಿದೆ ಎಂದು ಲಕ್ಷಗಟ್ಟಲೆ ಅರ್ಮೆನಿಯನ್ ಜನಾಂಗ ಈ ಕಾರ್ಯಚಟುವಟಿಕೆಗೆ ಪ್ರಭಾವ ಬೀರಲು ಅಗಾಧ ಪ್ರಮಾಣದ ಶಕ್ತಿ ಮತ್ತು ಹಣವನ್ನು ವ್ಯಯಮಾಡಿದ್ದಾರೆ. (ಕನಿಷ್ಠವೆಂದರೂ, 21 ರಾಷ್ಟ್ರಗಳು ಈಗ ಅಧಿಕೃತವಾಗಿ ಅರ್ಮೆನಿಯಾದ ನರಮೇಧ ಒಂದು ಕಟು ವಾಸ್ತವ ಎಂದು ಒಪ್ಪಿದ್ದಾರೆ. ಟರ್ಕಿಯೊಡನೆ ರಾಜತಾಂತ್ರಿಕ ಸಂಬಂಧವಿಟ್ಟುಕೊಂಡಿರುವ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಇಸ್ರೇಲ್ ಈ ಪಟ್ಟಿಯಲ್ಲಿ ಇಲ್ಲ.)
ಅರ್ಮೇನಿಯನ್ - ಅಮೆರಿಕನ್ ಬರಹಗಾರ್ತಿ ಮೆಲಿನ್ ಟೌಮನಿ, ಈ ಕಹಿ ರಾಜಕೀಯ ಚರ್ಚೆ ತನ್ನ ಜೀವನದಲ್ಲಿ ಉಸಿರುಗಟ್ಟಿಸುವಂತ ವಾತಾವರಣವನ್ನು ಹೇಗೆ ಉಂಟು ಮಾಡಿದೆ ಎಂದು ವಿವರಿಸಿದ್ದಾಳೆ:
"ಕೆಲವು ಅರ್ಮೇನಿಯನ್ನರಿಗೆ ಗುರುತಿಸುವುದು ಎಂದರೆ ಟರ್ಕಿಯು ನಷ್ಟಪರಿಹಾರಧನ ಕಟ್ಟಿಕೊಡುವುದು: ರಾಷ್ಟ್ರಾಭಿಮಾನಿಗಳಿಗೆ, ಭೂಮಿ; ಕೊಂಚ ವ್ಯವಹಾರಿಕ ದೃಷ್ಟಿಯುಳ್ಳವರಿಗೆ, ಹಣ. ಹೆಚ್ಚಿನವರಿಗೆ ಇದರ ಸರಳ ಅರ್ಥ ಅಧಿಕೃತವಾಗಿ ನರಮೇಧ ಎಂಬ ಪದ ಉಪಯೋಗಿಸುವುದು. ನನಗೆ, ಯಾವುದೇ ಅರ್ಮೇನಿಯನ್ ಸಂಘಟನೆಯಲ್ಲೂ ಇನ್ನು ಮುಂದೆ ಭಾಗವಹಿಸಲಾರದಂತ ಪರಿಸ್ಥಿತಿ, ಏಕೆಂದರೆ ಇದು ಕವಿತಾ ವಾಚನವಾಗಲಿ, ಸಂಗೀತ ಸಭೆಯಾಗಲಿ, ಅಥವಾ, ಆಟದ ಸ್ಪರ್ಧೆಯಾಗಲಿ ಇದು ಎಂದಿಗೂ ಅಂತಿಮವಾಗಿ, ನರಮೇಧದ ಬಗ್ಗೆಯೇ ಆಗಿರುವುದು."
ದಿಯಾರ್ ಬಾಕಿರ್ ನ ಚರ್ಚ್ನಲ್ಲಿ ಅಪರಿಚಿತ ನಮ್ಮ ನಡುವೆಯೇ ಕುಳಿತುಕೊಂಡ.
ಆತ ತನ್ನ ಪ್ರಶ್ನೆಯನ್ನು ಪದೆ ಪದೆ ಪುನಾರಾವರ್ತಿಸಿದ, ಕಚಿಜಿಯಾನ್ ಮುಜುಗರದಿಂದ ತನ್ನ
ಪಾದರಕ್ಷೆಗಳ ಕಡೆಗೆ ದೃಷ್ಟಿ ಬೀರುತ್ತಿದ್ದ. ನಾನು ನನ್ನ ಲೇಖನಿಯನ್ನು ಕೆಳಗಿಟ್ಟೆ, ನಾವು ಕಾದೆವು.
“I don’t care. Tell the world I’m Armenian.” But she changed her mind, and here in Dyarbakir she did not want her face to be photographed.
Murat Yazar
* * *
ಅನಿಯ, ಪುರಾತತ್ವಶಾಸ್ತ್ರದ ಪ್ರದೇಶದಲ್ಲಿ, ಒಂದು ಬೃಹತ್ ಕೆಂಪು ಬಣ್ಣದ ಟರ್ಕಿಯ ಧ್ವಜ ಹಾರಾಡುತ್ತಿತ್ತು.
ನಗರದ ಪುರಾತನ ಅವಶೇಷಗಳು ಕಣಿವೆಯ ಮುಂಚಾಚಿನ ಬಂಡೆಗಳ ಪದತದಲ್ಲಿತ್ತು. ಇನ್ನೊಂದೆಡೆಯಲ್ಲಿ, ಸುಲಭವಾಗಿ ನಡೆಯುವ ಅಂತರದಲ್ಲಿ, ಪುಟ್ಟ ಅರ್ಮೇನಿಯಾ ಗಣರಾಜ್ಯವಿತ್ತು. ಯಾರೂ ಎಂದೂ, ದಾಟುವುದಿಲ್ಲ. ಪರಸ್ಪರರ ಹಗೆತನ ಮತ್ತು ಸಂಶಯ ದಿಂದ ಎರಡೂ ದೇಶಗಳ ಗಡಿಭಾಗ, ವರ್ಷಗಳ ಹಿಂದೆಯೇ ಮುಚ್ಚಲ್ಪಟ್ಟಿದೆ, ಅನಿಯೇ ಅಂತ್ಯ.
ಉತ್ತರದ ಕಡೆಗೆ, ಮುರಾತ್ ಮತ್ತು ನಾನು ಮುನ್ನಡೆದೆವು.
ಕಾರ್ಸ್ ನ ಸುತ್ತಮುತ್ತಲಿನ ಅರೆಚಳಿಗಾಲದ, ಬಯಲಿನಲ್ಲಿ ನಮ್ಮ ಧೀರ ಹೇಸರಗತ್ತೆಗಳನ್ನು ಎಳೆಯುತ್ತಾ ಸಾಗಿದೆವು, 1890ರಲ್ಲಿ ಶೇಖಡಾ 85 % ಭಾಗ ಅರ್ಮೇನಿಯನ್ನರಿದ್ದ ಟರ್ಕಿಯ ನಗರ. ಇನ್ನು ಅರ್ಮೇನಿಯನ್ನರು ಅಲ್ಲಿದ್ದಾರೇನು ಎಂದು ಮುರಾತ್ ಅಲ್ಲಿನ ಬೆಚ್ಚಿದ್ದ ನಾಗರೀಕರನ್ನು ಕೇಳುತ್ತಿದ್ದ. ತನ್ನ ಸಾಂಸ್ಕೃತಿಕ ತಾಕಲಾಟದ ಪ್ರಶ್ನೆಗಳ ಜೊತೆ ಸೆಣಸುತ್ತಿದ್ದ ಟರ್ಕಿಯ ನಾಗರೀಕ ಮತ್ತು ಅಲ್ಪ ಸಂಖ್ಯಾತ ಕರ್ಡ್ ಆದ ಮುರಾತ್ ಯಾವಾಗಲೂ ಪ್ರಶ್ನಿಸುತ್ತಿದ್ದ. ಭೂತಕಾಲವನ್ನು ಕೆದಕುತ್ತಾ ಉತ್ತರಗಳನ್ನು ಹುಡುಕಲು ಪ್ರಯಾಸದಿಂದ ಯತ್ನಿಸುತಿದ್ದುದನ್ನು ಗಮನಿಸುತ್ತಿದ್ದೆ. ಆತ ನೀಳದೇಹದ, ಹಂಬಲಿಸುವ, ಪ್ರಶ್ನಿಸುವ, ಕ್ಯಾಮರಾವನ್ನು ತನ್ನ ಚರ್ಮದ ಅಂಗಿಯ ಬಗಲಿಗೆ ತೂಗು ಬಿಟ್ಟಿದ್ದ. ಅನಾಟೋಲಿಯದ ಕಪ್ಪು ಮಣ್ಣು ಅವನ ಬೂಟಿನ ಕೆಳಗೆ ಅಂಟಿಕೊಂಡಿತ್ತು. ನಾನು ಅಚ್ಚರಿಯಿಂದ ತಲೆಯಲ್ಲಾಡಿಸುವುದಷ್ಟೆ ಸಾಧ್ಯವಿತ್ತು.
ಕೊಲೆಗಾರರಾಗಲಿ ಅಥವಾ ಬಲಿಯಾದವರಾಗಲಿ, ಯಾರೂ ಆಯ್ಕೆಗೊಂಡ ವ್ಯಕ್ತಿಗಳಲ್ಲ, ಅವರೆಲ್ಲಾ ಸರಳ ಮನುಷ್ಯರಷ್ಟೇ. ಮತ್ತು ಸತ್ತವರು, ಮತ್ತು ನಿನ್ನ ನೋವಿನೊಡನೆ ನೀನೇನು ಮಾಡುತ್ತೀಯ ಅದು, ಪ್ರಪಂಚಕ್ಕೆ ನೀನಾರೆಂದು ತಿಳಿಸುವುದು.
